ನಿರ್ಮಾಪಕಿ, ಪುನೀತ್ ರಾಜ್ ಕುಮಾರ್ (Puneeth Rajkumar) ಪತ್ನಿ ಅಶ್ವಿನಿ (Ashwini) ಅವರ ಬಗ್ಗೆ ಕೆಟ್ಟದ್ದಾಗಿ , ಕೀಳು ಮಟ್ಟದಲ್ಲಿ ಪೋಸ್ಟರ್ (Poster) ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದವರ ವಿರುದ್ಧ ದೂರು ನೀಡಲು ಅಪ್ಪು ಅಭಿಮಾನಿಗಳು ನಿರ್ಧಾರ ಮಾಡಿದ್ದಾರೆ. ಜೊತೆಗೆ ಅಂಥವರ ವಿರುದ್ಧದ ಕ್ರಮಕ್ಕಾಗಿ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.
ಆರ್.ಸಿ.ಬಿ ಸೋಲಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾರಣ ಎಂದು ಕೀಳು ಮಟ್ಟದಲ್ಲಿ ಪೋಸ್ಟರ್ ಮಾಡಲಾಗಿದೆ. ಕೆಲ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅವುಗಳನ್ನು ಹಂಚಿಕೊಂಡು ವಿಕೃತಿ ಮೆರೆಯಲಾಗುತ್ತಿದೆ. ಈ ಕುರಿತಂತೆ ಅನೇಕರ ಧ್ವನಿ ಎತ್ತಿದ್ದಾರೆ. ಅವರು ಯಾರ ಅಭಿಮಾನಿಗಳೇ ಆಗಿರಲಿ, ಅಂಥವರ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿ ಬರುತ್ತಿದೆ.
ಅಶ್ವಿನಿ ಪುನೀತ್ ರಾಜ್ ಕುಮಾರ್ ಪರ ಸಾಕಷ್ಟು ಜನರು ಧ್ವನಿ ಎತ್ತಿದ್ದಾರೆ. ಅದರಲ್ಲೂ ಮಹಿಳಾ ಪರ ಸಂಘಟನೆಗಳು, ಹೋರಾಟಗಾರರು ಮತ್ತು ಬರಹಗಾರರು ಕೂಡ ಪೋಸ್ಟರ್ ವಿರುದ್ಧ ಧ್ವನಿ ಎತ್ತಿದ್ದಾರೆ. ಪೋಸ್ಟರ್ ಶೇರ್ ಮಾಡಿದ ಮತ್ತು ಹಂಚಿಕೊಂಡವರನ್ನು ಕೂಡಲೇ ಬಂಧಿಸಿ ಎನ್ನುವ ಮಾತುಗಳು ಕೇಳಿ ಬಂದಿವೆ.