DistrictsKarnatakaLatestMain PostRaichur

ಒಂದೇ ಸೀರೆಯಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಪ್ರೇಮಿಗಳಿಬ್ಬರ ಆತ್ಮಹತ್ಯೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಆರ್ ಹೆಚ್ ಕ್ಯಾಂಪ್-3ರ ಹೊರವಲಯದಲ್ಲಿ ಪ್ರೇಮಿಗಳಿಬ್ಬರು ಒಂದೇ ಸೀರೆಯಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಲವ್ ಸರ್ಕಾರ್ ಹಾಗೂ ಕರೀನಾ ಮೃತ ಪ್ರೇಮಿಗಳು. ಲವ್ ಸರ್ಕಾರ್‍ಗೆ ಎರಡು ತಿಂಗಳ ಹಿಂದೆ ಬೇರೊಬ್ಬ ಯುವತಿಯೊಂದಿಗೆ ಮದುವೆಯಾಗಿತ್ತು. ಲವ್ ಸರ್ಕಾರ ಬೇರೆ ಯುವತಿಯ ಜೊತೆ ಮದುವೆ ಆಗಿದ್ದಕ್ಕೆ ಕರೀನಾ ಮನನೊಂದಿದ್ದಳು. ಇದನ್ನೂ ಓದಿ: ತೇಜಸ್ವಿ ಸೂರ್ಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಮಹಿಳಾಮಣಿಗಳು

crime

ಇತ್ತ ಕರೀನಾಳನ್ನೂ ಬಿಟ್ಟಿರಲಾಗದ ಸ್ಥಿತಿಯಲ್ಲಿದ್ದ ಲವ್ ಸರ್ಕಾರ ಮಾನಸಿಕವಾಗಿ ಕುಗ್ಗಿದ್ದ. ಒಬ್ಬರನ್ನೊಬ್ಬರು ಬಿಟ್ಟಿರಲಾಗದೇ ಮನನೊಂದು ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಹಿನ್ನೆಲೆ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಧರ್ಮವೇ ಮುಖ್ಯ- ಹಾಲ್ ಟಿಕೆಟ್ ಪಡೆದರೂ ಪರೀಕ್ಷೆಗೆ ಬಾರದ ಉಡುಪಿಯ ಅಲ್ಮಾಸ್

Leave a Reply

Your email address will not be published.

Back to top button