ChikkamagaluruDistrictsKarnatakaLatestMain Post

ತೇಜಸ್ವಿ ಸೂರ್ಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಮಹಿಳಾಮಣಿಗಳು

ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಮಠದ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಮಹಿಳಾಮಣಿಗಳು ಸಂಸದ ತೇಜಸ್ವಿ ಸೂರ್ಯ ಜೊತೆ ಸೆಲ್ಫಿಗಾಗಿ ಮುಗಿಬಿದ್ದಿದ್ದರು.

ಕಳೆದ 12 ದಿನಗಳಿಂದ ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀಶಾರದಾ ಲಕ್ಷ್ಮಿ ನರಸಿಂಹಸ್ವಾಮಿ ದೇಗುಲದಲ್ಲಿ ಕುಂಭಾಭಿಷೇಕ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಸಂಸದ ತೇಜಸ್ವಿ ಸೂರ್ಯ ಕೂಡ ಆಗಮಿಸಿದ್ದರು. ಈ ವೇಳೆ ಸಂಸದರ ಜೊತೆ ಮಹಿಳೆಯರು ಸೆಲ್ಫಿಗಾಗಿ ಮುಗಿಬಿದ್ದಿದ್ದರು. ಇದನ್ನೂ ಓದಿ: ಧರ್ಮವೇ ಮುಖ್ಯ- ಹಾಲ್ ಟಿಕೆಟ್ ಪಡೆದರೂ ಪರೀಕ್ಷೆಗೆ ಬಾರದ ಉಡುಪಿಯ ಅಲ್ಮಾಸ್

ಒಬ್ಬರಾದ ಮೇಲೋಬ್ಬರಂತೆ ಸರ್.. ನಮ್ಮ ಜೊತೆ ಒಂದು.. ಸರ್.. ನಮ್ಮ ಜೊತೆ ಒಂದು ಎನ್ನುತ್ತಾ ಒಬ್ಬರಾದ ಫೋಟೋಗಾಗಿ ಕ್ಯೂ ನಿಂತರು. ತೇಜಸ್ವಿ ಸೂರ್ಯ ಸಾಕು ಬಿಡಿ. ಇದು ಧಾರ್ಮಿಕ ಕಾರ್ಯಕ್ರಮ ಎಂದರೂ ಬಿಡದೇ ಸರ್.. ಒಂದು, ಒಂದು ಎಂದು ಅಕ್ಕಪಕ್ಕದವರ ಕೈಯಲ್ಲಿ ಮೊಬೈಲ್ ಕೊಟ್ಟು ಫೋಟೋ ತೆಗೆಸಿಕೊಂಡರು. ತೇಜಸ್ವಿ, ಸಾಕು ಬಿಡಿ ಎಂದು ಬಂದವರಿಗೆಲ್ಲಾ ಕೈಮುಗಿದರೂ ಒಬ್ಬೊಬ್ಬರೇ ಬರುತ್ತಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‍ಗಾಗಿ ವೇದಿಕೆ ಮುಂಭಾಗದಲ್ಲೇ ಕಾಯುತ್ತಿದ್ದ ತೇಜಸ್ವಿಯನ್ನು ಕಂಡ ಮಹಿಳೆಯರು ವೇದಿಕೆ ಮುಂಭಾಗದಲ್ಲೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

ಮಹಿಳೆಯರ ಸರದಿ ಮುಗಿಯುತ್ತಿದ್ದಂತೆ ಆಮೇಲೆ ಪುರುಷರ ಸರದಿಯೂ ಶುರುವಾಗಿತ್ತು. ತೇಜಸ್ವಿ ಅವರು ಹೋಗಿ ಕೂತರೂ ಬಿಡದ ಜನ ಕೂತಲ್ಲೇ ಫೋಟೋ-ಸೆಲ್ಫಿ ಕ್ಲಿಕ್ಕಿಸಿಕೊಂಡರು. ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪ, ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ರವಿಸುಬ್ರಹ್ಮಣ್ಯ, ಅಶೋಕ್ ಹಾರ್ನಳ್ಳಿ ಉಪಸ್ಥಿತರಿದ್ದರು. ಇದನ್ನೂ ಓದಿ: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ – ಸ್ಫೋಟಕ ಆಡಿಯೋ ಔಟ್

Leave a Reply

Your email address will not be published.

Back to top button