ಬೆಂಗಳೂರು: ಪ್ರಿಯತಮೆಯ ಬೆತ್ತಲೆ ಫೋಟೋ ಹಾಗೂ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಹಾಕೋದಾಗಿ ಪ್ರಿಯಕರ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅರ್ಜುನ್ ಎಂಬಾತ ತನ್ನ ಪ್ರಿಯತಮೆಗೆ ಬೆದರಿಕೆ ಹಾಕಿದ್ದಾನೆ. ಒಂದು ವರ್ಷದಿಂದ ಅರ್ಜುನ್ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆಕೆಯ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದು ಹಣ ನೀಡದಿದ್ದರೆ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದನು.
Advertisement
Advertisement
ಈ ಹಿಂದೆಯೂ ಯುವತಿ ಅರ್ಜುನ್ ಬೆದರಿಕೆಗೆ ಹೆದರಿ 50 ಸಾವಿರ ರೂ. ಹಣ ನೀಡಿದ್ದಳು. ನಂತರ ಅರ್ಜುನ್ ಮತ್ತೆ 50 ಸಾವಿರ ರೂ. ಹಣವನ್ನು ಕೇಳಿದ್ದಾನೆ. ಆಗ ಯುವತಿ ಹಣ ನೀಡಲು ನಿರಾಕರಿಸಿದ್ದಾಳೆ.
Advertisement
Advertisement
ಈ ಹಿನ್ನೆಲೆಯಲ್ಲಿ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಅರ್ಜುನ್ ಬೆದರಿಕೆ ಹಾಕಿದ್ದು, ಇದರಿಂದ ಬೇಸತ್ತ ಯುವತಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.