BellaryCrimeDistrictsKarnatakaLatestMain Post

ಮಾಜಿ ಪ್ರೇಯಸಿಯ ರುಂಡ ಕಡಿದು, ಪೊಲೀಸ್ ಠಾಣೆಗೆ ತಂದ ಪಾಗಲ್ ಪ್ರೇಮಿ

Advertisements

ಬಳ್ಳಾರಿ: ಪಾಗಲ್ ಪ್ರೇಮಿಯೊಬ್ಬ ಮಾಜಿ ಪ್ರೇಯಸಿಯ ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆ ಗೈದಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ ನಡೆದಿದೆ.

ನಿರ್ಮಲಾ(23) ಕೊಲೆಯಾದ ಯುವತಿಯಾಗಿದ್ದಾರೆ. ಆರೋಪಿಯನ್ನು ಬೋಜರಾಜ ಎಂದು ಗುರುತಿಸಲಾಗಿದೆ. ಬಿಎಸ್‍ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ ಪರೀಕ್ಷೆ ಇದ್ದ ಹಿನ್ನೆಲೆ ಓದಲು ಊರಿಗೆ ಬಂದಿದ್ದರು. ಮೊದಲಿನಿಂದಲೂ ನಿರ್ಮಲಾಳನ್ನು ತನಗೆ ಮದುವೆ ಮಾಡಿಕೊಂಡುವಂತೆ ಬೋಜರಾಜ ಪೀಡಿಸುತ್ತಿದ್ದನು. ಆದರೆ ಇದಕ್ಕೆ ಮನೆಯವರು ನಿರಾಕರಿಸಿದ್ದರು. ಹೀಗಾಗಿ 2 ತಿಂಗಳ ಹಿಂದೆ ಬೇರೆ ಯುವತಿಯನ್ನು ಬೋಜರಾಜ ಮದುವೆಯಾಗಿದ್ದನು. ಇದನ್ನೂ ಓದಿ: ಆರತಕ್ಷತೆ ವೇಳೆ ಎದೆನೋವು – ಮದುವೆ ದಿನವೇ ಮೃತಪಟ್ಟ ವರ

ಇದೀಗ ಊರಿಗೆ ನಿರ್ಮಲಾ ಬಂದಿರುವ ವಿಚಾರ ತಿಳಿದ ಆರೋಪಿ ಮಚ್ಚಿನಿಂದ ಪ್ರೇಯಸಿಯ ತಲೆ ಕಡಿದು ಬರ್ಬರವಾಗಿ ಹತ್ಯೆಗೈದಿದ್ದಾನೆ. ನಂತರ ರುಂಡವನ್ನು ತೆಗೆದುಕೊಂಡು ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿಯ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ಸದ್ಯ ಈ ಸಂಬಂಧ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭ್ರಷ್ಟಾಚಾರದ ಹೆಮ್ಮರವೊಂದಕ್ಕೆ ಕೊಡಲಿ ಪೆಟ್ಟು ಬಿದ್ದಿದಕ್ಕೆ ಬೀದಿಗಿಳಿದಿದ್ದಾರೆ: ಬಿಜೆಪಿ

Live Tv

Leave a Reply

Your email address will not be published.

Back to top button