-ಪ್ರಿಯಕರನಿಗಾಗಿ ಪತಿಯ ಕೊಲೆ
-ವಾಟ್ಸಪ್‍ನಿಂದ ಬಯಲಾಯ್ತು ಕೊಲೆ ರಹಸ್ಯ
ಲಕ್ನೋ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ನಡೆದಿದೆ.
Advertisement
ರಾಜು ಕೊಲೆಯಾದ ಪತಿ. ಆರೋಪಿ ಪತ್ನಿ ಹಾಗೂ ಆಕೆಯ ಪ್ರಿಯಕರ ಆಕಾಶ್ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ. ಇದೀಗ ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಅಕ್ರಮ ಸಂಬಂಧಕ್ಕೆ ಒಂದು ವರ್ಷ:
ಮೃತ ರಾಜು ಮತ್ತು ಆರೋಪಿ ಆಕಾಶ್ ಆಪ್ತ ಸ್ನೇಹಿತರಾಗಿದ್ದರು. ಹೀಗಾಗಿ ಆಕಾಶ್ ಆಗಾಗ ರಾಜು ಮನೆಗೆ ಬರುತ್ತಿದ್ದನು. ಒಂದು ದಿನ ಆಕಾಶ್ ಕಣ್ಣು ರಾಜು ಪತ್ನಿ ಮೇಲೆ ಬಿದ್ದಿದೆ. ದಿನಕಳೆದಂತೆ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದು, ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಅಷ್ಟೇ ಅಲ್ಲದೇ ಇಬ್ಬರು ಒಟ್ಟಿಗೆ ಬದುಕಬೇಕೆಂದು ಇಷ್ಟಪಟ್ಟಿದ್ದರು. ಆದರೆ ಇವರ ದಾರಿಗೆ ರಾಜು ಅಡ್ಡ ಬರುತ್ತಾನೆ ಎಂದು ಕೊಲೆಗೆ ಸ್ಕೆಚ್ ಹಾಕಿದ್ದಾರೆ.
Advertisement
ವಾಟ್ಸಪ್ ಮೆಸೇಜ್ ನಿಂದ ಬಯಲಾಯ್ತು ಕೊಲೆ ರಹಸ್ಯ:
ಜೂನ್ 23 ರಂದು ಮಥುರಾ ಜಿಲ್ಲೆಯ ಜೈತ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-2 ಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ರಾಜು ಎಂದು ಗುರುತಿಸಿದ್ದರು. ರಾಜುವಿನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದರಿಂದ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು. ಪೊಲೀಸರು ತನಿಖೆ ಶುರು ಮಾಡಿದ್ದು, ಮೃತ ರಾಜುವಿನ ಪತ್ನಿ ಫೋನ್ ಪರಿಶೀಲನೆ ಮಾಡಿದ್ದಾರೆ. ಆಗ ರಾಜು ಪತ್ನಿ ಆರೋಪಿ ಆಕಾಶ್ ಜೊತೆ ಅಧಿಕವಾಗಿ ಫೋನಿನಲ್ಲಿ ಸಂಭಾಷಣೆ ಮಾಡಿದ್ದಳು. ಅಷ್ಟೇ ಅಲ್ಲದೇ ವಾಟ್ಸಪ್‍ನಲ್ಲಿ ಇಬ್ಬರೂ ಅಶ್ಲೀಲ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರು ಅನುಮಾನಗೊಂಡು ರಾಜು ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ಶುರು ಮಾಡಿದ್ದಾರೆ.
ತಪ್ಪೊಪ್ಪಿಗೆ:
ಆರೋಪಿ ಆಕಾಶ್ ಮತ್ತು ಮೃತ ರಾಜುವಿನ ಪತ್ನಿ ಒಂದು ವರ್ಷದಿಂದ ಸಂಬಂಧ ಇಟ್ಟುಕೊಂಡಿದ್ದರು. ರಾಜುವಿನಿಂದ ಅವರಿಬ್ಬರು ಒಟ್ಟಿಗೆ ಬದುಕಲು ಸಾಧ್ಯವಾಗುತ್ತಿರಲ್ಲ. ಹೀಗಾಗಿ ರಾಜು ತಮ್ಮಿಬ್ಬರ ದಾರಿಗೆ ಅಡ್ಡವಾಗಿದ್ದಾನೆಂದು ಕೊಲೆ ಮಾಡಲು ಪ್ಲಾನ್ ಮಾಡಿದ್ದರು. ಅದರಂತೆಯೇ ಆರೋಪಿ ಆಕಾಶ್ ತನ್ನ ಸ್ನೇಹಿತ ವಿಕಾಸ್ ಎಂಬಾತನಿಂದ ಜೂನ್ 23 ರಂದು ಕೊಟ್ವಾಲಿ ಪ್ರದೇಶದ ವೃಂದಾವನ್‍ನಲ್ಲಿ ಶೂಟ್ ಮಾಡಿಸಿ ರಾಜುನನ್ನು ಕೊಲೆ ಮಾಡಿಸಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಮೃತ ರಾಜು ಪತ್ನಿ ಮತ್ತು ಆಕಾಶ್ ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಬಂಧಿತರಿಂದ ಒಂದು ಅಕ್ರಮ ಪಿಸ್ತೂಲ್, ಎರಡು ಗುಂಡು ಮತ್ತು ಮೊಬೈಲ್‍ಗಳನ್ನು ವಶ ಪಡಿಸಿಕೊಂಡಿದ್ದಾರೆ. ಆಕಾಶ್ ಸ್ನೇಹಿತ ವಿಕಾಸ್ ಘಟನೆ ಬಳಿಕ ಪರಾರಿಯಾಗಿದ್ದು, ಆತನನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.