ಬಾಗಲಕೋಟೆ: ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಟಗರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಸೀಗಿಕೇರಿ ಗ್ರಾಮದಲ್ಲಿ ನಡೆದಿದೆ.
Advertisement
8 ಲಕ್ಷ ರೂ. ಡಿಮ್ಯಾಂಡ್ ಹೊಂದಿದ್ದ “ಲವ್ಲಿಬಾಯ್” ಟಗರು ಹೃದಯಾಘಾತದಿಂದ ಸಾವನ್ನಪ್ಪಿದೆ. ಮೂಲತಃ ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದ ನಾಟಕಕಾರ, ಕಲಾವಿದ ಹೆಚ್.ಎನ್. ಸೇಬಣ್ಣವರರಿಗೆ ಸೇರಿದ ಟಗರು ಇದ್ದಾಗಿದ್ದು, ಕಾಳಗಕ್ಕೆ ಹೆಸರುವಾಸಿಯಾಗಿತ್ತು. ಇದನ್ನೂ ಓದಿ: ನಾಯಕರಿಗಿಲ್ಲದ ವಯಸ್ಸು ನಾಯಕಿಗೇಕೆ? ಲಾರಾ ದತ್ತ ಪ್ರಶ್ನೆ
Advertisement
Advertisement
ಮುನ್ನೂರಕ್ಕೂ ಹೆಚ್ಚು ಟಗರುಗಳಿಗೆ ಡಿಚ್ಚಿ ಹೊಡೆದು ಸೋಲಿಸಿದ್ದ ಲವ್ಲಿಬಾಯ್ ಟಗರು, ಬೈಕ್, ಹೋರಿ, ಚಿನ್ನ, ಬೆಳ್ಳಿ, ನಗದು ಸೇರಿ ಸುಮಾರು ಹತ್ತು ಲಕ್ಷ ರೂ. ವರೆಗೆ ಬಹುಮಾನ ಗೆದ್ದು ಬೀಗಿತ್ತು. ಹಿಂದೆ ಈ ಟಗರನ್ನು ಯಾರೋ ಒಬ್ಬರು 8 ಲಕ್ಷ ರೂ.ಗೆ ಕೇಳಿದ್ದರು. ಟಗರಿನ ಮಾಲೀಕ ಶೇಬಣ್ಣವರ ಮಾತ್ರ ಟಗರು ಮಾರಾಟ ಮಾಡಿರಲಿಲ್ಲ. ಸದ್ಯ ಲವ್ಲಿಬಾಯ್ ಟಗರು ಜೀವಬಿಟ್ಟಿದೆ. ಆಂಜನೇಯನ ಜನ್ಮಭೂಮಿ ಹೈಜಾಕ್ – ಬಿಜೆಪಿ ಯಾಕೆ ಸುಮ್ಮನಿದೆ ಉಗ್ರಪ್ಪ ಪ್ರಶ್ನೆ
Advertisement
6 ವರ್ಷದ ಲವ್ಲಿಬಾಯ್ ದೇಹದ ಮೇಲೆ ಹೂ ಮಾಲೆ, ಹಣೆಗೆ ಬೆಳ್ಳಿ ಖಡ್ಗ, ದೇಹದ ಭಾಗಕ್ಕೆ ಭಂಡಾರ ಬಳಿದು, ಪ್ರಶಸ್ತಿಗಳನ್ನು ಟಗರಿನ ಪಾರ್ಥಿವ ಶರೀರದ ಮುಂದೆ ಇಟ್ಟು ಗ್ರಾಮದಲ್ಲಿ ಶ್ರದ್ಧಾಂಜಲಿಗೆ ವ್ಯವಸ್ಥೆ ಮಾಡಲಾಗಿದೆ. ಟಗರು ಅಭಿಮಾನಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತಿಮ ದರ್ಶನ ಪಡೆಯಲು ಟಗರು ಅಭಿಮಾನಿಗಳು ಹಾಗೂ ಸುತ್ತಮುತ್ತಲ ಜನರು ಬಂದು ಟಗರಿಗೆ ಪ್ರೀತಿಯ ವಿದಾಯ ಹೇಳುತ್ತಿದ್ದಾರೆ.