ಲವ್ಲಿ ಸ್ಟಾರ್ ಪ್ರೇಮ್‌ಗೆ (Lovely Star Prem) ಇಂದು (ಏ.18) ಹುಟ್ಟುಹಬ್ಬದ ಸಂಭ್ರಮ. ಆದರೆ ಬರ್ತ್‌ಡೇ ಖುಷಿಯಲ್ಲಿದ್ದ ನಟನ ವಿರುದ್ಧ ನಿರ್ಮಾಪಕಿ ಶ್ರುತಿ ನಾಯ್ಡು (Shruti Naidu) ಗರಂ ಆಗಿದ್ದಾರೆ. ಪ್ರೇಮ್ ವಿರುದ್ಧ ಕಾನೂನು ಸಮರಕ್ಕೆ ನಿಂತಿದ್ದಾರೆ. ಇದನ್ನೂ ಓದಿ:ಉಪ್ಪಿ ಅಣ್ಣನ ಮಗನ ಸಿನಿಮಾದಲ್ಲಿ ಲವ್ಲಿ ಸ್ಟಾರ್- ‘ಸ್ಪಾರ್ಕ್’ನಲ್ಲಿ ನೆನಪಿರಲಿ ಪ್ರೇಮ್
ನಟನ ಹುಟ್ಟುಹಬ್ಬದ ಹಿನ್ನೆಲೆ ಇಂದು ‘ಸ್ಪಾರ್ಕ್’ (Spark Film) ಚಿತ್ರತಂಡ ವಿಶೇಷವಾಗಿ ಪ್ರೇಮ್ ಪಾತ್ರದ ಪೋಸ್ಟರ್ ಅನ್ನು ರಿವೀಲ್ ಮಾಡಿತ್ತು. ಆ ಪೋಸ್ಟರ್‌ನಲ್ಲಿ ರಮೇಶ್ ಇಂದಿರಾ ಅವರ ಫೋಟೋವನ್ನು ಸಿಗಾರ್‌ನಿಂದ ಪ್ರೇಮ್ ಸುಡುತ್ತಿರುವಂತೆ ಡಿಸೈನ್ ಮಾಡಲಾಗಿತ್ತು. ಆದರೆ ಆ ರಮೇಶ್ ಇಂದಿರಾ ನಟಿಸಿದ್ದ ‘ಭೀಮ’ ಸಿನಿಮಾದಾಗಿತ್ತು. ಅನುಮತಿ ಪಡೆಯದೇ ರಮೇಶ್ ಇಂದಿರಾ ಅವರ ಫೋಟೋ ಬಳಸಿದ್ದಕ್ಕೆ ಪ್ರೇಮ್ ಮತ್ತು ಚಿತ್ರತಂದ ವಿರುದ್ಧ ಶ್ರುತಿ ನಾಯ್ಡು ಗರಂ ಆಗಿದ್ದಾರೆ. ಇದನ್ನೂ ಓದಿ:‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರಕ್ಕಾಗಿ ಒಂದಾದ ‘ಬ್ಲಿಂಕ್’ ಮತ್ತು ‘ಶಾಖಾಹಾರಿ’ ನಿರ್ಮಾಪಕರು
ಆ ಪೋಸ್ಟರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಶ್ರುತಿ ನಾಯ್ಡು, ಈ ಚಿತ್ರತಂಡದವರು ಅನೈತಿಕವಾಗಿ ನಡೆದುಕೊಂಡಿದ್ದಾರೆ. ಪೋಸ್ಟರ್‌ನಲ್ಲಿರುವ ಈ ಚಿತ್ರವನ್ನು ನಟನ ಅನುಮತಿ ಪಡೆಯದೇ ಪೋಸ್ಟ್ ಮಾಡಿದ್ದಾರೆ. ನಟ ಹಿಡಿದುಕೊಂಡ ಪೋಸ್ಟರ್‌ನಲ್ಲಿ ಬಳಸಲಾದ ಈ ಚಿತ್ರವು ರಮೇಶ್ ಇಂದಿರಾ ಅವರು ರಾಜಕಾರಣಿಯ ಪಾತ್ರವನ್ನು ನಿರ್ವಹಿಸಿದ ‘ಭೀಮ’ ಚಿತ್ರದ್ದು. ಅದರಲ್ಲಿರೋ ಫೋಟೋವನ್ನು ಭೀಮ ಚಿತ್ರಕ್ಕಾಗಿ ತೆಗೆದುಕೊಳ್ಳಲಾಗಿತ್ತು. ಆದರೆ ಈ ಫೋಟೋವನ್ನು ಅನುಮತಿ ಇಲ್ಲದೇ ಬಳಸಿಕೊಂಡಿದ್ದಾರೆ. ರಮೇಶ್ ಇಂದಿರಾ ಪರವಾಗಿ ಈ ಚಿತ್ರ ತಂಡ ಮತ್ತು ನಟನಿಗೆ ಕಾನೂನು ನೋಟಿಸ್ ಕಳುಹಿಸುತ್ತೇನೆ ಬರೆದುಕೊಂಡಿದ್ದಾರೆ. ಚಿತ್ರತಂಡ ಈ ನಡೆ ಶ್ರುತಿ ನಾಯ್ಡು ಮುನಿಸಿಗೆ ಕಾರಣವಾಗಿದೆ.
ಶ್ರುತಿ ನಾಯ್ಡು ಹಂಚಿಕೊಂಡಿರುವ ಪೋಸ್ಟ್‌ಗೆ ಚಿತ್ರತಂಡದವರಾಗಲಿ ಅಥವಾ ನಟನಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿಚಾರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ನೀಡ್ತಾರೆ ಎಂಬುದುನ್ನು ಕಾದುನೋಡಬೇಕಿದೆ.