ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಆರ್ಯವರ್ಧನ್ ಗುರೂಜಿ (Aryavardhan Guruji) ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. ಗುರೂಜಿ ಬಾಯಿಯಿಂದ ಇಂತಹ ನುಡಿಮುತ್ತುಗಳು ಬರುತ್ತಿದ್ದಂತೆಯೇ ಬಿಗ್ ಬಾಸ್ ಮನೆ ಸದಸ್ಯರೂ ಭಾವುಕರಾಗಿದ್ದಾರೆ. ಅಷ್ಟಕ್ಕೂ ಗುರೂಜಿಯ ಆ ಬೇಡಿಕೆ ಸದ್ಯಕ್ಕೆ ಈಡೇರದಿದ್ದರೂ, ಮುಂದಿನ ದಿನಗಳಲ್ಲಿ ಕಂಡಿತಾ ಸಾಧ್ಯವಾಗಬಹುದು ಎಂದು ಪ್ರಶಾಂತ್ ಸಂಬರ್ಗಿ ಭವಿಷ್ಯ ನುಡಿದಿದ್ದಾರೆ. ಹಾಗಾದರೆ, ಆರ್ಯವರ್ಧನ್ ಗುರೂಜಿ ಬೇಡಿಕೆ ಏನಾಗಿತ್ತು? ಯಾಕೆ ಬಿಗ್ ಬಾಸ್ ಮನೆಯ ಸದಸ್ಯರು ಭಾವುಕರಾದರು ಎನ್ನುವುದೇ ಸದ್ಯಕ್ಕಿರುವ ಕುತೂಹಲ.
Advertisement
ಹೊಟ್ಟೆ ತುಂಬಾ ಊಟ ಮಾಡಿಕೊಂಡು ಬಂದ ಪ್ರಶಾಂತ್ ಸಂಬರ್ಗಿ(Prashant Sambargi) , ಕ್ಯಾಮೆರಾ ಮುಂದೆ ಬಂದು ‘ಬಿಗ್ ಬಾಸ್ ನನ್ನದು ಊಟ ಆಯಿತು, ನಿಮ್ಮದು ಆಯಿತಾ ಅಂದ್ಕೋತೀನಿ. ಥ್ಯಾಂಕ್ಸ್ ಬಿಗ್ ಬಾಸ್’ ಅಂದರು. ಅದನ್ನು ಗಮನಿಸುತ್ತಿದ್ದ ಆರ್ಯವರ್ಧನ್ ಗುರೂಜಿ, ‘ನೀವಷ್ಟೇ ಕ್ಯಾಮೆರಾ ಮುಂದೆ ಮಾತಾಡ್ಬೇಕಾ? ನಾನೂ ಮಾತಾಡ್ತೀನಿ’ ಅಂತ ಕ್ಯಾಮೆರಾ ಎದುರು ನಿಂತರು. ಪ್ರಶಾಂತ್ ಸಂಬರ್ಗಿ ರೀತಿಯಲ್ಲೇ ಗುರೂಜಿ ಕೂಡ ಬಿಗ್ ಬಾಸ್ ಗೆ ಏನಾದರೂ ಕೇಳುತ್ತಾರೆ ಅಂದುಕೊಂಡರೆ ಲೆಕ್ಕಾಚಾರವೇ ಉಲ್ಟಾ ಆಯಿತು. ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ
Advertisement
Advertisement
ಕ್ಯಾಮೆರಾ ಮುಂದೆ ಬಂದ ಗುರೂಜಿ ತುಸು ಭಾವುಕರಾಗಿಯೇ ‘ ಐ ಲವ್ ಯೂ ರಚಿತಾ’ (Rachita) ಎಂದು ಬಿಟ್ಟರು. ರಚಿತಾ ಅಂದಾಕ್ಷಣ ಬಹುತೇಕರು ನಟಿ ರಚಿತಾ ರಾಮ್ ಗೆ ಹೇಳುತ್ತಿದ್ದಾರಾ ಅಂತ ಅಂದುಕೊಂಡಿದ್ದು ಸುಳ್ಳಲ್ಲ. ಮತ್ತೆ ಮಾತು ಮುಂದುವರೆಸಿದ ಗುರೂಜಿ, ‘ನಿನಗೋಸ್ಕರ ನಾನು ಇಲ್ಲಿಗೆ ಬಂದಿದ್ದೇನೆ. ಆಚೆ ಬಂದ್ಮೇಲೆ ನನ್ನ ತುಂಬಾ ಲವ್ ಮಾಡು, ಯಾವತ್ತೂ ನಾನು ಲವ್ ನೋಡೇ ಇಲ್ಲ. ನಿನ್ನ ಪ್ರೀತಿ ಮಾಡಿಲ್ಲ. ನಿನ್ನ ಜೊತೆ ಲೈವ್ ಆಗಿ ಪ್ರೀತಿ ಮಾಡಿಲ್ಲ. ನಿನ್ನನ್ನು ನಾನು ರಿಯಲ್ ಆಗಿ ಲವ್ ಮಾಡ್ಬೇಕು. ನೀನು ನನ್ನ ಹಗ್ ಮಾಡಬೇಕು’ ಅಂತೆಲ್ಲ ಮಾತಾಡೋಕೆ ಶುರು ಮಾಡಿದ್ದರು. ಇದನ್ನು ಕೇಳಿ ಬಿಗ್ ಬಾಸ್ ಮನೆಯವರು ಒಂದು ಕ್ಷಣ ಶಾಕ್ ಗೆ ಒಳಗಾದರು.
Advertisement
ರೋಮ್ಯಾಂಟಿಕ್ ಆಗಿ, ಎಮೋಷನಲ್ ಆಗಿ ಗುರೂಜಿ ಯಾವ ರಚಿತಾಗೆ ಈ ಮಾತುಗಳನ್ನು ಹೇಳುತ್ತಿರಬೇಕು ಎಂದು ಹಲವರು ತಲೆ ಕೆಡಿಸಿಕೊಂಡರು. ಆನಂತರ ಗೊತ್ತಾಗಿದ್ದು, ಗುರೂಜಿ ಅವರ ಪತ್ನಿಯ ಹೆಸರು ರಚಿತಾ ಅಂತ. ತಮ್ಮ ಪತ್ನಿಗೆ ಗುರೂಜಿ ಇದನ್ನೆಲ್ಲ ಹೇಳಿದ್ದಾರೆ ಎಂದು ಕೇಳಿ ಎಲ್ಲರೂ ನಿಟ್ಟುಸಿರಿಟ್ಟರು. ಅಷ್ಟಕ್ಕೆ ಸುಮ್ಮನಾಗದ ಗುರೂಜಿ, ‘ಇಲ್ಲಿ ಎಲ್ಲರೂ ನೈಟ್ ಹಗ್ ಮಾಡ್ತಾರೆ. ಅಯ್ಯಯ್ಯೋ ನಂಗೆ ನೋಡೋಕೆ ಆಗ್ತಿಲ್ಲ. ಅವರನ್ನೆಲ್ಲ ನೋಡಿ ನಿನ್ನ ಹಗ್ ಮಾಡ್ಬೇಕು ಅನಿಸ್ತಿದೆ’ ಎಂದು ತಮ್ಮೊಳಗೆ ತುಮುಲಗಳನ್ನು ಬಿಚ್ಚಿಟ್ಟರು ಗುರೂಜಿ.
ಲವ್, ರಿಯಲ್ ಲವ್, ಹಗ್ ಅಂತೆಲ್ಲ ಮಾತನಾಡುತ್ತಾ ಗುರೂಜಿ, ನಂತರ ತುಸು ಭಾವುಕರಾಗಿ ‘ಇಲ್ಲಿವರೆಗೂ ಹೇಗೋ ಆಯ್ತು. ಕ್ಷಮಿಸಿ ಬಿಡಿ ನನ್ನ. ನಿನಗೋಸ್ಕರ ನಾನು ದುಡೀತೀನಿ. ನಿನಗೋಸ್ಕರ ಬದುಕ್ತೀನಿ’ ಎಂದು ಆಶ್ವಾಸನೆ ನೀಡಿದರು. ಗುರೂಜಿ ಮಾತುಗಳನ್ನು ಕೇಳಿಸಿಕೊಂಡ ದೊಡ್ಮನೆ ಸದಸ್ಯರು ಗುರೂಜಿ ಮಾತುಗಳಿಗೆ ಮೆಚ್ಚುಗೆ ಸೂಚಿಸಿದರು. ಗುರೂಜಿ ಮಾತು ಒಂದು ಕ್ಷಣ ಅಚ್ಚರಿ ಮತ್ತೊಂದು ಕ್ಷಣ ಭಾವುಕತೆಗೆ ನೂಕಿದ್ದು ಸುಳ್ಳಲ್ಲ. ಮನೆಯಿಂದ ಗುರೂಜಿ ಆಚೆ ಬಂದ ತಕ್ಷಣವೇ ರಚಿತಾ ಅವರು ಹಗ್ ಮಾಡಿಕೊಂಡು ಪತಿಯನ್ನು ಸ್ವಾಗತಿಸಿಕೊಳ್ಳಲಿ ಎಂದು ಹಾರೈಸೋಣ.