ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ (Sushmitha Sen) ಅವರ ಸಹೋದರ ರಾಜೀವ್ ಸೇನ್ (Rajeev sen) ಇದೀಗ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. 4 ವರ್ಷಗಳ ಮದುವೆ ದಾಂಪತ್ಯಕ್ಕೆ ರಾಜೀವ್ ಸೇನ್ ಅಂತ್ಯ ಹಾಡಿದ್ದಾರೆ. ಪತ್ನಿ ಚಾರು ಅಸೋಪಾಗೆ (Charu Asopa) ರಾಜೀವ್ ಸೇನ್ ಡಿವೋರ್ಸ್ (Divorce) ನೀಡಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ.
ರಾಜೀವ್ ಸೇನ್- ಚಾರು ಜೋಡಿ 2019ರಲ್ಲಿ ಜೂನ್ 16ರಂದು ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಇಬ್ಬರ ನಡುವೆ ಹಲವು ವಿಚಾರಗಳಲ್ಲಿ ಹೊಂದಾಣಿಕೆ ಸಮಸ್ಯೆ ಎದುರಾಯಿತು. ಚಾರು, ನನ್ನ ಪತಿಗೆ ಮೊದಲೇ ಮುದುವೆಯಾಗಿತ್ತು ಆದರೂ ತಿಳಿಸದೇ ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ರೆ, ನನ್ನ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ರಾಜೀವ್ ಆರೋಪ ಮಾಡಿದ್ರು.
ಇಬ್ಬರ ದಾಂಪತ್ಯದ ಗುದ್ದಾಟಕ್ಕೆ ಇದೀಗ ತೆರೆ ಬಿದ್ದಿದೆ. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆಯೋದಾಗಿ ಅಧಿಕೃತವಾಗಿ ತಿಳಿಸಿದ್ದಾರೆ. ಹಾಗೆಯೇ ಮಗಳು ಜಿಯಾ ಪೋಷಕರಾಗಿ ಇರುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ನನ್ನನ್ನು ಕೊಲ್ಲಲು ನಟ ಅಕ್ಷಯ್ ಕುಮಾರ್ ಸುಪಾರಿ ಕೊಟ್ಟಿದ್ದಾರೆ: ಖಾನ್ ಟ್ವೀಟ್
ತಮ್ಮ ಡಿವೋರ್ಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಾಜೀವ್ ತಿಳಿಸಿದ್ದಾರೆ. ಚಾರು ಅಸೋಪಾ ಅವರೊಂದಿಗಿನ ವಿಚ್ಛೇದನ ಮತ್ತು ನಾಲ್ಕು ವರ್ಷಗಳ ವಿವಾಹದ ಅಂತ್ಯಪಡಿಸುತ್ತಿರುವುದಾಗಿ ಹೇಳಿದ್ದಾರೆ. ಯಾವುದೇ ಗುಡ್ ಬೈ ಇಲ್ಲ. ನಾವು ಒಬ್ಬರಿಗೊಬ್ಬರು ಇರಲು ಸಾಧ್ಯವಾಗದ ಇಬ್ಬರು ವ್ಯಕ್ತಿಗಳು. ಆದರೆ, ಪ್ರೀತಿ ಉಳಿಯುತ್ತದೆ. ನಾವು ಯಾವಾಗಲೂ ನಮ್ಮ ಮಗಳಿಗೆ ತಾಯಿ ಮತ್ತು ತಂದೆಯಾಗಿರುತ್ತೇವೆ ಎಂದು ಪೋಸ್ಟ್ ಹಾಕಿರುವ ರಾಜೀವ್ ಅವರು, ಪೋಸ್ಟ್ ಜೊತೆಗೆ ರಾಜೀವ್ ಚಾರು ಅವರೊಂದಿಗಿನ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನನ್ನನ್ನು ಕೊಲ್ಲಲು ನಟ ಅಕ್ಷಯ್ ಕುಮಾರ್ ಸುಪಾರಿ ಕೊಟ್ಟಿದ್ದಾರೆ: ಖಾನ್ ಟ್ವೀಟ್
ಇತ್ತೀಚಿಗೆ ಬಿಗ್ ಬಾಸ್ ಒಟಿಟಿ ಸೀಸನ್ 2ಕ್ಕೆ ರಾಜೀವ್ ಸೇನ್ ಹೋಗುವ ಬಗ್ಗೆ ಸುದ್ದಿಯಾಗಿತ್ತು. ಈ ಬಗ್ಗೆ ರಾಜೀವ್ ಸ್ಪಷ್ಟನೆ ನೀಡಿದ್ದಾರೆ. ತಾವು ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲ. ಪ್ರೇಕ್ಷಕನಾಗಿ ಈ ಶೋ ನೋಡಲು ಇಷ್ಟ. ಆದರೆ ನನಗೆ ಇಷ್ಟು ಲಾಂಗ್ ಕಮೀಟ್‌ಮೆಂಟ್ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಬಿಗ್ ಬಾಸ್‌ಗೆ ನಟ ಬರಲಿದ್ದಾರೆ ಎಂಬ ವದಂತಿಗೆ ರಾಜೀವ್ ಬ್ರೇಕ್ ಹಾಕಿದ್ದಾರೆ.