ವಿಜಯಪುರ: ದುಬೈನ (Dubai) ಕತಾರ್‌ನಲ್ಲಿ ಪ್ರೀತಿ ಶುರುವಾಗಿ ಹಣ, ಮೊಬೈಲ್ ದೋಚಿ ಪತಿ ಪರಾರಿಯಾಗಿರುವ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ.
ಯುವಕನನ್ನು ಆರೀಫ್ ಹಾಗೂ ಯುವತಿಯನ್ನು ಆಂಧ್ರದ ಚಿತ್ತಾಪುರ ಮೂಲದವಳು ಎಂದು ಗುರುತಿಸಲಾಗಿದೆ. ಯುವತಿಯ ಮೇಲೆ ಹಲ್ಲೆ ನಡೆಸಿ, ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದಾನೆ.ಇದನ್ನೂ ಓದಿ:ಗ್ಲ್ಯಾಮರಸ್ ಅವತಾರದಲ್ಲಿ ಸಾರಾ ಅಣ್ಣಯ್ಯ ಮಿಂಚಿಂಗ್
Advertisement
Advertisement
ಕಳೆದ ನಾಲ್ಕು ವರ್ಷಗಳ ಹಿಂದೆ ದುಬೈನ ಕತಾರ್‌ನಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು. ಆಗ ಯುವತಿಗೆ ಆರೀಫ್‌ನ ಪರಿಚಯವಾಗಿತ್ತು. ಅಲ್ಲಿ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. ಮೂರು ವರ್ಷಗಳ ಕಾಲ ದುಬೈನಲ್ಲಿ ಒಟ್ಟಿಗೆ ಇದ್ದರು. ಬಳಿಕ ಕರ್ನಾಟಕದ ಸ್ವಗ್ರಾಮಕ್ಕೆ ತೆರಳಿ ಸೆಟಲ್ ಆಗೋಣ ಎಂದು ಹೇಳಿ ವಿಜಯಪುರಕ್ಕೆ ಕರೆದುಕೊಂಡು ಬಂದಿದ್ದ. ಆಗ ಆರೀಫ್ ಕುಟುಂಬದವರು ಇಬ್ಬರಿಗೂ ಮದುವೆ ಮಾಡಿಸಿದ್ದರು.
Advertisement
ಮದುವೆಯಾದ 20 ದಿನದಲ್ಲಿಯೇ ಆರೀಫ್ ಮನೆಯವರು ಯುವತಿಗೆ ತಲಾಖ್ ನೀಡುವಂತೆ ಒತ್ತಾಯಿಸಿ, ಕಿರುಕುಳ ನೀಡಿದ್ದರು. ಇದರಿಂದ ಬೇಸತ್ತ ಯುವತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಳು. ಆಗ ಆರೀಫ್ ಯುವತಿ ಜೊತೆ ಸರಿಯಾಗಿ ಸಂಸಾರ ಮಾಡುವುದಾಗಿ ತಿಳಿಸಿ ಮನೆಗೆ ಕರೆದುಕೊಂಡು ಬಂದಿದ್ದ.
Advertisement
ಸ್ವಲ್ಪ ದಿನ ಸರಿಯಾಗಿದ್ದ, ಬಳಿಕ ಮತ್ತೆ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಅದಾದ ಮೇಲೆ ವಿಜಯಪುರದ ಬುರನಾಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಅಲ್ಲಿಯೂ ಕೂಡ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಆಗ ಆರೀಫ್ ತನ್ನ ಇಬ್ಬರು ಸಂಬಂಧಿಕರೊಟ್ಟಿಗೆ ಬಂದು ಚಾಕು ತೋರಿಸಿ, ಜೀವ ಬೆದರಿಕೆ ಹಾಕಿದ್ದಾನೆ. ಜೊತೆಗೆ ಯುವತಿ ಬಳಿ ಇದ್ದ ಹಣ, ಮೊಬೈಲ್ ಸೇರಿದಂತೆ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.
ಸದ್ಯ ಯುವತಿ ಬೀದಿ ಪಾಲಾಗಿದ್ದು, ಆರೀಫ್ ಸಂಬಂಧಿಕರು ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ನನಗೆ ನ್ಯಾಯ ಸಿಗುತ್ತಿಲ್ಲ, ನ್ಯಾಯ ಸಿಗಲಿಲ್ಲ ಅಂದ್ರೆ ಆರೀಫ್ ಕುಟುಂಬಸ್ಥರು, ನನ್ನ ಮದುವೆ ಮಾಡಿಸಿದವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾಳೆ. ಇದೀಗ ನನ್ನ ಗಂಡನನ್ನ ಹುಡುಕಿ ಕೊಡಿ ಎಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.ಇದನ್ನೂ ಓದಿ: ಕೇಂದ್ರ ಸರ್ಕಾರದ ಬಜೆಟ್ ದೊಡ್ಡ ದೊಡ್ಡ ಘೋಷಣೆಗಳಿಗಷ್ಟೇ ಸೀಮಿತ: ಪ್ರಿಯಾಂಕ್ ಖರ್ಗೆ