Connect with us

Bengaluru City

ನಾನು ನಿನ್ನ ಮದುವೆಯಾಗ್ತೀನಿ, ನೀನೆಂದರೆ ನನಗೆ ಇಷ್ಟ ಎಂದು ಯುವತಿ ಜೊತೆ ಲವ್, ಸೆಕ್ಸ್, ದೋಖಾ

Published

on

ಬೆಂಗಳೂರು: ಯುವತಿಯೊಬ್ಬಳನ್ನು ಕಾಮಕ್ಕೆ ಬಳಸಿಕೊಂಡು, ನೀನು ನನಗೆ ಬೇಡ ಎಂದು ಮತ್ತೊಬ್ಬಕೆಯನ್ನ ಮದುವೆಯಾಗಿ ಮೋಸ ಮಾಡಿರುವ ಲವ್, ಸೆಕ್ಸ್, ದೋಖಾ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ಸಾಜೀದಾ ಮೋಸಕ್ಕೊಳಗಾದ ಯುವತಿ. ಸಾಜೀದಾ ಈ ಬಾರಿ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದಾರೆ. ಪ್ರೀತಿ ಅಂತಾ ಹೇಳಿಕೊಂಡು ಬೊಮ್ಮನಹಳ್ಳಿ ನಿವಾಸಿ ಜಾಫರ್ ಷರೀಫ್ ಎಂಬಾತ ಸಾಜೀದಾರಿಗೆ ಮೋಸ ಮಾಡಿದ್ದಾನೆ. ಸುಭಾಷ್ ನಗರದಲ್ಲಿ ವಾಸವಾಗಿರುವ ಸಾಜೀದಾ ಮನೆಯ ಬಳಿ ತನ್ನ ಬಾವನ ಮೆಡಿಕಲ್ ಶಾಪ್‍ನಲ್ಲಿ ಜಾಫರ್ ಕೆಲಸ ಮಾಡಿಕೊಂಡಿದ್ದನು. ಅಂಗಡಿಯ ಪಕ್ಕದಲ್ಲಿಯೇ ವಾಸವಾಗಿದ್ದ ಸಾಜೀದಾಳನ್ನು ನೋಡಿದ್ದ ಜಾಫರ್ ಮನಸೋತಿದ್ದನು.

ಜಾಫರ್ ಮೊದಲಿಗೆ ಸಾಜೀದಾರ ತಮ್ಮನನ್ನು ಪರಿಚಯ ಮಾಡಿಕೊಂಡಿದ್ದಾನೆ. ಬಡತನದಲ್ಲೇ ಬೆಳೆದ ಸಾಜೀದಾ ಕಾಲೇಜಿಗೆ ಹೋಗುತ್ತಲೇ ಪಾರ್ಟ್ ಟೈಮ್ ಕೆಲಸಗಳನ್ನ ಮಾಡುತ್ತಿದ್ದರು. ಇದನ್ನೇ ಬಳಸಿಕೊಂಡ ಜಾಫರ್ ನಮ್ಮ ಬಾವನಿಗೆ ಹೇಳಿ ನಿನಗೆ ಒಂದು ಒಳ್ಳೆ ಕೆಲಸ ಕೋಡಿಸುತ್ತೀನಿ ಎಂದು ಅವರ ಅಕ್ಕನ ಅಪಾರ್ಟ್ಮೆಂಟ್ ಗೆ ಕರೆದುಕೊಂಡು ಹೋಗಿ ಈಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.

ಮತ್ತೊಂದು ಮದ್ವೆಯಾದ: ನಾನು ನಿನ್ನ ಮದುವೆಯಾಗುತ್ತೀನಿ. ನೀನೆಂದರೆ ನನಗೆ ಇಷ್ಟ ಅದಕ್ಕೆ ಈ ರೀತಿ ಮಾಡಿದೆ. ಮನೆಯವರನ್ನ ಒಪ್ಪಿಸಿ ನಿನ್ನ ಮದುವೆಯಾಗುತ್ತೀನಿ. ಅಲ್ಲಿವರೆಗೂ ಈ ವಿಷಯ ಯಾರಿಗೂ ಹೇಳಬೇಡ ಎಂದು ಸಾಜೀದಾರನ್ನು ಯಾಮಾರಿಸಿದ್ದಾನೆ. ಫೋನ್ ಸ್ವಿಚ್ ಆಫ್ ಆದರೆ ಸಾಕು ಕಾಲೇಜಿನ ಬಳಿ ಬಂದು ಎಲ್ಲರ ಮುಂದೆ ಹಲ್ಲೆ ಮಾಡುತ್ತಿದ್ದ. ಬೆತ್ತಲೆ ಫೋಟೋಗಳನ್ನು ಕಳುಹಿಸು ಎಂದು ಹೇಳುತ್ತಿದ್ದ. ಆದ್ರೆ ಈಗ ನೀನು ನನಗೆ ಬೇಡ ಎಂದ ಮತ್ತೊಂದು ಮದುವೆಯಾಗಿದ್ದಾನೆ.

ಜಾಫರ್ ನಡವಳಿಕೆಯಲ್ಲಿ ಬದಲಾವಣೆ ಕಂಡ ಸಾಜೀದಾ ತನ್ನ ಪ್ರೇಮದ ವಿಷಯವನ್ನು ಜಾಫರ್‍ನ ಅಕ್ಕ ಮತ್ತು ಬಾವನಿಗೆ ತಿಳಿಸಿದ್ದಾರೆ. ಜಾಫರ್ ಮಾಡಿದ ತಪ್ಪನ್ನು ಸರಿ ಮಾಡಿಸುವುದನ್ನು ಬಿಟ್ಟು ಅವರು ಸಾಜೀದಾ ಬಳಿ ಕೆಲವು ಪತ್ರಗಳಿಗೆ ಸಹಿಮಾಡಿಸಿಕೊಂಡಿದ್ದಾರೆ. ಪರಸ್ಪರ ಒಪ್ಪಿಗೆ ಮೂಲಕ ನಾವಿಬ್ಬರು ಬೇರೆಯಾಗುತ್ತಿದ್ದೇವೆ. ಮುಂದೆ ಸಾಜೀದಗೆ ಏನೇ ಆದರೂ ನಮಗೆ ಸಂಬಂಧವಿಲ್ಲ ಅಂತ ಪತ್ರದಲ್ಲಿ ಬರೆಯಲಾಗಿದೆ.

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಾಫರ್ ಮದುವೆಯನ್ನು ನಿಲ್ಲಿಸಲು ಕೋರ್ಟ್ ನಿಂದ ತಡೆಯನ್ನು ತಂದರೂ ಮರೆಯಲ್ಲಿ ಪೊಲೀಸರು ಆತನಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಸಾಜೀದಾ ಅರೋಪಿಸುತ್ತಿದ್ದಾರೆ. ಜಾಫರ್ ಪೋಷಕರು ನಿಮ್ಮ ತಂದೆ ನಾವು ಹಣ ನೀಡಿದ್ದು, ನಮಗೂ ನಿನಗೂ ಸಂಬಂಧವಿಲ್ಲ ಅಂತಾ ಹೇಳ್ತಿದ್ದಾರೆ.

ಇತ್ತ ಹಣ ಪಡೆದುಕೊಂಡ ಸಾಜೀದಾ ತಂದೆಯೂ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಸದ್ಯ ನಮಗೆ ಯಾರು ನ್ಯಾಯ ಕೊಡುಸುತ್ತಿಲ್ಲ ಅಂತಾ ಸಾಜೀದಾ ಏಕಾಂಗಿಯಾಗಿ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಎಳನೀರಲ್ಲಿ ಮತ್ತು ಬರೋ ಐಟಂ ಹಾಕಿ ರೇಪ್- ಕೋಲ್ಡ್ & ಟೆಂಪ್ಟ್ ಗೆ ಹೀಗಾಗೋಯ್ತು, ಯಾರಿಗೂ ಹೇಳ್ಬೇಡ ಎಂದ

Click to comment

Leave a Reply

Your email address will not be published. Required fields are marked *

www.publictv.in