ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ (Davanagere) ಹಾಡಹಗಲೇ ಭೀಕರ ಕೊಲೆಗಳಾಗುತ್ತಿವೆ. ಇಂತಹ ದೃಶ್ಯಗಳನ್ನು ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ. ತನ್ನ ಪಾಡಿಗೆ ಕೆಲಸಕ್ಕೆ ಹೋಗುತ್ತಿದ್ದ ಯುವತಿಯನ್ನ (Girl) ನಡು ರಸ್ತೆಯಲ್ಲಿ ತಡೆದು ನಿಲ್ಲಿಸಿ, ಮನಬಂದಂತೆ ಚುಚ್ಚಿ-ಚುಚ್ಚಿ ಕೊಂದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆ ನಗರದ ಬಿ.ಜೆ ಬಡಾವಣೆಯ ಚರ್ಚ್ ಮುಂಭಾಗ ಯುವತಿಯನ್ನ ಕೊಂದಿರುವ ಪಾಗಲ್ ಪ್ರೇಮಿ, ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾನೆ. ಇದನ್ನೂ ಓದಿ: ಐಪಿಎಲ್ ಮಿನಿ ಹರಾಜು ಹೈಲೈಟ್ಸ್ – ಸುತ್ತಿಗೆಯ ಹೊಡೆತಕ್ಕೆ ಕಾಯುತ್ತಿದ್ದಾನೆ 15ರ ಬಾಲಕ
ಇಲ್ಲಿನ ವಿನೋಭ ನಗರದ ನಿವಾಸಿ ಚಾಂದ್ ಸುಲ್ತಾನಾ ದಾವಣಗೆರೆ ವಿವಿಯಲ್ಲಿ ಎಂಕಾಂ ಪದವಿ ಮುಗಿಸಿ ತೆರಿಗೆ ಸಲಹೆಗಾರರಾದ ಕೆ.ಮಹ್ಮದ್ ಭಾಷಾ ಅವರ ಬಳಿ ಸಿ.ಎ.ಗಾಗಿ ತೆರಬೇತಿ ಪಡೆಯುತ್ತಿದ್ದಳು. ಇದೇ ಕಚೇರಿಯಲ್ಲಿನ ಹುಡುಗನ ಜೊತೆಗೆ ಇತ್ತೀಚಿಗೆ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದಳು. ಇದನ್ನೂ ಓದಿ: ‘ಪಠಾಣ್’ ಮತ್ತೊಂದು ಸಾಂಗ್ ರಿಲೀಸ್ : ಡ್ಯಾನ್ಸ್ ಮೆಚ್ಚಿಕೊಂಡ ಡಿಪ್ಪಿ-ಶಾರುಖ್ ಫ್ಯಾನ್ಸ್
ಅಷ್ಟರಲ್ಲೇ ದುಷ್ಟ ಸಾದತ್ ಅಲಿಯಾಸ್ ಚಾಂದ್ ಫೀರ್ ಎಂಬವನು, ಚಾಂದ್ ಸುಲ್ತಾನಾಳನ್ನ ಮದುವೆಯಾಗಲು (Marriage) ಬಯಸಿದ್ದ. ಆದ್ರೆ ಕುಟುಂಬದ ಸದಸ್ಯರು ಹಾಗೂ ಸುಲ್ತಾನಾ ನಿರಾಕರಿಸಿ ಮತ್ತೊಬ್ಬ ಹುಡುಗನ ಜೊತೆಗೆ ನಿಶ್ಚಿತಾರ್ಥ ಮಾಡಿದ್ದರು. ಇದರಿಂದ ಸಾದತ್ ಕೋಪಗೊಂಡಿದ್ದಾನೆ. ಮರುದಿನ ಸುಲ್ತಾನ ತನ್ನ ಪಾಡಿಗೆ ಕೆಲಸಕ್ಕೆ ಹೋಗುತ್ತಿದ್ದಾಗ ಮಾತನಾಡಬೇಕು ಎಂದು ನಿಲ್ಲಿಸಿ, ನಟ್ಟ ನಡು ರಸ್ತೆಯಲ್ಲೇ ಚಾಕುವಿನಿಂದ ಚುಚ್ಚಿ-ಚುಚ್ಚಿ ಕೊಂದಿದ್ದಾನೆ.
ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಚಾಂದ್ ಸುಲ್ತಾನ ಮನೆಗೆ ಒಬ್ಬಳೇ ಮಗಳು. ಹೇಗೋ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕುಟುಂಬದವರಿಗೆ ಕೊಲೆಯ ವಿಚಾರ ತಿಳಿದು, ಕೊಲೆಗಾರನನ್ನ ಹುಡುಕಾಡುವಷ್ಟರಲ್ಲೇ ಸಾದತ್ ವಿಷ ಸೇವಿಸಿ ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಸದ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.