ಬಾಮೈದನ ‘ಲವ್ ರಾತ್ರಿ’ ಲಾಂಚ್ ಮಾಡಲಿದ್ದಾರೆ ಸಲ್ಮಾನ್ ಖಾನ್

Public TV
1 Min Read
Aayusha Sharma Salman Khan 3

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಈಗಾಗಲೇ ಸೋನಾಕ್ಷಿ ಸಿನ್ಹಾ, ಆಹಿತ್ಯಾ ಶೆಟ್ಟಿ, ಸೂರಜ್ ಪಾಂಚೋಲಿ ಅವರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ್ದಾರೆ. ಸದ್ಯ ಸಲ್ಮಾನ್ ತನ್ನ ಬಾಮೈದ ಆಯುಶ್ ಶರ್ಮಾರನ್ನು ಬಾಲಿವುಡ್ ಇಂಡಸ್ಟ್ರಿಗೆ ಇಂಟ್ರಡ್ಯೂಸ್ ಮಾಡಲಿದ್ದಾರೆ.

ಈ ಬಗ್ಗೆ ಸಲ್ಮನ್ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದು, ಬಾಮೈದ ಆಯುಶ್ ಶರ್ಮಾಗೆ ಶುಭಾಶಯವನ್ನು ತಿಳಿಸಿದ್ದಾರೆ. ಈಗಾಗಲೇ ‘ಲವ್ ರಾತ್ರಿ’ ಎಂದು ಸಿನಿಮಾಗೆ ಹೆಸರನ್ನು ಅಂತಿಮಗೊಳಿಸಲಾಗಿದೆ. ಟೈಟಲ್ ಕೇಳಲು ತುಂಬಾ ಕ್ಯಾಚಿಯಾಗಿದ್ದು, ಸಿನಿಮಾ ಹೇಗಿರಲಿದೆ ಎಂಬ ಕುತೂಹಲವನ್ನು ಹುಟ್ಟು ಹಾಕಿದೆ.

Love Ratri

ನನ್ನ ನಿರ್ಮಾಣದಲ್ಲಿ ಆಯುಶ್ ಶರ್ಮಾ ಘೋಷಣೆ ಮಾಡಲು ತುಂಬಾ ಖುಷಿಯಾಗುತ್ತಿದೆ. ನಮ್ಮ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಐದನೇ ಸಿನಿಮಾ ಇದಾಗಿದ್ದು, ಅಭಿರಾಜ್ ಮಿನಾವಾಲ ಆ್ಯಕ್ಷನ್ ಕಟ್ ಹೇಳಿದ್ದಾರೆ ಎಂದು ಸಲ್ಮಾನ್ ಟ್ವೀಟ್ ಮಾಡಿದ್ದಾರೆ.

ಸಲ್ಮಾನ್ ಬಾಮೈದ ಆಯುಶ್ ಗೆ ಸಲಹೆಯನ್ನು ನೀಡಿದ್ದಾರೆ. ಕಂಗ್ರಾಟ್ಸ್ ಆಯುಶ್ ಶರ್ಮಾ, ಶ್ರಮ ಮತ್ತು ಶ್ರದ್ಧೆವಹಿಸಿ ಕೆಲಸ ಮಾಡುವ ಸಮಯ ಇದಾಗಿದೆ. ದೇವರು ನಿನಗೆ ಎಲ್ಲ ಯಶಸ್ಸು ನೀಡಲಿ ಎಂದು ಕಿವಿ ಮಾತು ಹೇಳಿದ್ದಾರೆ.

Aayusha Sharma Salman Khan 4

ಇತ್ತ ಸಲ್ಮಾನ್ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಆಯುಶ್, ಈ ಘಟನೆ ನನ್ನ ಜೀವನದಲ್ಲಿ ನಡೆದಿರುವುದು ನನಗೆ ನಂಬಲು ಆಗ್ತಿಲ್ಲ. ಲವ್ ರಾತ್ರಿ ಚಿತ್ರೀಕರಣದಲ್ಲಿ ಭಾಗಿಯಾಗಲು ಕಾಯುತ್ತಿದ್ದೇನೆ. ಈ ಸದಾವಕಾಶ ಒದಗಿಸಿಕೊಟ್ಟಿದ್ದಕ್ಕೆ ಧನ್ಯವಾದ ಅಂತಾ ಉತ್ತರಿಸಿದ್ದಾರೆ.

ಆಯುಶ್ ಮೊದಲ ಸಿನಿಮಾ ಬಾಲಿವುಡ್ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದೆ. ಆದರೆ ಆಯುಶ್ ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇದೂವರೆಗೂ ಅಂತಿಮವಾಗಿಲ್ಲ. ಶೀಘ್ರದಲ್ಲಿಯೇ ಆಯುಶ್ ಗೆ ಜೋಡಿಯಾಗುವ ಲಕ್ಕಿ ಗರ್ಲ್ ಯಾರೆಂಬುದನ್ನ ತಿಳಿಸಲಾಗುತ್ತದೆ ಎಂದು ಚಿತ್ರ ತಂಡ ಹೇಳಿದೆ.

Salmana Khan

Salmana Khan 1

Salmana Khan 2

Aayusha Sharma 2

Aayusha Sharma 3

Aayusha Sharma 1

Aayusha Sharma Salman Khan 2

Share This Article
Leave a Comment

Leave a Reply

Your email address will not be published. Required fields are marked *