– ನಮ್ಮೊಂದಿಗೂ ಸೆಕ್ಸ್ ಮಾಡುವಂತೆ ಗೆಳೆಯರಿಂದ ಕಿರುಕುಳ
– ಕೊನೆಗೆ ನೇಣಿಗೆ ಶರಣಾದ ಯುವತಿ
ಗಾಂಧಿನಗರ: ಪ್ರಿಯಕರ ಸೆಕ್ಸ್ ವಿಡಿಯೋವನ್ನು ಸ್ನೇಹಿತರಿಗೆ ಶೇರ್ ಮಾಡಿದ್ದಕ್ಕೆ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ.
ಇದೀಗ ಮೃತ ಯುವತಿಯ ಪೋಷಕರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ದೂರ ದಾಖಲಿಸಿಕೊಂಡ ಪೊಲೀಸರು ಆಕೆಯ ಪ್ರಿಯಕರ ಮತ್ತು ಸ್ನೇಹಿತರನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಅಹಮದಾಬಾದ್ನ ಗ್ರಾಮವೊಂದರ ಆರೋಪಿ ಯುವಕ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಯುವತಿಯೊಬ್ಬಳ ಪರಿಚಯ ಮಾಡಿಕೊಂಡಿದ್ದನು. ದಿನಕಳೆದಂತೆ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಆರೋಪಿ ಯುವತಿಯ ಜೊತೆ ಪ್ರೀತಿಸುವ ನಾಟಕವಾಡುತ್ತಿದ್ದು, ಮದುವೆಯಾಗುವುದಾಗಿ ಭರವಸೆ ನೀಡಿದ್ದನು.
ಒಂದು ದಿನ ಪ್ರೇಯಸಿಯ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆಕೆಯ ಮನೆಗೆ ಹೋಗಿದ್ದಾನೆ. ಅಲ್ಲಿ ಅವರಿಬ್ಬರು ಸೆಕ್ಸ್ ಮಾಡಿದ್ದಾರೆ. ಈ ವೇಳೆ ಯುವಕ ಆಕೆಗೆ ಗೊತ್ತಿಲ್ಲದ ರೀತಿ ತನ್ನ ಫೋನಿನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ.
ಸ್ವಲ್ಪ ದಿನದ ನಂತರ ಸೆಕ್ಸ್ ವಿಡಿಯೋವನ್ನು ಆರೋಪಿ ಯುವಕರ ತನ್ನ ಸ್ಥಳೀಯ ಸ್ನೇಹಿತರಿಗೆ ಶೇರ್ ಮಾಡಿದ್ದಾರೆ. ಅದನ್ನು ನೋಡಿದ ಯುವಕರು ಆಕೆಗೆ ವಿಡಿಯೋ ತೋರಿಸಿ ತಮ್ಮನೊಂದಿಗೂ ಸೆಕ್ಸ್ ಮಾಡುವಂತೆ ಕಿರುಕುಳ ನೀಡಲು ಶುರು ಮಾಡಿದ್ದಾರೆ. ಈ ವೇಳೆ ಪ್ರಿಯಕರನೇ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಸ್ನೇಹಿತರಿಗೆ ಶೇರ್ ಮಾಡಿರುವುದು ಯುವತಿಗೆ ಗೊತ್ತಾಗಿದೆ.
ಕೊನೆಗೆ ಪ್ರೀತಿಸಿದ ಯುವಕ ಮೋಸ ಮಾಡಿದನೆಂದು ನೊಂದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಯುವತಿಯ ಪೋಷಕರು ಅಹಮದಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆಕೆಯ ಗೆಳೆಯ ಮತ್ತು ಮೂವರು ಸ್ನೇಹಿತರನ್ನು ಬಂಧಿಸಿದ್ದಾರೆ.