ಕುಚಿಕು ಗೆಳೆಯರ ಬಾಕ್ಸಾಫೀಸ್ ವಾರ್- ಡಾಲಿ ‘ಕೋಟಿ’ ಎದುರು ‘ಲವ್ ಲಿ’ ಸಿನಿಮಾ ರಿಲೀಸ್‌ಗೆ ರೆಡಿ

Public TV
1 Min Read
dhananjay 1

ಲೋಕಸಭಾ ಚುನಾವಣೆ (Loksabha Election) ಮುಗಿಯುತ್ತಿದ್ದಂತೆ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದೆ. ಹೀಗಿರುವಾಗ ಕುಚಿಕು ಗೆಳೆಯರಾದ ಡಾಲಿ ಮತ್ತು ವಸಿಷ್ಠ ಸಿಂಹ ನಟಿಸಿರುವ ಸಿನಿಮಾ ಒಂದೇ ದಿನ ರಿಲೀಸ್ ಆಗುತ್ತಿದೆ. ಡಾಲಿ (Daali) ನಟಿಸಿರುವ ‘ಕೋಟಿ’ (Kotee) ಚಿತ್ರ ಮತ್ತು ವಸಿಷ್ಠ ಸಿಂಹ (Vasista Simha) ನಟನೆಯ ‘ಲವ್ ಲಿ’ ಸಿನಿಮಾ ಒಂದೇ ದಿನ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.

ಡಾಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ಹಲವು ವರ್ಷಗಳಿಂದ ಸ್ನೇಹಿತರು. ಈ ಹಿಂದೆ ಒಂದೇ ಸಿನಿಮಾದಲ್ಲಿ ನಟಿಸುವ ಮೂಲಕ ಇಬ್ಬರ ಕಾಂಬಿನೇಷನ್ ಕ್ಲಿಕ್ ಆಗಿದ್ದು ಇದೆ. ಅದಕ್ಕೆ ತಾಜಾ ಉದಾಹರಣೆ ಅಂದರೆ ‘ಟಗರು’ ಚಿತ್ರ. ಆದರೆ ಈಗ ಒಂದೇ ದಿನ ಬೇರೆ ಬೇರೆ ಸಿನಿಮಾಗಳ ಮೂಲಕ ಡಾಲಿ ಮತ್ತು ವಸಿಷ್ಠ ಬರುತ್ತಿದ್ದಾರೆ.

 

View this post on Instagram

 

A post shared by Vasishta N Simha (@imsimhaa)

ಇದೇ ಜೂನ್ 14ರಂದು ಡಾಲಿ ಧನಂಜಯ ನಟಿಸಿರುವ ಕೋಟಿ ಸಿನಿಮಾ ರಿಲೀಸ್ ಆಗುತ್ತಿದೆ, ಇದೇ ದಿನ ವಸಿಷ್ಠ ಸಿಂಹ ನಟಿಸಿರುವ ‘ಲವ್ ಲಿ’ ಸಿನಿಮಾ ಕೂಡ ರಿಲೀಸ್ ಆಗುತ್ತಿರೋದು ವಿಶೇಷ. ಮೊದಲ ಬಾರಿಗೆ ಕುಚಿಕು ಗೆಳೆಯರು ಬಾಕ್ಸಾಫೀಸ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಇಬ್ಬರ ಸಿನಿಮಾ ಮೇಲೂ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ.

ಎರಡು ಸಿನಿಮಾಗಳ ಟ್ರೈಲರ್ ಮತ್ತು ಹಾಡುಗಳಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಧನಂಜಯ ನಟನೆಯ ‘ಕೋಟಿ’ ಚಿತ್ರ ಗೆಲ್ಲುತ್ತಾ ಅಥವಾ ವಸಿಷ್ಠ ನಟಿಸಿರುವ ‘ಲವ್ ಲಿ’ ಚಿತ್ರ ಗೆದ್ದು ಬೀಗುತ್ತಾ ಎಂದು ಕಾದುನೋಡಬೇಕಿದೆ. ಇಬ್ಬರಿಗೂ ಜೂನ್ 14 ಪರೀಕ್ಷೆಯ ದಿನವಾಗಿದ್ದು, ಚಿತ್ರದ ಸಕ್ಸಸ್ ಫಲಿತಾಂಶಕ್ಕಾಗಿ ಕಾಯಬೇಕಿದೆ.

Share This Article