ಲಕ್ನೋ: ಉತ್ತರ ಪ್ರದೇಶದ ಮೀರತ್‍ನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ಈ ಕುರಿತು ಬಿಜೆಪಿ ಸಂಸದರು ಸಹ ಸದನದಲ್ಲಿ ಧ್ವನಿ ಎತ್ತಿದ್ದಾರೆ.
ಬಿಜೆಪಿ ಸಂಸದ ರಾಜೇಂದ್ರ ಅಗರ್ವಾಲ್ ಗುರುವಾರ ಸಂಸತ್‍ನಲ್ಲಿ ಶೂನ್ಯ ವೇಳೆಯ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ದುಬೈನಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ನದೀಮ್ ಎಂಬಾತನ ಮೋಸದಾಟಕ್ಕೆ ಬಲಿಯಾದ ಹುಡುಗಿ ದುಬೈಗೆ ಓಡಿಹೋಗಿದ್ದಾಳೆ ಎಂದು ಆರೋಪಿಸಿದ್ದಾರೆ.
Advertisement
ಇದಕ್ಕೆ ಪುಷ್ಟಿ ನೀಡುವಂತೆ ಬಾಲಕಿಯ ತಂದೆ ಪೋಸ್ಟ್ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂತ್ರಸ್ತೆಯ ತಂದೆ ಕಂಕರ್ ಖೇರಾ ನಿವಾಸಿ ಕಪಿಲ್ ಗುಪ್ತಾ ನವೆಂಬರ್ 17ರಂದು ಭಾವನಾತ್ಮಕ ಟ್ವೀಟ್ ಮಾಡಿದ್ದು, ನಾನು 18 ವರ್ಷದ ಮಗಳ ಅಸಾಹಯಕ ತಂದೆ. ನನ್ನ ಮುಗ್ಧ ಮಗಳು ಲವ್ ಜಿಹಾದ್‍ನಲ್ಲಿ ಸಿಲುಕಿಕೊಂಡಿದ್ದಾಳೆ. ಸ್ವಲ್ಪ ದಿನಗಳಿಂದ ರೋಮಿಯೋ ಎಂದು ಮಾತನಾಡುತ್ತಿದ್ದ ಪಾಕಿಸ್ತಾನ ಮೂಲದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಇವನೇ ನನ್ನ ಮಗಳನ್ನು ದುಬೈ ಕರೆಸಿಕೊಂಡಿದ್ದಾನೆ. ನನ್ನ ಮಗಳು ಈ ರೀತಿ ಮಾಡುತ್ತಾಳೆಂದು ನಾನು ತಿಳಿದಿರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
Advertisement
https://twitter.com/Kapil_Gupta_90/status/1196087244316037123?
Advertisement
ಗುಪ್ತಾ ಅವರ ಟ್ವೀಟ್ ನೋಡಿದ ದುಬೈ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ(ಸಿಜಿಐ), ಈ ವಿಷಯದಲ್ಲಿ ತಮಗೆ ಸಾಧ್ಯವಾದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.
Advertisement
ನಾವು ನಿಮ್ಮ ಕುಟುಂಬದೊಂದಿಗೆ ಮಾತನಾಡಿದ್ದೇವೆ ನಿಮ್ಮ ಮಗಳನ್ನು ಹುಡುಕುವ ಬಗ್ಗೆ ದುಬೈ ಏಜೆನ್ಸಿಗಳೊಂದಿಗೆ ಮಾತನಾಡಿದ್ದೇವೆ. ಯಾವುದೇ ಸಂಪರ್ಕ ಸಂಖ್ಯೆ ಹಾಗೂ ವಿಳಾಸ ಇಲ್ಲದ ಕಾರಣ ಮಾಹಿತಿ ಕಲೆ ಹಾಕುವುದು ತುಂಬಾ ಕಷ್ಟಕರ ಕೆಲಸವಾಗಿದೆ. ಆದರೂ ನಾವು ಪ್ರಯತ್ನ ಬಿಡುವುದಿಲ್ಲ ಎಂದು ದುಬೈನಲ್ಲಿರುವ ಸಿಜಿಐ ಪ್ರತಿಕ್ರಿಯಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಗುಪ್ತಾ ಸಹ ಪ್ರತಿಕ್ರಿಯಿಸಿದ್ದು, ತಕ್ಷಣ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ. ಹುಡುಗಿ ದುಬೈಗೆ ಹೋಗಿದ್ದರಿಂದ ಅವರ ಸಂಪರ್ಕ ಸಂಖ್ಯೆ ಇಲ್ಲ ಎಂದಿದ್ದಾರೆ. ಆದರೆ ಯುವಕನ ಇನ್‍ಸ್ಟಾಗ್ರಾಮ್ ಹಾಗೂ ಫೇಸ್‍ಬುಕ್ ಐಡಿಯನ್ನು ನೀಡಿದ್ದಾರೆ.
https://twitter.com/Kapil_Gupta_90/status/1196087361550970880?
ಫೇಸ್‍ಬುಕ್ ಲವ್: ಸಂತ್ರಸ್ತೆಯ ಕುಟುಂಬಸ್ಥರು ಹೇಳುವಂತೆ, ಹುಡುಗಿಯು ನದೀಮ್‍ನೊಂದಿಗೆ ಇನ್‍ಸ್ಟಾಗ್ರಾಮ್ ಹಾಗೂ ಫೇಸ್ಬುಕ್‍ನಲ್ಲಿ ಪರಿಚಯವಾಗಿದ್ದಾಳೆ. ನವೆಂಬರ್ 4ರಂದು ಅವಳ ಪಾಸ್‍ಪೋರ್ಟ್ ತಯಾರಾಗಿದೆ. ಇದಾದ ನಾಲ್ಕು ದಿನಗಳ ಬಳಿಕ ಹುಡುಗಿ ಕಾಣೆಯಾಗಿದ್ದಾಳೆ. ಮನೆಯಲ್ಲಿದ್ದ 7 ಸಾವಿರ ರೂ. ಹಾಗೂ ಅವಳ ಶಾಲಾಕಾಲೇಜು ದಾಖಲಾತಿಗಳನ್ನು ತೆಗೆದುಕೊಂಡು ಹೋಗಿದ್ದಾಳೆ. ನವೆಂಬರ್ 8ರ ರಾತ್ರಿ ದೆಹಲಿ ವಿಮಾನ ನಿಲ್ದಾಣದಿಂದ ದುಬೈಗೆ ಹೋಗಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನ ಮೂಲದ ನದೀಮ್ ದುಬೈನ ಪಂಚತಾರಾ ಹೋಟೆಲ್‍ನಲ್ಲಿ ಮ್ಯಾನೇಜರ್ ಆಗಿದ್ದಾನೆ ಎಂದು ವರದಿಯಾಗಿದೆ. ನದೀಮ್ ತನ್ನ ಫೇಸ್‍ಬುಕ್ ಖಾತೆಯಲ್ಲಿ ‘ಐ ಲವ್ ಪಾಕಿಸ್ತಾನ’ ಎಂದು ಪೋಸ್ಟ್ ಮಾಡಿದ್ದನು.