ಬೆಂಗಳೂರು: ಗುಜರಾತ್ ಯುವತಿಯ ಲವ್ ಜಿಹಾದ್ ಪ್ರಕರಣದಲ್ಲಿ ಡಿಸಿ ಮನೆಯಲ್ಲಿ ದಾಳಿ ನಡೆಸಿದ ಎನ್‍ಐಎಗೆ ಮಹತ್ವದ ಸುಳಿವು ಸಿಕ್ಕಿದೆ.
ಕಲಬುರಗಿ ಜಿಲ್ಲೆ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಇರ್ಷಾದುಲ್ಲಾ ಖಾನ್ ಪತ್ನಿ ಹಿಂದೂ ಯುವತಿ ರೇವತಿ ಹೆಸರಲ್ಲಿ ಫೇಸ್ ಬುಕ್ ಅಕೌಂಟ್ ಕ್ರಿಯೆಟ್ ಮಾಡಿದ್ದಳು. ಆ ಮೂಲಕ ಹಿಂದೂ ಯುವತಿಯರ ಸೆಳೆಯುತ್ತಾ ಅವರ ಜೊತೆ ಮೆಸೇಂಜರ್ ನಲ್ಲಿ ಮೆಸೇಜ್ ಮಾಡಿ ಮಹಿಳೆ ಅವರನ್ನು ಭೇಟಿ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
Advertisement
ಯುವತಿಯರನ್ನು ಭೇಟಿಯಾದ ಬಳಿಕ ಡಿಸಿ ಪತ್ನಿ ಮುಸ್ಲಿಂ ಧರ್ಮ ಮಹಿಳೆಯರಿಗೆ ಯಾವ ರೀತಿ ಗೌರವ ಕೊಡುತ್ತೆ ಹಾಗೂ ಮಹಿಳೆಯರ ಸುರಕ್ಷತೆಯ ಬಗ್ಗೆ ಹೇಳಿಕೊಡುತ್ತಿದ್ದಳು. ಬಳಿಕ ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿತ್ತು ಎಂದು ಎನ್‍ಐಎ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
Advertisement
ಕೇರಳದ ಯುವತಿಯ ಮೇಲೆ ಅತ್ಯಾಚಾರವಾದ ಬಳಿಕ ಯುವತಿ ಡಿಸಿ ಮನೆಗೆ ಬಂದಿದ್ದಳು. ಆಗ ಪ್ರಿಯಕರ ಅತ್ಯಾಚಾರವಾದ ವೈದ್ಯಕೀಯ ವಿದ್ಯಾರ್ಥಿಗೆ ಸೆಕ್ಸ್ ಬಗ್ಗೆ ಪಾಠ ಹೇಳುತ್ತಿದ್ದನು. ದಿನವೊಂದಕ್ಕೆ ಐದು ಬಾರಿ ಅಲ್ಲಾನ ಪ್ರಾರ್ಥನೆ ಮಾಡಬೇಕು. ಪ್ರಾರ್ಥನೆ ಮಾಡಿದರೆ ದೇವರು ಒಲಿಯುತ್ತಾನೆ. ದೇವರ ಒಲವು ಸಿಗಬೇಕು ಎಂದರೆ ಸೌದಿಗೆ ಹೋಗಬೇಕು ಎಂದು ಯುವಕ ಹೇಳಿದ್ದನು.
Advertisement
Advertisement
ನಂತರ ಸೌದಿಯಲ್ಲಿ ಕೂಡ ಶೇಖ್ ಗಳೊಂದಿಗೆ ಹಾಗೂ ಮೌಲ್ವಿಗಳೊಂದಿಗೆ ದೇಹ ಹಂಚಿಕೊಂಡರೆ ದೇವರಿಗೆ ಪ್ರೀತಿ ಗಳಿಸುತ್ತಿಯಾ ಎಂದು ಹೇಳಿದ್ದ. ಯುವಕ ಅಲ್ಲದೇ ಶೇಖ್‍ಗಳು ಸಹ ಯುವತಿ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ ಎನ್ನುವ ವಿಚಾರ ಎನ್‍ಐಎ ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?
2013ರಲ್ಲಿ ಆ್ಯನಿಮೇಶನ್ ವ್ಯಾಸಂಗಕ್ಕಾಗಿ ನಾನು ಬೆಂಗಳೂರಿಗೆ ಬಂದಿದ್ದೆ. ಆಗ ಕೇರಳದ ಕಣ್ಣೂರಿನ ಯುವಕ ಮುಹಮ್ಮದ್ ರಿಯಾಜ್ ಪರಿಚಯವಾಯಿತ್ತು. ನಂತರ ನಮ್ಮಿಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಆದಾದ ಬಳಿಕ 2015ರಲ್ಲಿ ರಿಯಾಜ್ ತಾನು ವಾಸವಿರುವ ಮನೆಗೆ ನನ್ನನ್ನು ಕರೆಸಿಕೊಂಡು ನನ್ನ ಜೊತೆ ಸೆಕ್ಸ್ ನಡೆಸಿದ್ದನು. ನಂತರ ಅದನ್ನು ವಿಡಿಯೋ ಮಾಡಿಕೊಂಡು ನನಗೆ ಬ್ಲ್ಯಾಕ್‍ಮೇಲ್ ಮಾಡಲು ಶುರು ಮಾಡಿದ್ದನು ಎಂದು ಯುವತಿ ಆರೋಪಿಸಿದ್ದಳು.
ಇದಾದ ಬಳಿಕ 2016ರ ಮೇ ತಿಂಗಳಲ್ಲಿ ರಿಯಾಜ್ ಬೆಂಗಳೂರಿನ ಹೆಬ್ಬಾಳದಲ್ಲಿರುವ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದ. ನಂತರ ಯುವತಿಯನ್ನು ಕೇರಳಕ್ಕೆ ಕರೆದೊಯ್ದು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿ ಮುಸ್ಲಿಂ ಹೆಸರಿನಲ್ಲೇ ಪಾಸ್‍ಪೋರ್ಟ್ ಮಾಡಿಸಿದ್ದನು. ಕೌಟುಂಬಿಕ ಕಲಹದಿಂದ ಯುವತಿ 2016ರಲ್ಲಿ ಗುಜರಾತ್‍ಗೆ ಹಿಂತಿರುಗಿದ್ದಳು. ಆಗ ರಿಯಾಜ್ ಕೇರಳ ಹೈಕೋರ್ಟ್‍ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಪತ್ನಿಯನ್ನು ಹುಡುಕಿಕೊಡಿ ಎಂದು ಕೋರಿದ್ದನು. ನಂತರ ಪೊಲೀಸರು ಯುವತಿ ಗುಜರಾತ್‍ನಲ್ಲಿ ಇರುವುದನ್ನು ಪತ್ತೆ ಮಾಡಿದರು. ಆಗ ಯುವತಿ ನಾನು ರಿಯಾಜ್ ಜೊತೆ ಇರುತ್ತೇನೆ ಎಂದು ತಿಳಿಸಿದಳು. ಆ ಕಾರಣಕ್ಕಾಗಿ ಯುವತಿಯನ್ನು ರಿಯಾಜ್ ಜೊತೆ ಕಳುಹಿಸಿಕೊಡಲು ಹೈಕೋರ್ಟ್ ಆದೇಶಿಸಿತ್ತು.