Love Jihad| ನಾಪತ್ತೆಯಾಗಿದ್ದ ಯುವತಿ ಅನ್ಯಕೋಮಿನ ಯುವಕನೊಂದಿಗೆ ಪತ್ತೆ

Public TV
1 Min Read
Love Jihad

ಮಂಗಳೂರು: ನಾಪತ್ತೆಯಾಗಿದ್ದ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನ ಜೊತೆ ಪತ್ತೆಯಾಗಿದ್ದು ಲವ್ ಜಿಹಾದ್ (Love Jihad) ಆರೋಪ ಕೇಳಿಬಂದಿದೆ.

ನಾಪತ್ತೆಯಾಗಿದ್ದ ಮುಸ್ಲಿಂ ಯುವಕ ಮಹಮ್ಮದ್ ಅಶ್ಫಾಕ್ ಹಾಗೂ ಹಿಂದೂ ಯುವತಿಯನ್ನು ಪಾಂಡೇಶ್ವರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈಗಾಗಲೇ ಅಶ್ಫಾಕ್‍ಗೆ ಮದುವೆಯಾಗಿದೆ. ಅಲ್ಲದೇ ಆತನ ವಿರುದ್ಧ ಕಾಸರಗೋಡು ವಿದ್ಯಾನಗರ ಠಾಣೆಯಲ್ಲಿ 8 ಕ್ರಿಮಿನಲ್ ಪ್ರಕರಣಗಳಿವೆ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: Valmiki Scam | ಮಾಲ್‌, ಪಾರ್ಕ್‌, ಜಂಕ್ಷನ್‌ನಲ್ಲಿ ಕೋಟಿ ಕೋಟಿ ಸಂದಾಯ

ಮಗಳು ನಾಪತ್ತೆಯಾಗಿದ್ದ ಬಗ್ಗೆ ಯುವತಿಯ ತಂದೆ ಮಂಗಳೂರು ಪೊಲೀಸ್ ಕಮೀಷನರ್‌ಗೆ ದೂರು ನೀಡಿದ್ದಾರೆ. ದೂರಿನಲ್ಲಿ ಕಾಲೇಜಿನಲ್ಲಿದ್ದ ಯುವತಿಯನ್ನು ಅಶ್ಫಾಕ್ ಅಪಹರಣ ಮಾಡಿ ಇಸ್ಲಾಂಗೆ ಮತಾಂತರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಪ್ರಕರಣವನ್ನು ಲವ್ ಜಿಹಾದ್ ಎಂದು ವಿಎಚ್‍ಪಿ ಆರೋಪಿಸಿದ್ದು, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದೆ. ಇದನ್ನೂ ಓದಿ: ಮುಂಬೈ ಹಿಟ್&ರನ್ ಕೇಸ್ – ಆರೋಪಿಗೆ ಮದ್ಯ ನೀಡಿದ್ದ ಪಬ್ ನೆಲಸಮ

Share This Article