ಮದ್ವೆಗೂ ಮುನ್ನ ಮಗುವಿಗೆ ಜನ್ಮ – ಆಪರೇಷನ್ ಥಿಯೇಟರ್‌ನಲ್ಲೇ ಅಪ್ರಾಪ್ತೆ ಆತ್ಮಹತ್ಯೆ

Public TV
1 Min Read
SUICIDE 1

– ರಾತ್ರಿ ಒಬ್ಬಳೇ ಆಸ್ಪತ್ರೆಗೆ ಬಂದ 17ರ ಹುಡುಗಿ
– ಅಪ್ರಾಪ್ತೆ ಗರ್ಭಿಣಿ ಎಂದು ಮನೆಯವರಿಗೂ ಗೊತ್ತಿಲ್ಲ

ಭೋಪಾಲ್: 17ರ ಅಪ್ರಾಪ್ತೆಯೊಬ್ಬಳು ಮದುವೆಗೂ ಮುನ್ನ ಮಗುವಿಗೆ ಜನ್ಮ ನೀಡಿದ್ದು, ಆಪರೇಷನ್ ಥಿಯೇಟರ್‌ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಸದ್ಯ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

suicide 3 043020085254

ಮಂಗಳವಾರ ರಾತ್ರಿ ಹುಡುಗಿ ಖಾಸಗಿ ಆಸ್ಪತ್ರೆಗೆ ಒಬ್ಬಳೆ ಬಂದಿದ್ದಾಳೆ. ನಂತರ ವೈದ್ಯರು ಹುಡುಗಿಯನ್ನು ದಾಖಲಿಸಿಕೊಂಡು ಹೆರಿಗೆ ಮಾಡಿಸಿದ್ದಾರೆ. ಈ ವೇಳೆ ಅಪ್ರಾಪ್ತೆ ಆರೋಗ್ಯಕರವಾದ ಮಗುವಿಗೆ ಜನ್ಮ ನೀಡಿದ್ದಾಳೆ.

ಸ್ವಲ್ಪ ಸಮಯದ ನಂತರ ಹುಡುಗಿಯನ್ನು ಸಣ್ಣ ಆಪರೇಷನ್ ಥಿಯೇಟರ್‌ಗೆ ಶಿಫ್ಟ್ ಮಾಡಿದ್ದಾರೆ. ಈಕೆಯ ಜೊತೆ ನರ್ಸ್ ಇದ್ದರು. ಆದರೆ ಅಪ್ರಾಪ್ತೆ ನರ್ಸ್ ಗೆ ಕುಡಿಯಲು ನೀರು ಕೇಳಿದ್ದಾಳೆ. ನೀರು ತರಲು ನರ್ಸ್ ಹೋಗುತ್ತಿದ್ದಂತೆ ಅಪ್ರಾಪ್ತೆ ಆಪರೇಷನ್ ಥಿಯೇಟರ್ ರೂಮಿನ ಬಾಗಿಲು ಹಾಕಿಕೊಂಡು ದುಪ್ಪಟ್ಟದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

the flip side of love

ನರ್ಸ್ ಬರುವಷ್ಟರಲ್ಲಿ ಹುಡುಗಿ ಮೃತಪಟ್ಟಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ವಿಚಾರ ತಿಳಿದ ಪೊಲೀಸರು ಆಸ್ಪತ್ರೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ನಂತರ ಆಕೆಯ ಕುಟುಂಬದವರನ್ನು ಪತ್ತೆ ಮಾಡಿ ಮೃತದೇಹವನ್ನು ಹಸ್ತಾಂತರಿಸಿದ್ದಾರೆ. ಆದರೆ ಕುಟುಂಬದವರಿಗೆ ಆಕೆ ಗರ್ಭಿಣಿಯಾಗಿದ್ದಳು ಎಂಬ ವಿಚಾರ ಗೊತ್ತಿರಲಿಲ್ಲ ಎಂದು ವರದಿಯಾಗಿದೆ.

ಮೃತ ಹುಡುಗಿ ತಮ್ಮ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು ಎಂದು ತಿಳಿದುಬಂದಿದೆ. ತಮ್ಮ ಪ್ರೀತಿ ವಿಚಾರವೂ ಮನೆಯವರಿಗೆ ಗೊತ್ತಿರಲಿಲ್ಲ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಯುವಕನಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

sucide 1

Share This Article
Leave a Comment

Leave a Reply

Your email address will not be published. Required fields are marked *