ಮೈಕ್‌ ದಂಗಲ್‌ – ಇಂದು ಬಿಜೆಪಿ ಮುಖಂಡರ ಮನೆ ಮುಂದೆ ಶ್ರೀರಾಮ ಸೇನೆಯಿಂದ ಪ್ರತಿಭಟನೆ

Public TV
1 Min Read
loudspeakers

ಧಾರವಾಡ: ರಾಜ್ಯದಲ್ಲಿ ಮೈಕ್ ದಂಗಲ್‍ನ 2ನೇ ಚಾಪ್ಟರ್ ಶುರು ಮಾಡಲು ಶ್ರೀರಾಮಸೇನೆ ಸಜ್ಜಾಗಿದೆ. ಸುಪ್ರೀಂಕೋರ್ಟ್ ಆದೇಶದನ್ವಯ ಮೈಕ್ ತೆರವು ವಿಳಂಬವಾಗಿರೋದ್ರಿಂದ ಇವತ್ತು ಬಿಜೆಪಿ ಮುಖಂಡರ ಮನೆ ಮುಂದೆ ಪ್ರತಿಭಟನೆ ಆಯೋಜಿಸಲಾಗಿದೆ.

Pramod Muthalik 9

ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಮನೆ ಮುಂದೆ ಧರಣಿಗೆ ಶ್ರೀರಾಮಸೇನೆ ಕರೆ ಕೊಟ್ಟಿದೆ. ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಪ್ರತಿಭಟನೆಗೆ ಹಲವು ಹಿಂದೂಪರ ಸಂಘಟನೆಗಳು ಬೆಂಬಲ ಕೊಟ್ಟಿವೆ. ಇದನ್ನೂ ಓದಿ: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದಕ್ಕೆ ಮಗಳನ್ನು ಕೊಂದ ಪೋಷಕರು

web bjp logo 1538503012658

ಈಗಾಗಲೇ ಸೋಷಿಯಲ್ ಮೀಡಿಯಾ ಮೂಲಕ ಧರಣಿಯಲ್ಲಿ ಭಾಗವಹಿಸುವಂತೆ ಶ್ರೀರಾಮಸೇನೆಯ ಸದಸ್ಯರಿಗೆ, ಪದಾಧಿಕಾರಿಗಳಿಗೆ, ಹಿಂದೂಪರ ಸಂಘಟನೆ ಮತ್ತು ಹಿಂದೂಗಳಿಗೆ ಸಂದೇಶ ರವಾನಿಸಲಾಗಿದೆ. ಈ ಬಗ್ಗೆ ಜೂನ್ 2ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮುತಾಲಿಕ್ ಮಾಹಿತಿ ಕೊಟ್ಟಿದ್ದರು. ಜೂನ್ 8ರಂದು ಬಿಜೆಪಿ ಎಂಎಲ್‍ಎಗಳ ಕಚೇರಿ ಮುಂದೆ ಧರಣಿ ಕೂರುವ ಬಗ್ಗೆ ಎಚ್ಚರಿಸಿದ್ದರು. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಟ್ವೀಟ್ – ಬಿಜೆಪಿ ಮುಖಂಡ ಅರೆಸ್ಟ್

Share This Article
Leave a Comment

Leave a Reply

Your email address will not be published. Required fields are marked *