ಬೆಂಗಳೂರಿನಲ್ಲಿ ಲೌಡ್‌ ಸ್ಪೀಕರ್‌ ಸಕ್ರಮ – ಯಾವ ವಲಯದಿಂದ ಎಷ್ಟು ಅರ್ಜಿ ಸಲ್ಲಿಕೆ?

Public TV
1 Min Read
hindu muslim christian

ಬೆಂಗಳೂರು: ಧಾರ್ಮಿಕ ಕೇಂದ್ರಗಳಲ್ಲಿ ಅಳವಡಿಸಲಾಗಿರುವ ಲೌಡ್‌ ಸ್ಪೀಕರ್‌ ಸಕ್ರಮಗೊಳಿಸಲು ನಗರದ ಠಾಣೆಗಳಲ್ಲಿ ಸಾಲು ಸಾಲು ಅರ್ಜಿ ಸಲ್ಲಿಕೆಯಾಗಿದೆ.

ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಕೆ ವಿಚಾರ ತಾರಕಕ್ಕೇರಿದ್ದರಿಂದ ಸಕ್ರಮಕ್ಕೆ ಸರ್ಕಾರ 15 ದಿನಗಳ ಗಡುವು ನೀಡಿ ಡೆಡ್‍ಲೈನ್ ಕೊಟ್ಟಿತ್ತು. ಅಲ್ಲದೇ ಯಾವುದೇ ಧಾರ್ಮಿಕ ಕೇಂದ್ರಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಪೊಲೀಸರ ಅನುಮತಿ ಕಡ್ಡಾಯ ಎಂದು ಸರ್ಕಾರ ಆದೇಶಿಸಿತ್ತು.

loudspeakers

ಈ ಬೆನ್ನಲ್ಲೇ ನಗರದ ಎಂಟೂ ವಿಭಾಗಗಳ ಎಸಿಪಿ ಕಚೇರಿಗಳು, ಠಾಣೆಗಳಿಗೆ ಸಾಲು ಸಾಲು ಅರ್ಜಿಗಳು ಬಂದಿವೆ. ನಗರದಾದ್ಯಂತ 700ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದರಲ್ಲಿ ಮಸೀದಿ ಅರ್ಜಿಗಳೇ ಜಾಸ್ತಿ ಇದೆ. 62 ದೇವಾಲಯ, 611 ಮಸೀದಿ, 42 ಚರ್ಚ್, ಇತರೆ ಕೇಂದ್ರಗಳಿಂದ 2 ಅರ್ಜಿಗಳು ಸಲ್ಲಿಕೆಯಾಗಿವೆ. ಇದನ್ನೂ ಓದಿ: ಧರ್ಮ ದಂಗಲ್‌ಗೆ ತೆರೆ ಎಳೆಯಲು ಮುಂದಾದ ಬಿಜೆಪಿ – ರಾಜ್ಯ ಘಟಕಗಳಿಗೆ ಹೈಕಮಾಂಡ್‌ ವಾರ್ನಿಂಗ್‌

ಯಾವ ವಲಯದಿಂದ ಎಷ್ಟು?
ಬೆಂಗಳೂರು ಕೇಂದ್ರ ವಿಭಾಗ 36 ಅರ್ಜಿ – ದೇವಾಲಯ 1, ಮಸೀದಿ 32, 2 ಚರ್ಚ್
ಪೂರ್ವ ವಿಭಾಗ 233 ಅರ್ಜಿ – ದೇವಾಲಯ 22, ಮಸೀದಿ 191, 20 ಚರ್ಚ್
ಪಶ್ಚಿಮ ವಿಭಾಗ 114 ಅರ್ಜಿ – ದೇವಾಲಯ 5, ಮಸೀದಿ 108, 1 ಚರ್ಚ್

mosque-loudspeakers
ಸಾಂದರ್ಭಿಕ ಚಿತ್ರ

ದಕ್ಷಿಣ ವಿಭಾಗ 47 ಅರ್ಜಿ – ದೇವಾಲಯ 2, ಮಸೀದಿ 43, ಇತರೆ 2
ಉತ್ತರ ವಿಭಾಗ 101 ಅರ್ಜಿ – ದೇವಾಲಯ 10, ಮಸೀದಿ 79, 12 ಚರ್ಚ್
ಈಶಾನ್ಯ ವಿಭಾಗ 86 ಅರ್ಜಿ – ದೇವಾಲಯ 18, ಮಸೀದಿ 66, 2 ಚರ್ಚ್

ಆಗ್ನೇಯ ವಿಭಾಗ 67 ಅರ್ಜಿ – ದೇವಾಲಯ 3, ಮಸೀದಿ 60, 4 ಚರ್ಚ್
ವೈಟ್ ಫೀಲ್ಡ್ ವಿಭಾಗ 33 ಅರ್ಜಿ – ದೇವಾಲಯ 1, ಮಸೀದಿ 31, 1 ಚರ್ಚ್

Share This Article
Leave a Comment

Leave a Reply

Your email address will not be published. Required fields are marked *