– ಅವಶ್ಯಕತೆ ಇದ್ದಾಗ ಮಾತ್ರ ಹೆಚ್ಚು ಸಮಯ ಧ್ವನಿವರ್ಧಕ ಬಳಕೆ
ಬೆಂಗಳೂರು: ಹಿಜಬ್ ಬಳಿಕ ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮರಿಗೆ ನಿಷೇಧ, ಹಲಾಲ್ ಕಟ್ ಅಭಿಯಾನ ಮಾಡಿದ್ದ ಹಿಂದೂ ಸಂಘಟನೆಗಳು ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಅಭಿಯಾನ ಆರಂಭಿಸಿವೆ.
ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಇರುವುದರಿಂದ ಹಿರಿಯ ನಾಗರಿಕರಿಗೆ, ಮಕ್ಕಳಿಗೆ ಸಮಸ್ಯೆ ಆಗುತ್ತಿದೆ. ಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸುತ್ತಿವೆ.
Advertisement
Advertisement
ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಸಂಬಂಧ ಈ ಹಿಂದೆಯೇ ವಕ್ಫ್ ಬೋರ್ಡ್ ಸುತ್ತೋಲೆ ಹೊರಡಿಸಿತ್ತು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ರವರೆಗೆ ದರ್ಗಾದಲ್ಲಿ ಧ್ವನಿವರ್ಧಕ ಬಳಕೆ ನಿಷೇಧ ಹೇರಿ 2021ರಲ್ಲಿಯೇ ವಕ್ಫ್ ಮಂಡಳಿ ಮಹತ್ವದ ಸುತ್ತೋಲೆ ಹೊರಡಿಸಿತ್ತು. ಶಬ್ಧ ಮಾಲಿನ್ಯ ನಿಯಂತ್ರಣ ನಿಯಮಾನುಸಾರ ಸುತ್ತೋಲೆ ಹೊರಡಿಸಿತ್ತು. ಇದನ್ನೂ ಓದಿ: ಮಸೀದಿ ಸಮೀಪ ಹನುಮಾನ್ ಚಾಲೀಸಾ ಹಾಕಿದ ಎಂಎನ್‌ಎಸ್
Advertisement
ಪಬ್ಲಿಕ್ ಟಿವಿಗೆ ವಕ್ಫ್ ಮಂಡಳಿ ಅಧ್ಯಕ್ಷ ಶಾಫೀ ಸ ಅದಿ ಪ್ರತಿಕ್ರಿಯಿಸಿದ ಅವರು, ಮಸೀದಿಗಳು ಮತ್ತು ದರ್ಗಾಗಳಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕಗಳನ್ನು ಬಳಸಬಾರದು. ಧ್ವನಿವರ್ಧಕವನ್ನು ಅಝಾನ್, ಸಾವು, ಸಮಾಧಿಯ ಸಮಯ ಮತ್ತು ಚಂದ್ರನನ್ನು ನೋಡುವುದು ಸೇರಿದಂತೆ ಇನ್ನಿತರ ಪ್ರಮುಖ ಘೋಷಣೆಗಳಿಗೆ ಮಾತ್ರ ಬಳಸಬೇಕು ಎಂದು ಸುತ್ತೋಲೆಯಲ್ಲಿದೆ ಎಂದು ವಿವರಿಸಿದರು.
Advertisement
ಹಗಲಿನಲ್ಲಿ ಬಳಸುವ ಧ್ವನಿವರ್ಧಕಗಳು ಶಬ್ದಕ್ಕೆ ಸಂಬಂಧಿಸಿದಂತೆ ಸುತ್ತುವರಿದ ಗಾಳಿಯ ಗುಣಮಟ್ಟದ ಮಾನದಂಡಗಳ ಪ್ರಕಾರ ಇರಬೇಕು. ಯಾವುದೇ ಸಂದರ್ಭದಲ್ಲಿ ಶಬ್ದಗಳನ್ನು ಹೊರಸೂಸುವ ಪಟಾಕಿಗಳನ್ನು ಮಸೀದಿ, ದರ್ಗಾದ ಆವರಣದಲ್ಲಿ ಸುಡಬಾರದು. ಲಾತ್, ಜುಮಾ ಖುತ್ಬಾ, ಬಯಾನ್ಸ್, ಧಾರ್ಮಿಕ ಇನ್ನಿತರ ಕಾರ್ಯಕ್ರಮಗಳಿಗೆ ಮಾತ್ರ ಮಸೀದಿ ಅಥವಾ ದರ್ಗಾದ ಆವರಣದೊಳಗೆ ಇರುವ ಮೈಕ್‍ಗಳನ್ನು ಬಳಸಬೇಕು ಅಂತ ವಕ್ಫ್ ಮಂಡಳಿ ತಿಳಿಸಿದೆ ಎಂದರು.
ಕೋರ್ಟ್‍ಗಳು ಹೇಳಿದ್ದೇನು?
ಧ್ವನಿವರ್ಧಕ ಬಳಕೆ ನಿಷೇಧ ಮಾಡುವಂತೆ ಕೋರಿ ಸುಪ್ರೀಂಕೋರ್ಟ್‍ನಲ್ಲಿ ಈ ಹಿಂದೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಮಸೀದಿ, ದೇವಸ್ಥಾನಗಳಲ್ಲಿ ಧ್ವನಿವರ್ಧಕ ನಿಯಂತ್ರಣ ಮಾಡಲು ಸೂಚನೆ ನೀಡಿತ್ತು. 10 ಡೆಸಿಬಲ್ ಗಿಂತ ಕಡಿಮೆ ಧ್ವನಿವರ್ಧಕ ಮಾತ್ರ ಹಗಲು ಹೊತ್ತಿನಲ್ಲಿ ಬಳಸಬಹುದು. ಮಾಲಿನ್ಯ ನಿಯಂತ್ರಣ ಮಂಡಳಿಯ ಕಾಯ್ದೆಯ ಪ್ರಕಾರ ಆದೇಶ ಪಾಲನೆಗೆ ಪೊಲೀಸರಿಗೆ ಹಾಗೂ ಸರ್ಕಾರಕ್ಕೆ ಸೂಚನೆ ಹೊರಡಿಸಿತ್ತು.
ಪೊಲೀಸ್ ಇಲಾಖೆಗಳನ್ನು ಬಳಸಿಕೊಂಡು ಧ್ವನಿವರ್ಧಕ ನಿಯಂತ್ರಣ ಮಾಡಬೇಕು. ಜನರಿಗೆ ಕಿರಿಕಿರಿ ಮಾಡುವ ಧ್ವನಿವರ್ಧಕ ವಿರುದ್ಧ ಕ್ರಮಕೈಗೊಳ್ಳಬೇಕು. ಪೊಲೀಸ್ ಇಲಾಖೆಯ ಮೂಲಕ ನೋಟಿಸ್ ನೀಡಬೇಕು. ನೋಟಿಸ್‍ಗೆ ಎಚ್ಚೆತ್ತುಕೊಳ್ಳದೇ ಇದ್ದರೆ ಕಾನೂನುಕ್ರಮ ಕೈಗೊಳ್ಳಲು ಆದೇಶ ತೆಗೆದುಕೊಳ್ಳಬಹುದು ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ಕೊಟ್ಟಿತ್ತು. ಧ್ವನಿವರ್ಧಕದ ಬಗ್ಗೆ ಹೈಕೋರ್ಟ್‍ಗೆ ಸರ್ಕಾರ ಸಹ ವರದಿಯನ್ನು ಸಲ್ಲಿಕೆ ಮಾಡಿತ್ತು. ಇದನ್ನೂ ಓದಿ: ರಾಜ್ ಠಾಕ್ರೆ ಮನೆಗೆ ಭೇಟಿ ನೀಡಿದ ನಿತಿನ್ ಗಡ್ಕರಿ – ಉದ್ದೇಶವೇನು?
ಅವಶ್ಯಕತೆ ಇದ್ದಾಗ ಮಾತ್ರ ಹೆಚ್ಚು ಬಳಕೆ
ರಾತ್ರಿ ಹತ್ತರಿಂದ ಬೆಳಗ್ಗೆ 6 ರವರೆಗೆ ಧ್ವನಿವರ್ಧಕ ನಿಷೇಧ ಮಾಡಲಾಗಿದ್ದು, ಶಬ್ಧಮಾಲಿನ್ಯ ನಿಯಂತ್ರಣ ನಿಯಮದಡಿ ಈ ರೂಲ್ಸ್ ಕರ್ನಾಟಕದಲ್ಲಿ ಜಾರಿಯಾಗಿದೆ. ನಿಷೇಧ ಇದ್ದರೂ ರಾಷ್ಟ್ರೀಯ ಹಬ್ಬ, ಸಾರ್ವಜನಿಕ ಹಬ್ಬದಲ್ಲಿ ಮಾತ್ರ ರಾತ್ರಿ 12 ರವರೆಗೆ, ಕೇವಲ 15 ದಿನದ ಅವಧಿಯವರೆಗೆ ಬಳಕೆ ಮಾಡಲು ಅನುಮತಿ ನೀಡಲಾಗಿದೆ.