– ಮೇ 1ರ ವರೆಗೆ ಗಡುವು
– ಭಜನೆ, ಸುಪ್ರಭಾತ ಹಾಕಿಸುತ್ತೇವೆ
ಬೆಂಗಳೂರು: ಸರ್ಕಾರಕ್ಕೆ ಮೇ 1ರ ವರೆಗೆ ಗಡುವು ಕೊಡುತ್ತೇವೆ. ಅಷ್ಟರೊಳಗೆ ಮಸೀದಿಗಳ ಧ್ವನಿವರ್ಧಕಗಳನ್ನು ತೆಗೆಸದಿದ್ದರೆ, ಮೇ 9 ರಂದು ಕರ್ನಾಟಕದ ಎಲ್ಲಾ ದೇವಾಲಯಗಳಲ್ಲೂ ಲೌಡ್ ಸ್ಪೀಕರ್ ಮೂಲಕ ಭಜನೆ, ಸುಪ್ರಭಾತಗಳನ್ನು ಹಾಕಿಸುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Advertisement
Advertisement
ನಾವು ಈಗಾಗಲೇ ನೂರಾರು ದೇವಾಲಯಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಮಠಾಧೀಶರೊಂದಿಗೂ ಮಾತನಾಡಲಿದ್ದೇವೆ. ಮೇ 1 ರೊಳಗೆ ಮಸೀದಿಗಳ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ತೆಗೆಸಬೇಕು. ಇಲ್ಲದೇ ಇದ್ದರೆ ಮೇ 9 ರಂದು ಎಲ್ಲಾ ದೇವಸ್ಥಾನಗಳಲ್ಲಿ ಲೌಡ್ ಸ್ಪೀಕರ್ ಮೊಳಗುವುದು ಖಚಿತ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಎಲ್ಲಿಯೇ ಕೊಮು ಗಲಭೆ ನಡೆದರೂ ಅದಕ್ಕೆ ಕಾಂಗ್ರೆಸ್ ನೇರ ಹೊಣೆ: ಅಶೋಕ್
Advertisement
ಇದೇ ವೇಳೆ ಮಾತನಾಡಿದ ಮುತಾಲಿಕ್ ಹುಬ್ಬಳಿಯ ವಾಣಿ ಬಡಾವಣೆ ಅಕ್ರಮವಾಗಿ ನಿರ್ಮಾಣವಾಗಿದೆ. ಇದಕ್ಕೆ ಮೊದಲು ಜೆಸಿಬಿ ಹಾಕಿ ಕಿತ್ತು ಬಿಡಿ. ಹುಬ್ಬಳ್ಳಿಯಲ್ಲಿ ಗಲಭೆಯಾದರೂ ಎಚ್ಚೆತ್ತುಕೊಳ್ಳಿ. ಮೊನ್ನೆ ಗಲಭೆಯಾಗಿರುವ ಸಂದರ್ಭದಲ್ಲಿ ಅತೀ ಹೆಚ್ಚು ಜನ ಈ ಬಡಾವಣೆಯಲ್ಲೇ ಸೇರಿದ್ದರು ಎಂದು ತಿಳಿಸಿದರು.
Advertisement
ಇದನ್ನು ಒಡೆದು ಹಾಕಲು ಸರ್ಕಾರಕ್ಕೆ ಏನು ಭಯ? ಬಿಜೆಪಿ ಸರ್ಕಾರ ಯಾವುದಕ್ಕೆ ಭಯ ಪಡುತ್ತಿದೆ? ಇದನ್ನು ಒಡೆಯದೇ ಹೋದರೆ ನಾವು ಲೋಕಾಯುಕ್ತ ಕಚೇರಿ ಮುಂಭಾಗ ಪ್ರತಿಭಟನೆ ಮಾಡುತ್ತೇವೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ದೆಹಲಿಯಲ್ಲಿ ಬುಲ್ಡೋಜರ್ ಕಾರ್ಯಾಚರಣೆಗೆ ಸುಪ್ರೀಂ ಬ್ರೇಕ್