ಬೆಂಗಳೂರು: ಮಂಡ್ಯ, ಬೆಂಗಳೂರಿನ ಹಲವಡೆ ದೊಡ್ಡ ಸದ್ದು ಕೇಳಿಸಿದ್ದು ಜನ ಭಯಗೊಂಡು ಮನೆಯಿಂದ ಓಡಿ ಹೊರಬಂದಿದ್ದಾರೆ.
ಇಂದು ಮಧ್ಯಾಹ್ನ 12:15ರ ಸುಮಾರಿಗೆ 10 ರಿಂದ 15 ನಿಮಿಷಗಳ ಅಂತರದಲ್ಲಿ 2 ಭಾರೀ ಬೆಂಗಳೂರಿನ ಆರ್.ಆರ್ ನಗರ, ನಾಗರಭಾವಿ, ಕೆಂಗೇರಿ, ಯಶವಂತಪುರ, ಕಗ್ಗಲಿಪುರ, ಹೆಮ್ಮಿಗೆಪುರ, ಜ್ಞಾನಭಾರತಿ, ಉಲ್ಲಾಳ ಸೇರಿದಂತೆ ಹಲವೆಡೆ ದೊಡ್ಡ ಶಬ್ಧ ಕೇಳಿ ಬಂದಿದೆ. ಇದರಿಂದಾಗಿ ಬೆಂಗಳೂರಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: ರೈಲ್ವೆ ಪ್ಲಾಟ್‍ಫಾರ್ಮ್ ಟಿಕೆಟ್ ದರ ಇಳಿಕೆ – ಪ್ರಯಾಣದ ವೇಳೆ ಸಿಗುತ್ತೆ ಊಟ
Advertisement
Advertisement
ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಭೂಗರ್ಭ ತಜ್ಞ ಪ್ರಕಾಶ್ ಅವರು, ಬಾಂಗ್ಲಾದೇಶದ ಚಿತ್ತಂಗಾಂಗ್‍ನಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ. ಅಲ್ಲಿನ ತೀವ್ರತೆ ಇಲ್ಲಿ ಆಗಿದೆ. ಬೆಂಗಳೂರಿನಲ್ಲಿ ಕಂಪಿಸಿದರ ಬಗ್ಗೆ ರಿಕ್ಟರ್ ಮಾಪಕದಲ್ಲಿ ಕಂಪನ ದಾಖಲಾಗಿಲ್ಲ. ಹೀಗಾಗಿ ಯಾರೂ ಆತಂಕ ಪಡುವ ಅವಶ್ಯಕತೆ ಅಗತ್ಯವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಭಾರತ-ಮ್ಯಾನ್ಮಾರ್ ಗಡಿಯಲ್ಲಿ 6.1 ತೀವ್ರತೆಯ ಭೂಕಂಪ
Advertisement
ಮತ್ತೊಂದೆಡೆ ಮಂಡ್ಯದಲ್ಲಿ ಕೂಡ ಬೆಳಗ್ಗೆ 11:50ರ ಸುಮಾರಿಗೆ ಇದೇ ರೀತಿ ಜೋರು ಶಬ್ಧ ಕೇಳಿ ಬಂದಿದ್ದು, ಶಬ್ಧಕ್ಕೆ ಮನೆ, ಕಚೇರಿ ಕಟ್ಟಡಗಳ ಕಿಟಕಿಗಳು, ವಸ್ತುಗಳು ನಡುಗಿದೆ. ಈ ಹಿಂದೆ ಕೆಆರ್‌ಎಸ್, ಪಾಂಡವಪುರ, ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಕೂಡ ಈ ಶಬ್ಧ ಕೇಳಿಬಂದಿತ್ತು. ಈ ಶಬ್ಧಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.