– ಸಾವಿನ ಸಂಖ್ಯೆ 13ಕ್ಕೆ ಏರಿಕೆ
ವಾಷಿಂಗ್ಟನ್: ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಹಬ್ಬಿರುವ ಕಾಡಿಚ್ಚು (Los Angeles wildfire) ದಿನೇ ದಿನೇ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಈವರೆಗೆ 13 ಜೀವಗಳು ಬಲಿಯಾಗಿದ್ದು, 12,000 ಕಟ್ಟಡಗಳು ಸುಟ್ಟು ಕರಕಲಾಗಿವೆ. ಅಗ್ನಿ ನರ್ತನ ಮುಂದುವರಿದಿರುವ ಕಾರಣ ಇನ್ನೂ 57,000 ಕಟ್ಟಡ (structures) ಸುಟ್ಟು ಭಸ್ಮವಾಗುವ, 1.66 ಲಕ್ಷ ಮಂದಿ ಸ್ಥಳಾಂತರವಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಹೌದು. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಸತತ ಪ್ರಯತ್ನದಲ್ಲಿ ತೊಡಗಿದೆ. ಆದ್ರೆ ಮತ್ತೊಂದೆಡೆ 100 ಕಿಮೀ ವೇಗದಲ್ಲಿ ಬೀಸುತ್ತಿರುವ ಸಾಂಟಾ ಅನಾ ಚಂಡಮಾರುತ ಗಾಳಿಯು ಬೆಂಕಿ ಕೆನ್ನಾಲಿಗೆಯನ್ನು ಮತ್ತಷ್ಟು ಚಾಚಿಸುತ್ತಲೇ ಇದೆ. ಹೀಗಾಗಿ ಇನ್ನೂ ಸಾವಿರಾರು ಮನೆಗಳು ಹಾನಿಗೀಡಾಗುವ ಸಾಧ್ಯತೆಗಳಿವೆ. ಜೊತೆಗೆ ಇನ್ನೂ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಬೇಕಾಗಬಹುದು ಎಂದು ಮಾಹಿತಿ ನೀಡಿದ್ದಾರೆ.
Advertisement
Advertisement
ಕಾಡ್ಗಿಚ್ಚು ಕದನ – ಪ್ರಮುಖ ಬೆಳವಣಿಗೆ
Advertisement
- ಕ್ಯಾಲಿಫೋರ್ನಿಯಾದ ಪಾಲಿಸೇಡ್ಸ್ ಪ್ರದೇಶವೊಂದರಲ್ಲೇ 22,000ಕ್ಕೂ ಅಧಿಕ ಎಕರೆ ಭೂಪ್ರದೇಶ ಸುಟ್ಟು ಭಸ್ಮವಾಗಿದೆ. 426 ಮನೆಗಳೂ ಸೇರಿದಂತೆ 5,000ಕ್ಕೂ ಹೆಚ್ಚು ಕಟ್ಟಡಗಳು ನಾಶವಾಗಿದೆ. ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಶ್ವಾನದಳದ ಮೂಲಕ ಶವಗಳ ಹುಟುಕಾಟ ಕಾರ್ಯನಡೆದಿದೆ.
- ಜ.7ರಂದು ಹೊತ್ತಿಕೊಂಡ ಕಾಡ್ಗಿಚ್ಚಿನಿಂದ ಈವರೆಗೆ 39,000 ಎಕರೆ ಭೂಪ್ರದೇಶ ಹಾನಿಯಾಗಿದೆ. ಅಂದಾಜು 150 ಶತಕೋಟಿ ಡಾಲರ್‌ನಷ್ಟು ಆರ್ಥಿಕ ನಷ್ಟ ಉಂಡಾಗಿದೆ.
- ಬಿಸಿ ಗಾಳಿ, ಫೈರ್ನಾಡೋ (ಅಗ್ನಿ ಜ್ವಾಲೆ)ಗಳು ಮುಗಿಲೆತ್ತರಕ್ಕೆ ಚಿಮ್ಮುತ್ತಿದ್ದು, ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ಇದೆ. ಅಮೆರಿಕದ ಇತಿಹಾಸದಲ್ಲೇ ಇದು ಕಂಡೂ ಕೇಳರಿಯದ ಕಾಡ್ಗಿಚ್ಚು ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ.
- ಈಗಾಗಲೇ 1.53 ಲಕ್ಷ ಮಂದಿಯನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ. ಅಲ್ಲದೇ ಇನ್ನೂ 57,000 ಕಟ್ಟಡಗಳು ಅಪಾಯದಲ್ಲಿವೆ. 1.66 ಲಕ್ಷ ಮಂದಿ ಸ್ಥಳಾಂತರಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ತಿಳಿದುಬಂದಿದೆ.
- ಈ ಮಧ್ಯೆ ಕೆನಡಾ ಹಾಗೂ ಮೆಕ್ಸಿಕೋ ದೇಶಗಳು ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ನಂದಿಸಲು ನೆರವು ಚಾಚಿವೆ.