ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರದಿಂದ ದೇಶಾದ್ಯಂತ ಅನಿರ್ಧಿಷ್ಟಾವದಿ ಮುಷ್ಕರ ನಡೆಸಲು ಅಖಿಲ ಭಾರತ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ಸಂಘಟನೆ ಮುಂದಾಗಿದೆ.
ಬಸ್ ಮಾಲೀಕರು ಮತ್ತು ಟ್ಯಾಕ್ಸಿ ಮಾಲೀಕರು ಭಾಗಿಯಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಮಾತನಾಡಿ ವಿವಿಧ ಬೇಡಿಕೆಗಳ ಆಗ್ರಹಕ್ಕಾಗಿ ಅನಿವಾರ್ಯವಾಗಿ ಮುಷ್ಕರಕ್ಕೆ ಇಳಿದಿದ್ದೇವೆ ಎಂದು ತಿಳಿಸಿದರು.
Advertisement
ಶುಕ್ರವಾರದಿಂದ ದೇಶಾದ್ಯಂತ ಸರಕು ಸಾಗಣಿಕೆ ವಾಹನಗಳಾದ ಲಾರಿ, ಟ್ರ್ಯಾಕ್ಟರ್, ಪ್ರವಾಸಿ ವಾಹನ, ಮ್ಯಾಕ್ಸಿ ಕ್ಯಾಬ್, ಖಾಸಗಿ ಬಸ್, ಟೆಂಪೋ ಸೇರಿದಂತೆ ಒಟ್ಟು 90 ಲಕ್ಷ ವಾಹನಗಳ ಸೇವೆ ಸ್ಥಗಿತಗೊಳ್ಳಲಿವೆ ಎಂದು ತಿಳಿಸಿದರು.
Advertisement
ಕರ್ನಾಟಕದಲ್ಲೂ ಆರು ಲಕ್ಷ ವಾಹನಗಳು ಸ್ಥಗಿತಗೊಳ್ಳುತ್ತಿದ್ದು, ಇದಕ್ಕೆ ಗ್ಯಾಸ್ ಸಿಲಿಂಡರ್ ವಿತರಣೆಯ ವಾಹನಗಳು ಕೂಡ ಬಂದ್‍ಗೆ ಬೆಂಬಲ ನೀಡಲಿವೆ. ಕೇಂದ್ರ ಸರ್ಕಾರ ಎರಡು ದಿನದ ಒಳಗಡೆ ತಮ್ಮ ಬೇಡಿಕೆಗೆ ಬಗ್ಗದೆ ಇದ್ದರೆ ಇಡೀ ರಸ್ತೆ ರಸ್ತೆಯಲ್ಲಿ ವಾಹನ ನಿಲ್ಲಿಸಿಬಿಡಲಾಗುವುದು ಎಂದು ಎಚ್ಚರಿಕೆ ನೀಡಿದರು.
Advertisement
ಬೇಡಿಕೆಗಳೇನು?
ಟೋಲ್ ಮುಕ್ತ ರಸ್ತೆಯ ಸೇವೆಯನ್ನು ನೀಡಿ ಇನ್ಯೂರೆನ್ಸ್ ಪ್ರೀಮಿಯಂ ದರವನ್ನು ಕಡಿತಗೊಳಿಸಬೇಕು. ತೈಲ ದರ ಏರಿಕೆಗೆ ಕಡಿವಾಣ ಹಾಕುವುದರ ಜೊತೆಗೆ ಪೆಟ್ರೋಲ್, ಡಿಸೇಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕು ಎನ್ನುವ ಬೇಡಿಕೆಯನ್ನು ಇಟ್ಟುಕೊಂಡು ಮಾಲೀಕರು ಮುಷ್ಕರಕ್ಕೆ ಇಳಿದಿದ್ದಾರೆ.