ರಾಯಚೂರು: ಬೈಕ್ ಡಿಕ್ಕಿ ಹೊಡೆದು ಗಾಜು ತುಂಬಿದ ಲಾರಿ ಪಲ್ಟಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಸೀತಾನಗರ ಕ್ಯಾಂಪ್ ಬಳಿ ನಡೆದಿದೆ.
ಬೈಕ್‌ನಲ್ಲಿ ಸಂಚರಿಸುತ್ತಿದ್ದ ಹೊಸೂರು ಗ್ರಾಮದ ಅಯ್ಯಣ್ಣ, ಅಮರೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಂಬಂಧಿಕರಿಗೆ ಲಗ್ನಪತ್ರಿಕೆ ಕೊಟ್ಟು ಮರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.ಇದನ್ನೂ ಓದಿ; 70 ಕೋಟಿ ವಂಚನೆ ಕೇಸ್ – ಪೊಲೀಸರಿಂದ ಹಣ ರಿಕವರಿ ತಡೆಯಲು ವಿದೇಶಗಳಲ್ಲಿ ಹೂಡಿಕೆ
ಬೈಕ್ ಸವಾರರು ಸಿರವಾರದಿಂದ ರಾಯಚೂರಿಗೆ ಹೊರಟಿದ್ದರು. ಇದೇ ವೇಳೆ ಲಾರಿಯೊಂದು ಗಾಜನ್ನು ಅನ್‌ಲೋಡ್ ಮಾಡಲು ಹೊರಟಿತ್ತು. ಈ ವೇಳೆ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ರಸ್ತೆಯಲ್ಲಿ ನೀರು ಹರಿದಂತೆ ಗಾಜಿನ ಚೂರು ಚೆಲ್ಲಾಪಲ್ಲಿಯಾಗಿದೆ.
ಬೈಕ್ ಸವಾರರಿಬ್ಬರು ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ಪಕ್ಕದ ಜಮೀನಿನಲ್ಲಿ ರಸ್ತೆ ಮಾಡಿಕೊಂಡು ಸಂಚರಿಸುತ್ತಿವೆ. ಈ ಸಂಬಂಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ; ಟ್ರಾಫಿಕ್ ಫೈನ್ ಪಾವತಿಗೆ 50% ಡಿಸ್ಕೌಂಟ್ – 10 ದಿನಗಳಲ್ಲಿ 8 ಕೋಟಿಗೂ ಅಧಿಕ ದಂಡ ಸಂಗ್ರಹ

