ಬೆಂಗಳೂರು: ಕಬ್ಬಿಣದ ಪೈಪ್ ತುಂಬಿದ್ದ ಬೃಹತ್ ಲಾರಿಯೊಂದು (Lorry) ಪಲ್ಟಿಯಾದ ಪರಿಣಾಮ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (Tumakuru-Bengluru Highway) ಭಾರೀ ಟ್ರಾಫಿಕ್ (Traffic) ಉಂಟಾಗಿದೆ.
ನೆಲಮಂಗಲ (Nelamangala) ತಾಲೂಕಿನ ಬೂದಿಹಾಳ್ ಗೇಟ್ ಬಳಿ ಘಟನೆ ನಡೆದಿದೆ. ಘಟನೆಯ ಪರಿಣಾಮ ರಸ್ತೆಯಲ್ಲಿ ಪೈಪ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಲಾರಿ ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆ ಬರುತ್ತಿತ್ತು. ಚಾಲಕನ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ. ಇದನ್ನೂ ಓದಿ: BBK 11: ಬಿಗ್ ಬಾಸ್ ಟ್ರೋಫಿ ಗೆದ್ದು ಸುದೀಪ್ ಕಾಲಿಗೆ ಬಿದ್ದ ಹನುಮಂತ
ಸೋಮವಾರ ನಸುಕಿನ ಜಾವ 3 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ನೆಲಮಂಗಲ ಸಂಚಾರಿ ಪೊಲೀಸರು ತೆರವು ಕಾರ್ಯದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಭಾರತ್ ಮಾತಾ ಮಹಾ ಆರತಿ ಕಾರ್ಯಕ್ರಮದಲ್ಲಿ ಹೊತ್ತಿ ಉರಿದ ಬೋಟ್ – ಅದೃಷ್ಟವಶಾತ್ 15 ಜನ ಪಾರು