ಬೆಂಗಳೂರು: ಚಲಿಸುತ್ತಿದ್ದ ಬೈಕ್‌ಗೆ (Bike) ಹಿಂಬದಿಯಿಂದ ಲಾರಿ (Lorry) ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನ (Bengaluru) ದಾಸರಹಳ್ಳಿ ಮೆಟ್ರೋ ಸ್ಟೇಷನ್ (Dasarahalli Metro Station) ಬಳಿ ನಡೆದಿದೆ.
ಶೇಷಾದ್ರಿ (23) ಮೃತ ಬೈಕ್ ಸವಾರ. ಶೇಷಾದ್ರಿ ರಾಜಗೋಪಾಲನಗರ ನಿವಾಸಿ. ಘಟನೆ ಬಳಿಕ ಸ್ಥಳದಲ್ಲೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೀಣ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ತಿಮ್ಮಪ್ಪನ ದರ್ಶನಕ್ಕೆ ಹೆಚ್ಚಾಯ್ತು ಡಿಮ್ಯಾಂಡ್ – ಪ್ರತಿದಿನ 1,000 ಜನರಿಗೆ ನೇರ ದರ್ಶನಕ್ಕೆ ಅವಕಾಶ ನೀಡುವಂತೆ KSTDC ಮನವಿ
ಅಪಘಾತ ಮಾಡಿದ ಲಾರಿಯನ್ನು ಪೀಣ್ಯ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮೃತ ಶೇಷಾದ್ರಿ ತಂದೆ ಚಂದ್ರಶೇಖರ್ ಪೀಣ್ಯಾ ಸಂಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ರಾಜಕೀಯ ಬದಲಾವಣೆ ಬೆಳಗಾವಿಯಿಂದಲೇ ಆಗುತ್ತಾ?