ಬಳ್ಳಾರಿ: ಸೇಬುಗಳನ್ನು (Apple) ತುಂಬಿದ್ದ ಲಾರಿ ಪಲ್ಟಿಯಾಗಿ (Lorry Overturn) ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದಿದ್ದ ಸೇಬುಗಳನ್ನು ಕ್ಷಣಮಾತ್ರದಲ್ಲೇ ಸಾರ್ವಜನಿಕರು ತುಂಬಿಕೊಂಡು ಹೋಗಿರುವ ಘಟನೆ ವಿಜಯನಗರ (Vijayanagar) ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಬಳಿ ಸೇಬುಗಳನ್ನು ತುಂಬಿದ್ದ ಲಾರಿ ಪಲ್ಟಿಯಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿದರೂ ಸ್ಥಳೀಯರು ಕ್ಯಾರೆ ಎನ್ನದೆ ಸೇಬುಗಳನ್ನು ಚೀಲಗಳಲ್ಲಿ ತುಂಬಿಕೊಂಡಿದ್ದಾರೆ. ಈ ವೇಳೆ ಪೊಲೀಸರು ಏನೂ ಮಾಡಲಾಗದೆ ಅಸಹಾಯಕರಂತೆ ನಿಂತಿದ್ದಾರೆ. ಇದನ್ನೂ ಓದಿ: ಭಾರೀ ಗಾತ್ರದ ವಾಹನ ಸಂಚಾರದಿಂದ ಕುಸಿದ ರಸ್ತೆ
- Advertisement
ನಾ ಮುಂದು, ತಾ ಮುಂದು ಎಂದು ಹೆಣ್ಣು ಮಕ್ಕಳು, ಗಂಡು ಮಕ್ಕಳು ಸೇರಿ ನೂರಾರು ಜನರು ಸೇಬುಗಳನ್ನು ತುಂಬಿಕೊಂಡಿದ್ದಾರೆ. ಕ್ಷಣಮಾತ್ರದಲ್ಲೇ ಹಣ್ಣಿನ ಲೋಡ್ ಅನ್ನು ಖಾಲಿ ಮಾಡಿದ ಸಾರ್ವಜನಿಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಮಾಜಿ ಶಾಸಕನ ಕಿಸೆಯಿಂದ ಹಣ ಎಗರಿಸಲು ಮುಂದಾದವನಿಗೆ ಧರ್ಮದೇಟು