ದಾವಣಗೆರೆ: ಎರಡು ಲಾರಿಗಳ ನಡುವೆ ಡಿಕ್ಕಿಯಾಗಿ ಮೂವರು ಗಾಯಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 13ರ ಬಂಗಾರಕ್ಕನ ಗುಡ್ಡ ಬಳಿ ನಡೆದಿದೆ.
ಹೊಸಪೇಟೆಯಿಂದ ಬರುತ್ತಿದ್ದ ರಾಜಸ್ಥಾನದ ಲಾರಿಗೂ ಹಾಗೂ ಚಿತ್ರದುರ್ಗದ ಕಡೆಯಿಂದ ಹೋಗುತ್ತಿದ್ದ ಮಹಾರಾಷ್ಟ್ರ ಲಾರಿಗಳು ಮುಖಾಮುಖಿ ಅಪಘಾತಕ್ಕೀಡಾಗಿವೆ. ಲಾರಿಯಲ್ಲಿ ಸಿಲುಕಿಕೊಂಡಿದ್ದ ರಾಜಸ್ಥಾನದ ಚಾಲಕ ಕರಣ್ ಸಿಂಗ್ ಹೊರತೆಗೆಯಲು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳಿಂದ ಹರ ಸಾಹಸ ಪಡುವಂತಾಯಿತು.
ಲಾರಿಯಲ್ಲಿ ಗಾಯಗೊಂಡಿದ್ದ ಕರಣ್ ಸಿಂಗ್, ಭಕ್ತರ್ ಸಿಂಗ್ ಜಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಮೂವರು ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದು, ರಾಜಸ್ಥಾನದ ಲಾರಿ ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿ ಮುಖಾಮುಖಿ ಡಿಕ್ಕಿಯಾಗಿವೆ ಎನ್ನಲಾಗಿದೆ.
ಇನ್ನೂ ಜಗಳೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.