– ರಾಮಮಂದಿರ ನಿರ್ಮಾಣದಲ್ಲಿಯೂ ಸಾಕಷ್ಟು ಭ್ರಷ್ಟಾಚಾರ ಆಗಿದೆ – ಆರೋಪ
ಹುಬ್ಬಳ್ಳಿ: ರಾಮನೂ ನಮ್ಮ ದೇವರು (Lord Rama), ದುರ್ಗಮ್ಮ, ಗಂಡಿ ದುರ್ಗಮ್ಮ ನಮ್ಮ ದೇವರು, ಸೀತಾಮಾತೆ ನಮ್ಮ ತಾಯಿ ಎಂದು ಸಚಿವ ಸಂತೋಷ್ ಲಾಡ್ (Santosh Lad) ಗುಣಗಾನ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಹಿಂದೂಗಳಿಗೆ ಏನಾದರೂ ಲಾಭ ಆಗಿದೆಯಾ? ನಾನೂ ಹಿಂದೂ, ನೀವೂ ಹಿಂದೂ ನಮಗೇನಾದರೂ ಲಾಭ ಆಗಿದೆಯಾ? ಇದು ಅವರಿಗಷ್ಟೇ ಲಾಭ ಆಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಶ್ರೀಕಾಂತ್ ಪೂಜಾರಿಗೆ ರೌಡಿಶೀಟರ್‌ನಿಂದ ಮುಕ್ತಿ ಕೊಟ್ಟಿದ್ದು ನಮ್ಮ ಸರ್ಕಾರ: ದಿನೇಶ್ ಗುಂಡೂರಾವ್
ಶ್ರೀಕಾಂತ್ ಪೂಜಾರಿ (Srikanth Poojari) ಮೇಲೆ ಕೇಸ್ ಹಾಕಿದ್ರೆ ನಮಗೇನು ಲಾಭ? ಅಷ್ಟೊಂದು ಕೇಸ್‌ಗಳಾಗಿವೆ. ಇನ್ನೊಂದು ಸಲ ಕೋರ್ಟ್‌ಗೆ ಹೋದ್ರೆ ಏನ್ ಆಗ್ತಿತ್ತು? ಇಂತಹ ವಿಷಯಗಳೇ ಬಿಜೆಪಿಗೆ ಬೇಕಾಗಿರೋದು. ರಾಮ ಮಂದಿರ ಮಾಡಿದವರು ನಾವು, ಮಂದಿರ ಆರಂಭಿಸಿದ್ದು ರಾಜೀವ್ ಗಾಂಧಿ ಎಂದರಲ್ಲದೇ, ರಾಮಮಂದಿರ ನಿರ್ಮಾಣದಲ್ಲಿಯೂ ಸಾಕಷ್ಟು ಭ್ರಷ್ಟಾಚಾರ ಆಗಿದೆ. ಅಯೋಧ್ಯೆಯಲ್ಲಿ ಜಮೀನನ ಬೆಲೆ ಗಗನಕ್ಕೇರಿದೆ. ರಾಮಂದಿರಕ್ಕೆ ನಾವು ಸಹ ಇಟ್ಟಿಗೆ ಕೊಟ್ಟಿದ್ದೇವೆ. ಈಗ ಆ ಇಟ್ಟಿಗೆ ಎಲ್ಲಿವೆ ಇದಕ್ಕೆ ಉತ್ತರ ನೀಡಲಿ ಎಂದು ಒತ್ತಾಯಿಸಿದ್ದಾರೆ.
ರಾಮನೂ ನಮ್ಮ ದೇವರು, ದುರ್ಗಮ್ಮ, ಗಂಡಿ ದುರ್ಗಮ್ಮ ನಮ್ಮ ದೇವರು, ಸೀತಾಮಾತೆ ನಮ್ಮ ತಾಯಿ. ಇನ್ನೂ ಮೋದಿ ವಿಶ್ವಗುರು ಅಂತಾರೆ, ಅವರಿಗೆ ಇಷ್ಟು ಪಬ್ಲಿಸಿಟಿ ಬೇಕಾ? ನೀರಲ್ಲಿ ಹೋದ್ರೂ ಕ್ಯಾಮೆರಾ? ದೇವಸ್ಥಾನಕ್ಕೆ ಹೋದ್ರು ಕ್ಯಾಮೆರಾ? ನವಿಲು ಜೊತೆಗೂ ಕ್ಯಾಮೆರಾ ಏಕೆ ಬೇಕು? ಮೋದಿ ಒಂದು ತಿಂಗಳು ಟಿವಿಯಲ್ಲಿ ಕಾಣಿಸಿಕೊಳ್ಳದೇ ಮತಕೇಳಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ದಿನ ರಾಜ್ಯಾದ್ಯಂತ ವಿದ್ಯುತ್ ಸ್ಥಗಿತ – ಕಾಂಗ್ರೆಸ್ ವಿರುದ್ಧ ಬಿಜೆಪಿ ಗಂಭೀರ ಆರೋಪ