ಜ.22ರಂದು ಶ್ರೀರಾಮ ದರ್ಶನ ನೀಡ್ತಿದ್ದು, ಆಹ್ವಾನಿಸಿರೋದು ನನ್ನ ಅದೃಷ್ಟ: ಮೋದಿ

Public TV
1 Min Read
AYODHYA NARENDRA MODI

ಅಯೋಧ್ಯೆ: ಜನವರಿ 22ರಂದು ಭಗವಾನ್ ರಾಮ ನಮಗೆಲ್ಲರಿಗೂ ದರ್ಶನವನ್ನು ನೀಡಲಿದ್ದಾನೆ. ಅಯೋಧ್ಯೆಯ ರಾಮ ಮಂದಿರದ (Ayodhya RamMandir) ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ (Pran Prathistha Ceremony)  ನನ್ನನ್ನು ಆಹ್ವಾನಿಸಿರುವುದು ನನ್ನ ಅದೃಷ್ಟ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (PM-JANMAN) ಅಡಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (PMAY-G) ಫಲಾನುಭವಿಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಮೋದಿಯವರು ಇಂದು ಮಾತನಾಡುತ್ತಾ ಈ ರೀತಿಯಾಗಿ ಹೇಳಿದ್ದಾರೆ. ಇನ್ನೇನು ಕೆಲವು ದಿನಗಳ ನಂತರ ಅಂದರೆ ಜನವರಿ 22 ರಂದು ಭಗವಾನ್ ರಾಮನು ತನ್ನ ಭವ್ಯವಾದ ದೇವಾಲಯದಲ್ಲಿ ನಮಗೆ ದರ್ಶನವನ್ನು ನೀಡುತ್ತಾನೆ. ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಮುಂಚಿತವಾಗಿ ನಾನು 11 ದಿನಗಳ ವಿಶೇಷ ಅನುಷ್ಠಾನವನ್ನು ಪ್ರಾರಂಭಿಸಿದ್ದೇನೆ. ಮಾತಾ ಶಬರಿ ಇಲ್ಲದೆ ಭಗವಾನ್ ರಾಮನ ಕಥೆ ಅಪೂರ್ಣ ಎಂದು ಪ್ರಧಾನಿ ತಿಳಿಸಿದರು.

ಕಳೆದ ವಾರವಷ್ಟೇ ಮೋದಿಯವರು ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಉಳಿದಿರುವಾಗ 11 ದಿನಗಳ ವಿಶೇಷ ಆಚರಣೆಯೊಂದನ್ನು ಪ್ರಾರಂಭಿಸುವುದಾಗಿ ಹೇಳಿದ್ದರು . ರಾಮ ಮಂದಿರದ ‘ ಪ್ರಾಣ ಪ್ರತಿಷ್ಠಾ’ಕ್ಕೆ ಕೇವಲ 11 ದಿನಗಳು ಮಾತ್ರ ಉಳಿದಿವೆ . ಪವಿತ್ರೀಕರಣದ ಸಮಯದಲ್ಲಿ ಭಾರತದ ಜನರನ್ನು ಪ್ರತಿನಿಧಿಸಲು ದೇವರು ನನ್ನನ್ನು ಸೃಷ್ಟಿಸಿದ್ದಾನೆ. ಇದನ್ನು ಗಮನದಲ್ಲಿಟ್ಟುಕೊಂಡು ನಾನು ಇಂದಿನಿಂದ 11 ದಿನಗಳ ಕಾಲ ವಿಶೇಷ ಆಚರಣೆಯನ್ನು ಪ್ರಾರಂಭಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಸಮಾರಂಭಕ್ಕೆ ದೇಶಾದ್ಯಂತ ಸಾವಿರಾರು ವೀಕ್ಷಕರನ್ನು ಆಹ್ವಾನಿಸಲಾಗಿದೆ ಮತ್ತು ಆಹ್ವಾನಿತರಲ್ಲಿ ರಾಮಮಂದಿರವನ್ನು ನಿರ್ಮಿಸಿದ ಕಾರ್ಮಿಕರ ಕುಟುಂಬಗಳೂ ಸೇರಿದ್ದಾರೆ.

ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟಿಗರು, ಕೈಗಾರಿಕೋದ್ಯಮಿಗಳು ಸೇರಿದಂತೆ 7,000ಕ್ಕೂ ಹೆಚ್ಚು ಮಂದಿ ದೇವಸ್ಥಾನ ಟ್ರಸ್ಟ್, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.

Share This Article