ಶ್ರೀನಗರ: ಯಾವುದೇ ಧರ್ಮವು ಕೆಟ್ಟದ್ದಲ್ಲ. ಭಗವಾನ್ ಶ್ರೀರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಇದ್ದಾನೆ. ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಎಚ್ಚರಿಕೆ ವಹಿಸಿ. ನಮ್ಮ ದೇಶವನ್ನು ಬಲಿಷ್ಠಗೊಳಿಸಬೇಕಾದರೆ, ನಾವು ಒಟ್ಟಾಗಿ ನಿಲ್ಲಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ಹೇಳಿದ್ದಾರೆ.
ಚುನಾವಣೆ ರ್‍ಯಾಲಿಯೊಂದರಲ್ಲಿ ಸಾರ್ವಜನಿಕರನ್ನುದ್ದೇಶಿ ಮಾತನಾಡಿದ ಅವರು, ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಿಮ್ಮ ಬಳಿ ಬಂದು ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹೇಳುತ್ತಾರೆ. ಭಾರತದಲ್ಲಿ ಶೇ.70 ರಿಂದ 80 ರಷ್ಟು ಹಿಂದೂ ಜನಸಂಖ್ಯೆ ಇದೆ. ಅವರು ಅಪಾಯದಲ್ಲಿದ್ದಾರೆ ಎಂದು ನೀವು ಭಾವಿಸುತ್ತೀರಾ ಎಂದು ಪ್ರಶ್ನಿಸಿದರು.
Advertisement
J&K | We were promised 50,000 jobs here, where are they? Our doctors, nurses, paramedical staff, and our children are all unemployed. This cannot be done by a Governor, you cannot hold him accountable. Elections are important: National Conference President Farooq Abdullah pic.twitter.com/ojDJx17pjh
— ANI (@ANI) November 19, 2022
Advertisement
ಯಾವುದೇ ಧರ್ಮ ಕೆಟ್ಟದ್ದಲ್ಲ. ಆದರೆ ಮನುಷ್ಯರು ಭ್ರಷ್ಟರಾಗಿದ್ದಾರೆ, ಧರ್ಮವಲ್ಲ. ಚುನಾವಣೆಯ ಸಮಯದಲ್ಲಿ ‘ಹಿಂದೂ ಖತ್ರೇ ಮೈ ಹೈ’ ಅನ್ನು ಹೆಚ್ಚು ಬಳಸುತ್ತಾರೆ. ಆದರೆ ಅದಕ್ಕೆ ಬಲಿಯಾಗಬೇಡಿ ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ಮನವಿಮಾಡಿದ್ದಾರೆ. ಇದನ್ನೂ ಓದಿ: ಬೇರೆಲ್ಲೋ ಸ್ಫೋಟವಾಗಬೇಕಿದ್ದ ಕುಕ್ಕರ್ ಬಾಂಬ್ ಹಂಪ್ಸ್ ಕಾರಣದಿಂದ ಆಟೋದಲ್ಲೇ ಬ್ಲಾಸ್ಟ್!
Advertisement
Akhnoor, J&K | We never joined hands with Pakistan. Jinnah had come to meet with my father, but we denied to join hands with him. We are glad for it, people in Pakistan are not empowered: National Conference president Farooq Abdullah in a public rally pic.twitter.com/T6bcMVynAH
— ANI (@ANI) November 19, 2022
Advertisement
ಕಾಶ್ಮೀರ ಕಣಿವೆಯಲ್ಲಿ ಮುಸ್ಲಿಂ ಶಾಲಾ ಮಕ್ಕಳನ್ನು “ರಘುಪತಿ ರಾಘವ್ ರಾಜಾ ರಾಮ್” ಎಂಬ ಹಿಂದೂ ಶ್ಲೋಕವನ್ನು ಹಾಡುವಂತೆ ಮಾಡಲಾಗಿದ್ದು, ಈ ಮೂಲಕ ಬಿಜೆಪಿ ಶಾಲೆಗಳಲ್ಲಿ ತನ್ನ ಹಿಂದುತ್ವದ ಅಜೆಂಡಾವನ್ನು ಪ್ರಚಾರ ಮಾಡುತ್ತಿದೆ ಎಂಬ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ಹೇಳಿಕೆಯನ್ನು ಅಬ್ದುಲ್ಲಾ ತಿರಸ್ಕರಿಸಿದ್ದಾರೆ. ಇದನ್ನೂ ಓದಿ: ತುಂಗಾ ನದಿಯಲ್ಲಿ ಸ್ಫೋಟ ಮಾಡಿ ಪರಾರಿಯಾದವನು ಮಂಗ್ಳೂರಲ್ಲಿ ಕುಕ್ಕರ್ ಬಾಂಬ್ ಸಿಡಿಸಿ ಸಿಕ್ಕಿಬಿದ್ದ
ಸೆಪ್ಟೆಂಬರ್ 13 ರಂದು ಶಾಲೆಗಳಲ್ಲಿ ಸರ್ವ ದೇವರನ್ನು ಪ್ರಾರ್ಥನೆ ಮಾಡುವ ಸಲುವಾಗಿ ರಘುಪತಿ ರಾಘವ್ ರಾಜ ರಾಮ್. ಈಶ್ವರ ಅಲ್ಲಾ ತೇರೋ ನಾಮ್” ಅನ್ನು ಪಠಿಸಲು ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿತು. ಹಿಂದೂಗಳು ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಿದರೆ, ಪುರುಷನೇ ಆಗಲಿ ಅಥವಾ ಮಹಿಳೆಯೇ ಆಗಲಿ ಮುಸ್ಲಿಂ ಆಗಿ ಪರಿವರ್ತನೆ ಹೊಂದುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ “ನ್ಯಾಶನಲ್ ಕಾನ್ಫರೆನ್ಸ್ ಎಂದಿಗೂ ಪಾಕಿಸ್ತಾನದ ಪರವಾಗಿರಲಿಲ್ಲ. ಯಾವಾಗಲೂ ಭಾರತದೊಂದಿಗೆ ಗಟ್ಟಿಯಾಗಿ ನಿಂತಿದೆ. ನಾವು ಎಂದಿಗೂ ಪಾಕಿಸ್ತಾನದೊಂದಿಗೆ ಕೈಜೋಡಿಸಲಿಲ್ಲ. ಜಿನ್ನಾ ಅವರು ನನ್ನ ತಂದೆಯನ್ನು ಭೇಟಿಯಾಗಲು ಬಂದಿದ್ದರು, ಆದರೆ ನಾವು ಅವರೊಂದಿಗೆ ಕೈಜೋಡಿಸಲು ನಿರಾಕರಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.