– ʻಭೀಮಾʼ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು, ಕೂಡಿ ಬರಲಿಲ್ಲ ಎಂದ ನಟ
ಕನ್ನಡ ಚಿತ್ರರಂಗದಲ್ಲಿ (Kannada Cinema) ನಟ ದುನಿಯಾ ವಿಜಯ್ (Duniya Vijay) ಹಾಗೂ ಲೂಸ್ ಮಾದ (loose mada) ನಡುವೆ ವೈಮನಸ್ಸು ಇತ್ತು ಎಂಬ ಸುದ್ದಿ ಸಾಕಷ್ಟು ಚರ್ಚೆಯಾಗಿತ್ತು. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಹುಟ್ಟಿಕೊಂಡ ಬೆನ್ನಲ್ಲೇ ನಟ ಲೂಸ್ ಮಾದ ಯೋಗೇಶ್ ಸ್ಪಷ್ಟನೆ ನೀಡಿದ್ದಾರೆ.
Advertisement
ಸಿದ್ಲಿಂಗು-2 ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಇಬ್ಬರ ವೈಮನಸ್ಸಿನ ಕುರಿತು ಸ್ಪಷ್ಟನೆ ನೀಡಿದ್ದಾರೆ. ದುನಿಯಾ ವಿಜಯ್ ಹಾಗೂ ನನಗೆ ಕಿರಿಕ್ ಆಗಿದ್ದು ನಿಜ. ಆದರೆ ಈಗ ಚೆನ್ನಾಗಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಸೈಫ್ ಮೇಲೆ ಹಲ್ಲೆ: ಅಂತಾರಾಷ್ಟ್ರೀಯ ಪಿತೂರಿ ಶಂಕೆಯನ್ನು ತಳ್ಳಿಹಾಕುವಂತಿಲ್ಲ – ಆರೋಪಿ 5 ದಿನ ಪೊಲೀಸ್ ಕಸ್ಟಡಿಗೆ
Advertisement
ದುನಿಯಾ ನಂತರ ಒಟ್ಟಿಗೆ ನಟಿಸಿಲ್ಲ. ಮಾ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು. ಆದರೆ ಎಲ್ಲೋ ಮಿಸ್ ಹೊಡೀತು, ಕೂಡಿ ಬರಲಿಲ್ಲ. ಸದ್ಯಕ್ಕೆ ವಿಜಯ್ ಹಾಗೂ ನನ್ನ ಫ್ರೆಂಡ್ಶಿಪ್ ಚೆನ್ನಾಗಿದೆ. ಎರಡೂ ಫ್ಯಾಮಿಲಿಯವರೂ ಚೆನ್ನಾಗಿದ್ದೇವೆ. ಮುಂದೆ ಪಾತ್ರ ಕೂಡಿಬಂದರೆ ಇಬ್ಬರೂ ಸಿನಿಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
Advertisement
Advertisement
ಯೋಗಿ-ವಿಜಿ ಇಬ್ಬರೂ ಸಂಬಂಧಿಕರು:
ನಟ ದುನಿಯಾ ವಿಜಯ್ ಮತ್ತು ಲೂಸ್ ಮಾದ ಯೋಗೇಶ್ ಇಬ್ಬರೂ ಸಂಬಂಧಿಕರು. ವಿಜಯ್ ಅವರ ಅಕ್ಕನ ಮಗ ಯೋಗೇಶ್. ‘ದುನಿಯಾ’ ಸಿನಿಮಾ ಬಳಿಕ ಇವರಿಬ್ಬರು ಒಟ್ಟಿಗೆ ಯಾವ ಚಿತ್ರದಲ್ಲೂ ನಟಿಸಿಲ್ಲ. ಎರಡೂ ಕುಟುಂಬದ ನಡುವೆ ವೈಯಕ್ತಿಕ ಕಾರಣಗಳಿಂದ ಮನಸ್ತಾಪ ಉಂಟಾಗಿ ದೂರವಾಗಿದ್ದರು. ನಟ ಯೋಗಿಯ ಸಿನಿಮಾ ಕರಿಯರ್ನಲ್ಲಿ ‘ದುನಿಯಾ’ ಸಿನಿಮಾ ಒಂದು ತೂಕವಾದರೆ, ‘ಸಿದ್ಲಿಂಗು’ ಸಿನಿಮಾ ಇನ್ನಷ್ಟು ಖ್ಯಾತಿ ಕೊಟ್ಟಿತ್ತು. ಇದನ್ನೂ ಓದಿ: ಸೈಫ್ ಮೇಲೆ ಹಲ್ಲೆ ಎಸಗಿದ ದಾಳಿಕೋರ ಬಾಂಗ್ಲಾ ಪ್ರಜೆ: ಮುಂಬೈ ಪೊಲೀಸ್
ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಹಿರೋ
ʻದುನಿಯಾʼ ಬಳಿಕ ಲೂಸ್ಮಾದ ಅಂತಲೇ ಯೋಗಿ ಖ್ಯಾತಿ ಪಡೆದರು. ದುನಿಯಾ ಸಕ್ಸಸ್ ನಂತರ ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಹಿರೋ ಆಗಿ ಕನ್ನಡ ಚಿತ್ರಕ್ಕೆ ಎಂಟ್ರಿಕೊಟ್ಟರು. ಆ ಬಳಿಕ ಕೆಲವು ಹಿಟ್ ಸಿನಿಮಾಗಳನ್ನೂ ಕೊಟ್ಟರು.