ಮಂಗಳೂರು: ನಿರಂತರವಾಗಿ ಸರ್ಕಾರಿ ರಜೆ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಜನ ಸಾಗರವೇ ಹರಿದು ಬಂದಿದೆ.
ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ರಜೆ ಇರುವುದರಿಂದ ಶನಿವಾರದಿಂದಲೇ ಭಕ್ತರ ದಂಡು ಕ್ಷೇತ್ರದತ್ತ ಹರಿದು ಬರುತ್ತಿದ್ದು, ಲಕ್ಷಾಂತರ ಭಕ್ತರು ದೇಶದ ನಾನಾ ಕಡೆಗಳಿಂದ ಆಗಮಿಸುತ್ತಿದ್ದಾರೆ. ಸುಬ್ರಹ್ಮಣ್ಯನ ಆಲಯದ ತುಂಬಾ ಭಕ್ತರಿಂದ ತುಂಬಿ ಹೋಗಿದೆ. ಸೋಮವಾರ ಒಂದೇ ದಿನ ಒಂದು ಲಕ್ಷಕ್ಕಿಂತ ಹೆಚ್ಚು ಭಕ್ತರು ದೇವರ ದರ್ಶನ ಪಡೆದಿದ್ದಾರೆ.
Advertisement
Advertisement
ದೇವಾಲಯದಲ್ಲಿ ಜನಸಂದಣಿ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ತೊಂದರೆಯಾಗದಂತೆ ಸಕಲ ಕ್ರಮ ಕೈಗೊಂಡಿದೆ. ಸುಬ್ರಹ್ಮಣ್ಯನ ಸೇವೆಗಳನ್ನು ಯಥಾಸ್ಥಿತಿಯಲ್ಲಿಯೇ ಮಾಡಲಾಗುತ್ತಿದೆ. ದೇವಾಲಯದ ಆದಾಯದಲ್ಲೂ ಗಣನೀಯ ಸೇವೆಗಳು ಏರಿಕೆಯಾಗುವ ಸಾಧ್ಯತೆಯಿದ್ದು, ಜನವರಿ ಆರಂಭದವರೆಗೂ ಜನಸಂದಣಿಯಿರುವ ಸಾಧ್ಯತೆಗಳಿವೆ.