– 30 ವರ್ಷಗಳ ಬಳಿಕ ಬಿಜೆಪಿಗೆ ಜಯ
ಲಕ್ನೋ: ಉತ್ತರ ಪ್ರದೇಶದ ಕುಂದರ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಏಕೈಕ ಹಿಂದೂ ಅಭ್ಯರ್ಥಿ, ಮುಸ್ಲಿಂ ಸಮುದಾಯದ 11 ಪ್ರತಿಸ್ಪರ್ಧಿಗಳನ್ನು ಸೋಲಿಸಿದ್ದಾರೆ.
Advertisement
ಉತ್ತರ ಪ್ರದೇಶದ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಬಿಜೆಪಿಯ ರಾಮ್ವೀರ್ ಠಾಕೂರ್ 1.4 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಗೆಲುವಿನೊಂದಿಗೆ ಬಿಜೆಪಿ 30 ವರ್ಷಗಳ ನಂತರ ಕ್ಷೇತ್ರವನ್ನು ಮರಳಿ ಪಡೆದಿದೆ.
Advertisement
ಸಮಾಜವಾದಿ ಪಕ್ಷದ ಭದ್ರಕೋಟೆ ಕುಂದರ್ಕಿ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆ ಜೊತೆಗೆ ಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆ ನಡೆಯಿತು.
Advertisement
1993 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಚಂದ್ರ ವಿಜಯ್ ಸಿಂಗ್ ಕೇಸರಿ ಪಕ್ಷಕ್ಕೆ ಜಯ ತಂದುಕೊಟ್ಟಿದ್ದರು. ಆಗ ಬಿಜೆಪಿ ಕೊನೆಯದಾಗಿ ಕುಂದರ್ಕಿ ಸ್ಥಾನವನ್ನು ಗೆದ್ದಿತ್ತು.