ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಆಕಾಂಕ್ಷಿಗಳು ಲಾಬಿ ನಡೆಸಲು ಮುಂದಾಗಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಕನಿಷ್ಠ ಮೂವರು ಆಕಾಂಕ್ಷಿಗಳಿಂದ ಲಾಬಿ ನಡೆಯುತ್ತಿದೆ ಎನ್ನಲಾಗುತ್ತಿದೆ.
ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗುವುದು ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ರವಾನಿಸಿದೆ. ಕಾಂಗ್ರೆಸ್‍ನಿಂದ ಹೊರಬಂದಿರುವ ಉಮೇಶ್ ಜಾಧವ್ ಕಲಬುರಗಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಈಗಾಗಲೇ ಹಲವು ನಾಯಕರು ಹೇಳಿಕೊಂಡಿದ್ದಾರೆ. ರಾಜ್ಯದ 12 ಕ್ಷೇತ್ರಗಳ ಟಿಕೆಟ್‍ಗಾಗಿ ಭಾರೀ ಪೈಪೋಟಿ ನಡೆದಿದೆ ಎಂಬ ಮಾತುಗಳು ಕಮಲ ಅಂಗಳದಲ್ಲಿ ಕೇಳಿ ಬರುತ್ತಿವೆ.
Advertisement
Advertisement
Advertisement
ಯಾವ ಕ್ಷೇತ್ರಕ್ಕೆ ಯಾರು ಲಾಬಿ?
1. ಚಿಕ್ಕೋಡಿ – ರಮೇಶ್ ಕತ್ತಿ ಮತ್ತು ಪ್ರಭಾಕರ್ ಕೋರೆ
2. ಕಲ್ಬುರ್ಗಿ – ಡಾ.ಉಮೇಶ್ ಜಾಧವ್ ಸಾಧ್ಯತೆ
3. ರಾಯಚೂರು – ಮಾಜಿ ಸಂಸದ ಸಣ್ಣ ಫಕೀರಪ್ಪ
4. ಬಳ್ಳಾರಿ – ಜೆ. ಶಾಂತಾ, ಸುರೇಶ್ ಬಾಬು, ವೆಂಕಟೇಶ್ ಪ್ರಸಾದ್ (ಶಾಸಕ ಬಿ. ನಾಗೇಂದ್ರ ಸಹೋದರ)
5. ಚಿತ್ರದುರ್ಗ – ಮಾಜಿ ಸಂಸದ ಜೆ. ಜನಾರ್ದನ ಸ್ವಾಮಿ
6. ತುಮಕೂರು – ಮಾಜಿ ಶಾಸಕ ಸುರೇಶ್ ಗೌಡ, ಮಾಜಿ ಸಂಸದ ಜಿ.ಎಸ್. ಬಸವರಾಜು
Advertisement
7. ಮಂಡ್ಯ, ಹಾಸನ – ಕಾದು ನೋಡುವ ತಂತ್ರ
8. ಚಾಮರಾಜನಗರ – ಎಂ.ಶಿವಣ್ಣ, ಎ.ಆರ್. ಕೃಷ್ಣಮೂರ್ತಿ
9. ಬೆಂಗಳೂರು ಗ್ರಾಮಾಂತರ – ಮಾಜಿ ಎಂಎಲ್ ಸಿ ಅಶ್ವಥ್ ನಾರಾಯಣ್, ರುದ್ರೇಶ್
10. ಬೆಂಗಳೂರು ದಕ್ಷಿಣ – ಡಾ.ತೇಜಸ್ವಿನಿ ಅನಂತಕುಮಾರ್ ಸಾಧ್ಯತೆ
11. ಚಿಕ್ಕಬಳ್ಳಾಪುರ – ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ, ಶರತ್ ಬಚ್ಚೇಗೌಡ
12. ಕೋಲಾರ -ಡಿ.ಎಸ್. ವೀರಯ್ಯ, ಎಂ ನಾರಾಯಣಸ್ವಾಮಿ, ಚಿ.ನಾ.ರಾಮು, ಚಲವಾದಿ ನಾರಾಯಣಸ್ವಾಮಿ
ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಪಟ್ಟಿಯನ್ನು ತೆಗೆದುಕೊಂಡು ಮಾಜಿ ಸಿಎಂ ಯಡಿಯೂರಪ್ಪನವರು ವಾರಾಂತ್ಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ಇದೇ ವೇಳೆ ಕಾಂಗ್ರೆಸ್‍ನಿಂದ ಬಿಜೆಪಿಗೆ ಬರಲು ಇಚ್ಛಿಸಿರುವ ನಾಯಕರ ಹೆಸರುಗಳನ್ನು ಸಹ ಅಮಿತ್ ಶಾರಿಗೆ ನೀಡಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv