ಮಂಡ್ಯ: ಕೇಂದ್ರ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1.24ಲಕ್ಷ ರೂ. ಜಮೆ ಮಾಡುವ ಗ್ಯಾರಂಟಿಯನ್ನು ರಾಹುಲ್ ಗಾಂಧಿ (Rahul Gandhi) ನೀಡಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ 24 ಸಾವಿರದ ಜೊತೆಗೆ ಕೇಂದ್ರದಿಂದ ವರ್ಷಕ್ಕೆ 1.24 ಲಕ್ಷ ರೂ. ಹಣವನ್ನು ಮಹಿಳೆಯರ ಖಾತೆಗೆ ಜಮೆ ಮಾಡಲಾಗುವುದು. ಜೊತೆಗೆ ರೈತರ ಸಾಲಮನ್ನಾ, ಕನಿಷ್ಠ ಬೆಂಬಲ ಬೆಲೆಯ ಗ್ಯಾರಂಟಿಯನ್ನು ಘೋಷಿಸಿದ್ದಾರೆ.
ಯುವಕರಿಗೆ ಐತಿಹಾಸಿಕ ಕಾರ್ಯಕ್ರಮ ಮಾಡುತ್ತೇವೆ. ಮೊದಲು ಉದ್ಯೋಗ ಯೋಜನೆ ಜಾರಿ ಮಾಡುತ್ತೇವೆ. ಬಡವರ ಮಕ್ಕಳು ದೊಡ್ಡ ಕಾರ್ಖನೆಗಳಲ್ಲಿ ಅಪ್ರಂಟಿಶಿಪ್ ಮಾಡಿ ಕೆಲಸ ಕೊಡುವ ಕೆಲಸ ಮಾಡುತ್ತೇವೆ. ನರೇಗಾ ಯೋಜನೆಯನ್ನ ನಗರ ಪ್ರದೇಶಕ್ಕೆ ವಿಸ್ತರಿಸುತ್ತೇವೆ. ಆಶಾ ಕಾರ್ಯತರ್ಕರಿಗೆ ಸಂಭಾವನೆ ಹೆಚ್ಚಸಲಿದ್ದೇವೆ. ಗುತ್ತಿಗೆ ಪದ್ದತೆಯನ್ನ ರದ್ದು ಮಾಡುತ್ತೇವೆ. ಉದ್ಯೋಗ ಗ್ಯಾರೆಂಟಿ ಕಾಯಂ ಮಾಡುತ್ತೇವೆ ಎಂದು ರಾಗಾ ಭರಸವೆ ನೀಡಿದರು.
ಚುನಾವಣಾ ಬಾಂಡ್ (Electoral Bond) ಬಗ್ಗೆ ಪ್ರಧಾನಿ ಮಾತನಾಡುತ್ತಾರೆ. ಈ ಕುರಿತು ಮಾತನಾಡುವಾಗ ಅವರ ಕೈ ನಡುಗುತ್ತದೆ. ಇದೊಂದು ದೊಡ್ಡ ಹಗರಣವಾಗಿದೆ. ಎಲ್ಲಾ ಮಾಹಿತಿಯನ್ನ ನಿಗೂಢವಾಗಿ ಇಟ್ಟಿದ್ದಾರೆ. ಕೋರ್ಟ್ ಇವರಿಗೆ ಛೀಮಾರಿ ಹಾಕಿದೆ. ಮಾಹಿತಿ ಬಹಿರಂಗ ಪಡಿಸಬೇಕು ಅಂತ ಹೇಳಿದೆ ಎಂದರು. ಇದನ್ನೂ ಓದಿ: 9 ವರ್ಷದ ಬಾಲಕಿಯನ್ನು ಅಪಹರಿಸಿ ಆಸ್ತಿ ಬರೆಸಿಕೊಂಡಿದ್ದಕ್ಕೆ ಡಿಕೆಶಿ ಕೈ ಬಲಪಡಿಸಬೇಕಾ?: ಹೆಚ್‍ಡಿಡಿ ವಾಗ್ದಾಳಿ
ಬಿಜೆಪಿ ಒಂದು ಕಡೆಯಾದರೆ ಬಿಜೆಪಿ ಬಿ ಟೀಂ ಮತ್ತೊಂದು ಕಡೆ. ಈಗ ಎರಡು ಸೇರಿ ಒಂದಾಗಿವೆ ಅವರನ್ನ ಸೋಲಿಸಬೇಕು. ಎಲ್ಲಾ ನಮ್ಮ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು. ಪಕ್ಷದ ಸಿಪಾಯಿಗಳಿಂದ ನಮಗೆ ಬೆಂಬಲ ನೀಡಬೇಕು ಎಂದು ರಾಗಾ ಮನವಿ ಮಾಡಿಕೊಂಡರು.