ಬೆಂಗಳೂರು: ಲೋಕಸಭಾ ಚುನಾವಣೆ (Loksabha Elections 2024) ನಿಮಿತ್ತ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಮತ್ತು ಸೋಮವಾರ ಕರ್ನಾಟಕದಲ್ಲಿ ಮತ್ತೆ ಪ್ರವಾಸ ಮಾಡಲಿದ್ದಾರೆ. ಒಟ್ಟು 2 ದಿನಗಳ ಕಾಲ ಪ್ರಧಾನಿ ಮೋದಿ ರಾಜ್ಯದಲ್ಲಿ ಪ್ರಚಾರ ಮಾಡಲಿದ್ದು, ಈ ವೇಳೆ ಐದು ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಾಳೆ, ನಾಡಿದ್ದು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಧಾನಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.
Advertisement
ರಾಜ್ಯದಲ್ಲಿ ಸಂಚರಿಸಲಿರುವ ನರೇಂದ್ರ ಮೋದಿ ಉತ್ತರ ಕರ್ನಾಟಕದಲ್ಲಿ ಬಿಜೆಪಿ (BJP) ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ನಾಳೆ ದಾವಣಗೆರೆ, ಉತ್ತರ ಕನ್ನಡ ಮತ್ತು ಬೆಳಗಾವಿಯಲ್ಲಿ ಬಹಿರಂಗ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಂದು ಬೆಳಗಾವಿಯಲ್ಲಿ ವಾಸ್ತವ್ಯ ಹೂಡಲಿದ್ದು, ಮರು ದಿನ ಕಲಬುರಗಿ, ಬಳ್ಳಾರಿ, ರಾಯಚೂರು, ಕೊಪ್ಪಳದಲ್ಲಿ ಆಯೋಜಿಸುವ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲೇ ಅತಿ ಹೆಚ್ಚು – ಯಾವ ಕ್ಷೇತ್ರದಲ್ಲಿ ಎಷ್ಟು ವೋಟಿಂಗ್?
Advertisement
Advertisement
ಎರಡನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಎರಡು ದಿನಗಳಲ್ಲಿ ಆ ಕ್ಷೇತ್ರಗಳ ಅಭ್ಯರ್ಥಿಗಳ ಪರ 6 ರ್ಯಾಲಿ ನಡೆಸಲಿದ್ದಾರೆ. ಮೋದಿಯ ಎರಡು ದಿನದ ಪ್ರಚಾರ ರಾಜ್ಯ ನಾಯಕರಲ್ಲಿ ಶಕ್ತಿ ತುಂಬಲಿದೆ. ಮೋದಿ ಆಗಮನ ಹಿನ್ನೆಲೆಯಲ್ಲಿ ಕೇಸರಿ ಕಲಿಗಳಲ್ಲಿ ರಣೋತ್ಸಾಹ ತುಂಬಿದೆ.
Advertisement
ಮೋದಿ ಕಾರ್ಯಕ್ರಮ ಎಲ್ಲಿಲ್ಲಿ..?
ಏಪ್ರಿಲ್ 28:
* ಬೆಳಗಾವಿ ಸಮಾವೇಶ (ಬೆಳಗ್ಗೆ 11 ಗಂಟೆಗೆ)
* ಶಿರಸಿಯಲ್ಲಿ ಸಮಾವೇಶ (ಮಧ್ಯಾಹ್ನ 01 ಗಂಟೆಗೆ)
* ದಾವಣಗೆರೆ ಸಮಾವೇಶ (ಮಧ್ಯಾಹ್ನ 03 ಗಂಟೆಗೆ)
* ಹೊಸಪೇಟೆ ಸಮಾವೇಶ (ಸಂಜೆ 5 ಗಂಟೆಗೆ)
ಏಪ್ರಿಲ್ 29
* ಬಾಗಲಕೋಟೆ ಸಮಾವೇಶ (ಮಧ್ಯಾಹ್ನ 12.15 ಗಂಟೆಗೆ)
ಮೋದಿ ಅಲೆ+ ಅಭಿವೃದ್ಧಿ+ದೋಸ್ತಿ ಪ್ರಭಾವಗಳೇ ಈ ಭಾಗದಲ್ಲೂ ಬೂಸ್ಟ್ ಆಗಲಿದೆ. ಪಂಚ ಸಮಾವೇಶಗಳಲ್ಲೂ ರಾಜ್ಯ ಕಾಂಗ್ರೆಸ್ ವೈಫಲ್ಯಗಳೇ ಮೋದಿ ಬ್ರಹ್ಮಾಸ್ತ್ರಗಳಾಗಿವೆ. ಬೆಳಗಾವಿಯಲ್ಲಿ ಮೋದಿ ಒಂದು ದಿನ ವಾಸ್ತವ್ಯ ಹೂಡುವ ಮೂಲಕ ಇಲ್ಲಿಂದಲೇ ಉತ್ತರ ಕರ್ನಾಟಕ ಭಾಗದ ಚುನಾವಣೆ ರಣತಂತ್ರ ಹೆಣೆಯಲಿದ್ದಾರೆ. ಈ ಭಾಗದ ಲೋಕಸಭಾ ಕ್ಷೇತ್ರಗಳ ಚುನಾವಣಾ ರಣಕಹಳೆ ಮೊಳಗಿಸಲು ಮೋದಿ ಮಾಸ್ಟರ್ ಪ್ಲಾನ್ ಮಾಡಲಿದ್ದಾರೆ.. ಬಿಜೆಪಿಯ ಭದ್ರಕೋಟೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಿಸಲು ಗೆಲುವಿನ ಯಾತ್ರೆ ಮುಂದುವರಿಸಲಿದ್ದಾರೆ.