ವಿಭಿನ್ನವಾಗಿ ಚುನಾವಣಾ ಪ್ರಚಾರಕ್ಕಿಳಿದ ಪದ್ಮಶ್ರೀ ಪುರಸ್ಕೃತ ಸ್ವತಂತ್ರ ಅಭ್ಯರ್ಥಿ!

Public TV
2 Min Read
S DAMODARAN 1

ಚೆನ್ನೈ: ಲೋಕಸಭಾ ಚುನಾವಣಾ (Loksabha Elections 2024) ದಿನ ಸಮೀಪಿಸುತ್ತಿದ್ದಂತೆಯೇ ಚುನಾವಣಾ ಪ್ರಚಾರ ಕಾರ್ಯಗಳು ಭರಿಂದ ಸಾಗುತ್ತಿವೆ. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ವಿಭಿನ್ನ ರೀತಿಯಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಅಂತೆಯೇ ತಿರುಚ್ಚಿಯ (Tiruchirappalli Lok Sabha constituency)  ಸ್ವತಂತ್ರ ಅಭ್ಯರ್ಥಿ, ಪದ್ಮ ಶ್ರೀ ಪುರಸ್ಕೃತರೊಬ್ಬರು ವಿಶೇಷವಾಗಿ ಮತಯಾಚನೆ ಮಾಡಿ ಗಮನಸೆಳೆದಿದ್ದಾರೆ.

S DAMODARAN 2

ತಿರುಚಿರಾಪಳ್ಳಿ (Tiruchirappalli) ಮೂಲದ 62 ವರ್ಷದ ಎಸ್ ದಾಮೋದರನ್ (Padma Shri Awardee S Damodaran) ಅವರು ಈ ಬಾರಿಯ ಚುನಾವಣೆಯಲ್ಲಿ ಗ್ಯಾಸ್ ಸ್ಟೌವ್ ಚಿಹ್ನೆಯಡಿ ಸ್ಪರ್ಧಿಸುತ್ತಿದ್ದಾರೆ. ಇದೀಗ ಇವರ ಚುನಾವಣಾ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ನಗರದ ಗಾಂಧಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಗಾರರೊಂದಿಗೆ ಸಂವಾದ ನಡೆಸಿ, ಹೂವು ಮತ್ತು ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಇದನ್ನೂ ಓದಿ: ಚಪ್ಪಲಿ ಹಾರ ಹಾಕಿಕೊಂಡು ಮತಯಾಚನೆ ಮಾಡುತ್ತಿರೋ ಲೋಕಸಭಾ ಅಭ್ಯರ್ಥಿ!

ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಾನು ತಿರುಚ್ಚಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕಿಳಿದಿದ್ದೇನೆ. ತಿರುಚ್ಚಿ ನಗರಕ್ಕೆ ಸೇರಿರುವ ನಾನು ಮಣ್ಣಿನ ಮಗ. ನೈರ್ಮಲ್ಯ ಕೇಂದ್ರದಲ್ಲಿ ಸ್ವಯಂಸೇವಕನಾಗಿ 40 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದೇನೆ. 21 ವರ್ಷದಲ್ಲಿಯೇ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದು, ಈಗ ನನಗೆ 62 ವರ್ಷ. 60 ನೇ ವಯಸ್ಸಿನಲ್ಲಿ ನೈರ್ಮಲ್ಯ ಕ್ಷೇತ್ರದಲ್ಲಿ ನನ್ನ ಕೆಲಸಕ್ಕಾಗಿ ಅಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ನಾನು ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕಾರ ಮಾಡಿದ್ದೇನೆ ಎಂದು ಹೇಳಿದರು.

ತಮ್ಮ ವಿಶಿಷ್ಟ ಪ್ರಚಾರದ ಬಗ್ಗೆ ಮಾತನಾಡಿದ ಅವರು, ಇಂದು ನಾನು ನನ್ನ ಸಂಸದೀಯ ಕ್ಷೇತ್ರಕ್ಕೆ ಒಳಪಡುವ ಗಾಂಧಿ ಮಾರ್ಕೆಟ್ ಪ್ರದೇಶದಲ್ಲಿ ನನ್ನ ಪ್ರಚಾರವನ್ನು ಪ್ರಾರಂಭಿಸಿದ್ದೇನೆ, ನಾನು ಹೋದಲ್ಲೆಲ್ಲಾ ನನಗೆ ಅದ್ಭುತ ಸ್ವಾಗತ ಸಿಗುತ್ತಿದೆ. ಈ ಚುನಾವಣೆಯಲ್ಲಿ ಗೆದ್ದರೆ ಜನರಿಗಾಗಿ ಕೆಲವೊಂದು ಯೋಜನೆಗಳನ್ನು ಹಾಕಿಕೊಂಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಬಾಲಕಿಯಿಂದ ವಿನೂತನವಾಗಿ ಮತದಾನ ಜಾಗೃತಿ- ಚುನಾವಣಾ ಆಯೋಗ ಪ್ರಶಂಸೆ

S DAMODARAN 3

ಇದುವರೆಗೆ ನಾನು 9 ಪ್ರಧಾನಿಗಳನ್ನು ಕಂಡಿದ್ದೇನೆ. ನಾನು ಎಲ್ಲಾ ಕೇಂದ್ರ ಪ್ರಾಯೋಜಿತ ಗ್ರಾಮೀಣ ನೈರ್ಮಲ್ಯ ಕಾರ್ಯಕ್ರಮಗಳ ಅಡಿಯಲ್ಲಿ ಕೆಲಸ ಮಾಡಿದ್ದೇನೆ ಮತ್ತು ಪ್ರತಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಿದ್ದೇನೆ ಎಂದು ತಿಳಿಸಿದರು. ಎಸ್ ದಾಮೋದರನ್ ಅವರಿಗೆ ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

Share This Article