ಬೆಂಗಳೂರು: ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ (Loksabha Elections 2024) ಮತದಾನ ಶುಕ್ರವಾರವಷ್ಟೇ ಮುಕ್ತಾಯ ಆಗಿದೆ. ಚುನಾವಣೆ ಘೋಷಣೆ ಆದಾಗಿಂದ ಬೆಂಗಳೂರಿನಲ್ಲಿ ಕುರುಡು ಕಾಂಚಾಣದ ಸದ್ದು ಜೋರಾಗಿದೆ. ಬೆಂಗಳೂರಿನಲ್ಲಿ ಇದುವರೆಗೂ ಸೀಜ್ ಆಗಿರೋ ಚಿನ್ನ, ಬೆಳ್ಳಿ ಹಾಗೂ ಹಣದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಲೋಕಸಭಾ ಚುನಾವಣೆ ಘೋಷಣೆ ಆದ ಬಳಿಕ ಬೆಂಗಳೂರಿನಲ್ಲಿ ಚುನಾವಣಾ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆದಿದೆ. ಅಕ್ರಮವಾಗಿ, ಹಣ, ಚಿನ್ನ, ಡ್ರಗ್ಸ್ ಸಾಗಾಟ ಜೋರಾಗಿ ನಡೆದಿದೆ. ಮೊದಲ ಹಂತದಲ್ಲಿ ಬೆಂಗಳೂರಿನಲ್ಲೂ ಚುನಾವಣೆ ಮುಕ್ತಾಯ ಆಗಿದ್ದು, ಕೋಟಿ ಕೋಟಿ ಮೌಲ್ಯದ ಚಿನ್ನ, ಬೆಳ್ಳಿಯನ್ನ ವಶಪಡಿಸಿಕೊಳ್ಳಲಾಗಿದೆ
ಬೆಂಗಳೂರಿನಲ್ಲಿ ಕುರುಡು ಕಾಂಚಣ:
* 11.85 ಕೋಟಿ ಹಣ ಸೀಜ್
* 19.22 ಕೋಟಿ ಮೌಲ್ಯದ ಮದ್ಯ ವಶ
* 7.15 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ
* 53.71 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ವಶಕ್ಕೆ
* 1.14 ಕೋಟಿ ಮೌಲ್ಯದ ಗಿಷ್ಟ್ ವಶಕ್ಕೆ
* 46.37 ಕೋಟಿ ಮೌಲ್ಯದ ವಸ್ತುಗಳು ಜಪ್ತಿ
ಹಣ ಸೀಜ್ ಅಷ್ಟೇ ಅಲ್ಲದೇ ದ್ವೇಷದ ಭಾಷಣ ಸೇರಿದಂತೆ ನೀತಿ ಸಂಹಿತೆ ಉಲ್ಲಂಘನೆಯಿಂದ ಪ್ರಕರಣಗಳು ಕೂಡ ದಾಖಲಾಗಿದೆ. ಬೆಂಗಳೂರು ಸೆಂಟ್ರಲ್- 513, ಬೆಂಗಳೂರು ಉತ್ತರ- 303, ಬೆಂಗಳೂರು ದಕ್ಷಿಣ- 373, ಬೆಂಗಳೂರು ನಗರ- 2929 ಹೀಗೆ ಒಟ್ಟು 4,118 ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ಏ. 28, 29ಕ್ಕೆ ಕರ್ನಾಟಕಕ್ಕೆ ಪ್ರಧಾನಿ- 2 ದಿನ ಉತ್ತರ ಕರ್ನಾಟಕದಲ್ಲಿ ಮತಯಾಚನೆ
ಒಟ್ಟಾರೆ ಮೊದಲ ಹಂತದ ಮತದಾನ ಮುಕ್ತಾಯ ಆಗಿದ್ದು, ಈ ಚುನಾವಣೆ ಕುರುಡು ಕಾಂಚಾಣ, ಹೆಂಡ, ಆಮಿಷಗಳಿಂದ ನಡೆದಿದೆ. ಕೇಸ್ ದಾಖಲಾಗಿ ಕೋಟಿ ಕೋಟಿ ಹಣ ಸೀಜ್ ಮಾಡಿದ್ದು, ಈ ರೀತಿ ಅಕ್ರಮದಿಂದ ಚುನಾವಣೆ ನಡೆಯುತ್ತಿದೆ. ಬೆಂಗಳೂರಿಗೆ ಕೆಟ್ಟು ಹೆಸರು ಅಂದರೆ ತಪ್ಪಿಲ್ಲ ಫಲಿತಾಂಶ ಹೇಗಿರಲಿದೆ ಕಾದು ನೋಡಬೇಕಿದೆ.