ಬೆಂಗಳೂರು: ಕಾಂಗೆಸ್‍ನವರ (Congress) ಚೊಂಬು ಜಾಹೀರಾತಿನ ಕುರಿತು ಪ್ರಸ್ತಾಪಿಸಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (HD Devegowda) ಇಂದು ತಿರುಗೇಟು ಕೊಟ್ಟರು.
ಚಿಕ್ಕಬಳ್ಳಾಪುರದಲ್ಲಿ ನಡೆದ ವಿಜಯಸಂಕಲ್ಪ ಸಮಾವೇಶದಲ್ಲಿ ಮಾತನಾಡಿ, ನಾವು ಇಂದು ಸೇರಿರೋದು ಈ ರಾಜ್ಯದಲ್ಲಿ 28 ಸ್ಥಾನಗಳನ್ನ NDA ಅಭ್ಯರ್ಥಿ ಗಳನ್ನ ಗೆಲ್ಲಿಸಬೇಕು. 10 ವರ್ಷ ಈ ದೇಶವನ್ನ ವಿಶ್ವದಲ್ಲಿ ಪ್ರಥಮ ಸ್ಥಾನಕ್ಕೆ ತೆಗೆದುಕೊಂಡು ನಮ್ಮ ಪ್ರಧಾನಿಗಳು ಹೋಗಿದ್ದಾರೆ ಎಂದರು.
ಇದೇ ವೇಳೆ ಕಾಂಗ್ರೆಸ್ ನ ಚೊಂಬು ಜಾಹೀರಾತು ಪ್ರದರ್ಶನವನ್ನು ದೇವೇಗೌಡರು ಮಾಡಿದರು. ರಾಜ್ಯದ ಮುಖ್ಯಮಂತ್ರಿಗಳು ಚೆಂಬನ್ನ ಯಾರಿಗೆ ಕೊಟ್ಟರು? ಈ ಚೊಂಬನ್ನು 10 ವರ್ಷ ಮನಮೋಹನ್ ಸಿಂಗ್ ಕೊಟ್ಟಿದ್ದು . 2004-2014 ಅವಧಿಯಲ್ಲಿ ಈ ರಾಷ್ಟ್ರ ಆಳಿದರು, ಸೋನಿಯಾ ಗಾಂಧಿ ಯುಪಿಎ ಚೇರ್ ಮನ್ ಆಗಿದ್ರು. 2 ಜಿ ಸ್ಕ್ಯಾಮ್, ಕಲ್ಲಿದ್ದಲು ಹಗರಣ ಎಷ್ಟು ಭ್ರಷ್ಟಾಚಾರ ಹೀಗೆ ಎಷ್ಟು ಭ್ರಷ್ಟಾಚಾರಗಳು ನಡೆದಿವೆ. ಈ ರಾಷ್ಟ್ರದ ಸಂಪತ್ತನ್ನ ಸೂರೆ ಮಾಡಿ ಚೆಂಬು ಬರಿದಾಗಿತ್ತು. ಆ ಬರೀ ಚೆಂಬನ್ನ ಯಾರ್ ಕೈಗೆ ಕೊಟ್ರು. ಈ ಕಾಂಗ್ರೆಸ್ ಅವರು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ರೈತರ ಸಂಪೂರ್ಣ ಸಾಲಮನ್ನಾ: ಸಿಎಂ ಘೋಷಣೆ
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಈ ರಾಷ್ಟ್ರದ ಸಂಪತ್ತು ಲೂಟಿ ಮಾಡಿ ನರೇಂದ್ರ ಮೋದಿಯವರಿಗೆ 2014 ರಲ್ಲಿ ಚೆಂಬು ಕೊಟ್ರು. ಮೋದಿ ಅವರು ಬರೀ ಚೆಂಬನ್ನ 10 ವರ್ಷ ದೇಶವನ್ನ ಆಳಿ ಅಕ್ಷಯ ಪಾತ್ರೆಯನ್ನಾಗಿ ಮಾಡುತ್ತಾರೆ ಎಂದು ಹೇಳುತ್ತಾ ಹೆಚ್‌ಡಿಡಿಯವರು ಮೋದಿ ಕೈ ಎತ್ತಿ ತೋರಿಸಿದರು.
ಎಲ್ಲಾ ವರ್ಗದ ಜನರನ್ನ ಕಾಪಾಡಿದ ಮಹಾನುಭಾವ ಮೋದಿ. ಅವರ ಬಗ್ಗೆ ಇವರು ಮಾತಾಡೋದಾ?. ಮುಖ್ಯಮಂತ್ರಿಗಳೇ, ಡಿಸಿಎಂ ಅವರೇ ಮೋದಿ ಬಗ್ಗೆ ಕ್ಷುಲ್ಲಕ ರಾಜಕಾರಣ ಮಾಡ್ತೀರಾ? ಇವತ್ತು ಜಾಹೀರಾತು ಬರೀ ಚೆಂಬು ಕೊಡ್ತಾರೆ. ನಾಚಿಕೆ ಆಗಬೇಕು ನಿಮಗೆ ಎಂದು ಕಾಂಗ್ರೆಸ್‌ನವರ ವಿರುದ್ಧ ಹೆಚ್‌ಡಿಡಿ ಗುಡುಗಿದರು.