ಹಾಸನ: ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆಯು ಇಂದು ಭರದಿಂದ ಸಾಗುತ್ತಿದೆ. ಅಂತೆಯೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (H.D Devegowda) ಕೂಡ ತಮ್ಮ ಪತ್ನಿಯ ಜೊತೆ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ.
ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 251 ರಲ್ಲಿ ದಂಪತಿ ಮತದಾನ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 9.21% ಮತದಾನ – ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ವೋಟ್
Advertisement
Advertisement
ಇದಕ್ಕೂ ಮುನ್ನ ಹೊಳೆನರಸೀಪುರ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ, ಹರದನಹಳ್ಳಿಯ ದೇವೇಶ್ವರ ದೇವಾಲಯ ಹಾಗೂ ಮಾವಿನಕೆರೆಯ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ದೇವೇಗೌಡರು ಪೂಜೆ ಸಲ್ಲಿಸಿದರು. ಮತದಾನಕ್ಕೆ ಆಗಮಿಸಿದ ವೇಳೆ ಕೂಡ ಪಡುವಲಹಿಪ್ಪೆ ಗ್ರಾಮದ ಕೋದಂಡರಾಮ ದೇವಾಲಯದಲ್ಲೂ ಪೂಜೆ ಸಲ್ಲಿಸಿದ್ದಾರೆ.
Advertisement
ಬೆಳಗ್ಗೆ 9 ಗಂಟೆಯವರೆಗೆ ಹಾಸನದಲ್ಲಿ 8.23% ಮತದಾನ ನಡೆದಿದೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಹಾಗೂ ಕಾಂಗ್ರೆಸ್‌ನಿಂದ ಶ್ರೇಯಸ್ ಪಟೇಲ್ ಅಖಾಡದಲ್ಲಿದ್ದಾರೆ.