ಕಾರವಾರ: ಮತದಾನ ಮಾಡಲು ಗಲ್ಫ್ ರಾಷ್ಟ್ರದ ಮುಸ್ಲಿಂ ಮತದಾರರಿಗೆ ಭಟ್ಕಳ ಜಮಾಯತ್ ಗಳು ಗಾಳ ಹಾಕುತ್ತಿರುವ ವಿಚಾರವೊಂದು ಬಯಲಾಗಿದೆ.
ವಿದೇಶದಲ್ಲಿ ಇರುವ ಮುಸ್ಲಿಂ ಮತದಾರರಿಗೆ ವಿಮಾನ ಟಿಕೆಟ್ ಆಫರ್ ನೀಡಲಾಗುತ್ತಿದೆ ಎಂಬ ಆರೋಪವೊಂದು ಕೇಳಿಬಂದಿದೆ. ಗಲ್ಫ್ ನಲ್ಲಿ ಭಟ್ಕಳದ 1250 ಕ್ಕೂ ಹೆಚ್ಚು ಮತದಾರರು ಇದ್ದಾರೆ. ಮುಸ್ಲಿಂ ಮತದಾನದ ಸಂಖ್ಯೆ ಹೆಚ್ಚಳವಾಗಬೇಕು. ಜಾತ್ಯಾತೀತ ವ್ಯಕ್ತಿಗಳು ಆಯ್ಕೆಯಾಗಬೇಕು ಎಂಬ ಉದ್ದೇಶದಿಂದ ಈ ಆಫರ್ ನೀಡಲಾಗುತ್ತಿದೆ ಎನ್ನಲಾಗಿದೆ.
Advertisement
ಜಮಾಯತ್ ಈಗಾಗಲೇ ಸೌದಿ ಅರೇಬಿಯಾದಲ್ಲಿ ತಮ್ಮ ಸದಸ್ಯರು ಮತದಾನ ಮಾಡುವಂತೆ ಮನವಿ ಮಾಡುವ ಮೂಲಕ ಪ್ರಕಟಣೆ ಹೊರಡಿಸಿದರು. ಇದನ್ನೂ ಓದಿ: ಮಹಿಳೆಯರು ಯಾರಾದ್ರು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ರಾಜ್ಯ ಸರ್ಕಾರವೇ ಕಾರಣ: ಹೆಚ್‌ಡಿಕೆ