ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಡಾ.ಕೆ.ಸುಧಾಕರ್ (Dr. K. Sudhakar) ಇಂದು ಸಹಸ್ರಾರು ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿ ಚಿಕ್ಕಬಳ್ಳಾಪುರ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ಡಾ.ಕೆ ಸುಧಾಕರ್ ಪರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಮತಯಾಚನೆ ಮಾಡಿದರು. ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಸಾವಿರಾರು ಮಂದಿಯನ್ನ ಉದ್ದೇಶಿಸಿ ಮಾತನಾಡಿದ ಡಾ.ಕೆ.ಸುಧಾಕರ್, ನಾನು ಎಂದೂ ರಾಜಕೀಯ ಜಾತಿ ಮಾಡಿದವನಲ್ಲ. ನನ್ನನ್ನ ಜಾತಿಯಿಂದ ನೋಡಬೇಡಿ. ಎಲ್ಲ ಸಮುದಾಯಗಳನ್ನ ನಾನು ಸಮನಾಗಿ ಕಾಣುತ್ತೇನೆ ಅಂತ ಭಗವಂತನ ಮೇಲೆ ಪ್ರಮಾಣ ಮಾಡುತ್ತೇನೆ ಎಂದರು.
Advertisement
Advertisement
ಮಣ್ಣಿನ ಮಗನಾಗಿ ನನಗೆ ಮತ್ತೊಮ್ಮೆ ಸೇವೆ ಮಾಡಲು ಅವಕಾಶ ಮಾಡಿಕೊಡಿ. ನನ್ನನ್ನು ದೂರ ಮಾಡಿದ್ದೀರಿ. 10 ತಿಂಗಳಿಂದ ನಾನು ಅಜ್ಞಾತವಾಸ ಅನುಭವಿಸಿದ್ದೇನೆ. ನಾನೇನು ತಪ್ಪು ಮಾಡಿಲ್ಲ, ನಿಮ್ಮ ಸೇವೆಯನ್ನ ಮಗನಾಗಿ ಮಾಡುತ್ತೇನೆ. ಮತ್ತೊಮ್ಮೆ ಅವಕಾಶ ಕೊಡಿ ಅಂತ ಭಾವುಕರಾಗಿ ಕಣ್ಣೀರಿಟ್ಟರು. ಇದನ್ನೂ ಓದಿ: ಸೋನು ಶ್ರೀನಿವಾಸ್ ಗೌಡಗೆ ಜಾಮೀನು
Advertisement
Advertisement
ಬಳಿಕ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಜೆಡಿಎಸ್- ಬಿಜೆಪಿ (JDS- BJP) ಮೈತ್ರಿ ನಮ್ಮ ಸ್ವಾರ್ಥಕ್ಕಾಗಿ ಅಲ್ಲ. ಸುಧಾಕರ್ ಹಾಗೂ ನಾನು ಸೇರಿ ಬಯಲುಸೀಮೆಗೆ ಶಾಶ್ವತ ನೀರಾವರಿ ಯೋಜನೆಗಳನ್ನ ತರುತ್ತೇವೆ. ಇಲ್ಲವಾದಲ್ಲಿ ನಾವು ರಾಜಕೀಯದಿಂದಲೇ ನಿವೃತ್ತಿ ಆಗುತ್ತೇವೆ ಅಂತ ಸಾವಲು ಹಾಕಿದರು.