ನವದೆಹಲಿ: ಶೀಘ್ರದಲ್ಲಿಯೇ ಕಾಂಗ್ರೆಸ್‌ನಿಂದ ಎರಡನೇ ಪಟ್ಟಿಯೂ ರಿಲೀಸ್ ಆಗಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ (Loksabha Elections 2024) ʼಕೈʼ ಅಭ್ಯರ್ಥಿಗಳ ಮೊದಲ ಪಟ್ಟಿ (Congress First List) ರಿಲೀಸ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಶಾಸಕರು, ಕಾರ್ಯಕರ್ತರ ಅಭಿಪ್ರಾಯ ಪಡೆದು ಲಿಸ್ಟ್ ಫೈನಲ್ ಮಾಡಲಾಗಿದೆ. ಮಾರ್ಚ್ 11 ರಂದು ಸ್ಕ್ರೀನಿಂಗ್ ಕಮಿಟಿ ಸಭೆ ಇದೆ. ಅಲ್ಲಿ ಮತ್ತಷ್ಟು ಹೆಸರು ಫೈನಲ್ ಆಗಲಿದೆ ಎಂದರು. ಶೀಘ್ರದಲ್ಲೇ 2ನೇ ಪಟ್ಟಿ ರಿಲೀಸ್ ಮಾಡುತ್ತೇವೆ. ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತೇವೆ ಎಂದು ಇದೇ ವೇಳೆ ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಮೊದಲ ಪಟ್ಟಿ ರಿಲೀಸ್: ಕಾಂಗ್ರೆಸ್ ಪಕ್ಷ ಅಳೆದುತೂಗಿ ಲೋಕಸಭೆ ಚುನಾವಣೆಗೆ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಕರ್ನಾಟಕ, ದೆಹಲಿ, ಛತ್ತೀಸ್‍ಘಡ, ತೆಲಂಗಾಣ, ಲಕ್ಷದ್ವೀಪ, ಕೇರಳ, ಮೇಘಾಲಯ, ತ್ರಿಪುರ, ಮಣಿಪುರ ಸೇರಿ ಹಲವು ರಾಜ್ಯಗಳಿಗೆ ಸಂಬಂಧಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ರಿಲೀಸ್ ಮಾಡಿದೆ. ಜನರಲ್ ಕೆಟಗರಿಯ 15, ಎಸ್‍ಸಿ-ಎಸ್‍ಟಿ-ಓಬಿಸಿಯ 24 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಈ ಪೈಕಿ 12 ಮಂದಿ 50 ವರ್ಷದ ಒಳಗಿನವರಾಗಿದ್ದಾರೆ. 8 ಅಭ್ಯರ್ಥಿಗಳ ವಯಸ್ಸು 60ರೊಳಗೆ ಇದೆ. 12 ಉಮೇದುವಾರರ ವಯಸ್ಸು 70 ವರ್ಷದೊಳಗಿದೆ. ಏಳು ಅಭ್ಯರ್ಥಿಗಳ ವಯಸ್ಸು 71ರಿಂದ 76 ವರ್ಷದ ಒಳಗಿದೆ. ಇದನ್ನೂ ಓದಿ: Loksabha Elections 2024- ಕಾಂಗ್ರೆಸ್‌ನಿಂದ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
Advertisement
Advertisement
ಗೊಂದಲ ಇಲ್ಲದ ರಾಜ್ಯದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಎಐಸಿಸಿ ಅಖೈರು ಮಾಡಿದೆ. ಇತ್ತೀಚಿಗಷ್ಟೇ ಕಾಂಗ್ರೆಸ್‍ಗೆ ಮರಳಿದ್ದ ಮುದ್ದಹನುಮೇಗೌಡಗೆ ಮೊದಲ ಪಟ್ಟಿಯಲ್ಲಿಯೇ ಟಿಕೆಟ್ ಸಿಕ್ಕಿದೆ. ಹಾಲಿ ಸಂಸದ ಡಿಕೆ ಸುರೇಶ್‍ಗೆ ಟಿಕೆಟ್ ಸಿಕ್ಕಿದೆ. ಮೂರು ಹೊಸ ಮುಖಗಳಿಗೆ ಕಾಂಗ್ರೆಸ್ ಮಣೆ ಹಾಕಿದೆ. ವಯನಾಡಿನಿಂದ ರಾಹುಲ್ ಗಾಂಧಿ ಮತ್ತೆ ಸ್ಪರ್ಧೆ ಮಾಡ್ತಿದ್ದಾರೆ. ರಾಹುಲ್ ಅಮೇಥಿಯಿಂದ, ಪ್ರಿಯಾಂಕಾ ವಾದ್ರಾ ರಾಯ್‍ಬರೇಲಿಯಿಂದ ಸ್ಪರ್ಧಿಸಬಹುದು ಎಂಬ ಸುದ್ದಿ ಹಬ್ಬಿದೆ. ಆದರೆ ನಿನ್ನೆಯ (ಗುರುವಾರ) ಸಭೆಯಲ್ಲಿ ಉತ್ತರಪ್ರದೇಶದ ಬಗ್ಗೆ ಚರ್ಚೆ ಆಗಿಲ್ಲ. ಹೀಗಾಗಿ ಮಾರ್ಚ್ 11ರ ಸಿಇಸಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಟಿಕೆಟ್ ಅಂತಿಗೊಳ್ಳಬಹುದು ಎಂದು ಹೇಳಲಾಗಿದೆ.