ಮಂಗಳೂರು: ಚುನಾವಣೆಯ ಹಬ್ಬವನ್ನು ನಾವು ಪ್ರೀತಿಯಿಂದ ಆಚರಿಸೋಣ ಎಂದು ದಕ್ಷಿಣ ಕನ್ನಡದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಂಗಳೂರಿನಲ್ಲಿ ಯಾವತ್ತೂ ಹೀಗೆ ಆಗೋದಿಲ್ಲ. ಸೋಲಿನ ಭೀತಿಗೆ ಒಳಗಾಗಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಬಿಜೆಪಿ ಮಿತ್ರರಲ್ಲಿ ನಾನು ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಈ ಚುನಾವಣೆಯ ಹಬ್ಬವನ್ನ ನಾವು ಪ್ರೀತಿಯಿಂದ ಆಚರಿಸೋಣ ಎಂದರು.
ಚುನಾವಣಾ ಫಲಿತಾಂಶ ಏನೇ ಬರಬಹುದು, ಇದಕ್ಕೆ ಹತಾಶರಾಗುವ ಅವಶ್ಯಕತೆ ಇಲ್ಲ. ಅನಾವಶ್ಯಕ ಕಿರಿಕ್ ಎಬ್ಬಿಸೋದು, ಮಂಗಳೂರಿನ ಹಲವೆಡೆ ಇಂತಹ ಘಟನೆ ನಡೆಯುತ್ತಿದೆ. ಸಹೋದರರೇ ನಿಮ್ಮನ್ನ ನಂಬಿದ ಕುಟುಂಬಗಳಿದೆ. ನಾಳೆ ನೀವು ಕೇಸ್ ಹಾಕಿಸಿಕೊಂಡು ಜೈಲಿಗೆ ಹೋದ್ರೆ ನಿಮ್ಮ ಕುಟುಂಬದವರನ್ನ ನೋಡಲು ಯಾರೂ ಇರೋದಿಲ್ಲ. ಸ್ವಲ್ಪ ತಾಳ್ಮೆ, ವಿನಯತೆಯಿಂದ ನಿಮ್ಮ ಕೆಲಸವನ್ನ ಶಿಸ್ತು ಬದ್ಧವಾಗಿ ಮಾಡಿ ಎಂದು ಅವರು ವಿನಂತಿಸಿಕೊಂಡರು.
ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ 11 ಗಂಟೆಯವರೆಗೆ ಒಟ್ಟು 22.34% ರಷ್ಟು ಮತದಾನವಾಗಿದ್ದರೆ, ದಕ್ಷಿಣ ಕನ್ನಡದಲ್ಲಿ 30.89% ರಷ್ಟು ಮತದಾನವಾಗಿದೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬ್ರಿಜೇಶ್ ಚೌಟಾ ಹಾಗೂ ಕಾಂಗ್ರೆಸ್‍ನಿಂದ ಪದ್ಮರಾಜ್ ರಾಮಯ್ಯ ಚುನಾವಣಾ ಅಖಾಡದಲ್ಲಿದೆ. ಇದನ್ನೂ ಓದಿ: ಮತ ಚಲಾಯಿಸಿ ರಾಮದೇವರ ಪ್ರಾಣ ಪ್ರತಿಷ್ಠೆ ಮಾಡಿದಷ್ಟೇ ಧನ್ಯತೆ: ಪೇಜಾವರ ಶ್ರೀ