ಆನೇಕಲ್: ಡಿಕೆ ಬ್ರದರ್ಸ್ ವರ್ಸಸ್ ದೋಸ್ತಿ ನಾಯಕರ ಜಿದ್ದಾಜಿದ್ದಿಯಿಂದ ಬೆಂಗಳೂರು ಗ್ರಾಮಾಂತರ (Bengaluru Rural) ಕಣ ಈ ಬಾರಿ ರಣರಣ ಅಂತಿದೆ. ಆನೇಕಲ್‍ನ ಚಂದಾಪುರದಲ್ಲಿ ದೋಸ್ತಿನಾಯಕರು ಬೃಹತ್ ಸಮಾವೇಶ ನಡೆಸಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು.
ಸಮಾವೇಶದ ಬಳಿಕ ಶಾಸಕ ಮುನಿರತ್ನ (Muniratna) ಮಾತಾಡಿ, ಬಡವರ ರಕ್ತ ಹೀರಿದ ರೆಡ್ ಕಲರ್ ನಮಗೆ ಬೇಡ. ಲಕ್ಷಾಂತರ ಜನರ ಜೀವ ಉಳಿಸಿದ ವೈಟ್ ಕಲರ್ ಡಾ.ಮಂಜುನಾಥ್ ಬೇಕು ಅಂದ್ರು. ಮಾಗಡಿ ಬಾಲಕೃಷ್ಣ, ರಾಮನಗರದ ಇಕ್ಬಾಲ್ ಹುಸೇನ್ ವಿರುದ್ಧ ಕೆಂಡ ಕಾರಿದರು.
Advertisement
Advertisement
ಡಾಕ್ಟರ್ ಮಂಜುನಾಥ್ (Dr. C.N Manjunath) ಬಲಿಕಾ ಬಕ್ರಾ ಎಂಬ ಶಾಸಕ ಇಕ್ಬಾಲ್ ಹುಸೈನ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಲೀಕಾ ಬಕ್ರಾ ಅಂದ್ರೆ ಏನು ಅಂತ ಅರ್ಥ ಗೊತ್ತಿದ್ಯಾ?. ಬಲಿ ಕೊಡೋದು ಅಂದ್ರೆ ಕುರಿಯನ್ನು ಸಾಯಿಸಿದ ಹಾಗೆ. ಡಾಕ್ಟರ್ ಮಂಜುನಾಥ್ ಅವರ ಸಾಧನೆ ಬಗ್ಗೆ ನಿಮಗೆ ಅರಿವಿದೆಯಾ?. ಅವರ ಬಗ್ಗೆ ಮಾತನಾಡುವ ಮುಂಚೆ ಆಲೋಚಿಸಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಶಿವಮೊಗ್ಗ ಬಿಜೆಪಿಯಲ್ಲಿ ತಣ್ಣಗಾಗದ ಬಂಡಾಯ- ಈಶ್ವರಪ್ಪ ಮನವೊಲಿಕೆ ಯತ್ನ ವಿಫಲ
Advertisement
Advertisement
ಮತ್ತೊಂದ್ಕಡೆ, ಸಿಪಿ ಯೋಗೇಶ್ವರ್ (C.P Yogeshwar) ಮಾತಾಡಿ, ಎಲೆಕ್ಷನ್ ನಂತರ ಸರ್ಕಾರ ಇರಲ್ಲ. ಡಿಕೆ ಸುರೇಶ್ (DK Suresh) ಸೋಲಿಗೆ ಬಾಲಕೃಷ್ಣ, ಇಕ್ಬಾಲ್ ಹುಸೇನ್ ಕಾರಣ ಆಗ್ತಾರೆ ಅಂದ್ರು. ಇದಕ್ಕೂ ಮುನ್ನ ಚನ್ನಪಟ್ಟಣದಲ್ಲಿ ತಾಲೂಕು ಮಟ್ಟದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮ ನಡೆಸಿದರು. ಸಮಾವೇಶ ನಡೆಸಿ ಡಿ.ಕೆ. ಸುರೇಶ್‍ರನ್ನು ಕಿತ್ತೆಸೆಯೋದು ನಮ್ಮ ಗುರಿ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಇದನ್ನು ಸಾಧಿಸೋಣ ಅಂತ ಕರೆ ನೀಡಿದ್ರು.